For Quick Alerts
  ALLOW NOTIFICATIONS  
  For Daily Alerts

  168ನೇ ಚಿತ್ರಕ್ಕೆ ಅದೃಷ್ಟದ ಗಾಯಕರನ್ನ ಆಯ್ಕೆ ಮಾಡಿದ ರಜನಿಕಾಂತ್!

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಯಶಸ್ಸು ಸಾಧಿಸಿದೆ. ಈಗ ರಜನಿ ಮುಂದಿನ ಸಿನಿಮಾ ಕುತೂಹಲ ಹೆಚ್ಚಿಸಿದೆ.

  ಈಗಾಗಲೇ ರಜನಿಯ 168ನೇ ಚಿತ್ರ ಆರಂಭವಾಗಿದ್ದು, ಚಿತ್ರೀಕರಣ ಆರಂಭಿಸಿದೆ. ವೀರಂ, ವೇದಾಲಂ, ವಿಶ್ವಾಸಂ, ವೀವೇಗಂ ಖ್ಯಾತಿಯ ಶಿವ ನಿರ್ದೇಶನದಲ್ಲಿ ರಜನಿ ನಟಿಸುತ್ತಿದ್ದು, ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಕೀರ್ತಿ ಸುರೇಶ್ ಅಂತಹ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಶೂಟಿಂಗ್ ಆರಂಭದಲ್ಲೇ ಈ ಚಿತ್ರದ ಶೀರ್ಷಿಕೆ ಗೀತೆ ಹಾಡಲು ಗಾಯಕರನ್ನು ಅಂತಿಮ ಮಾಡಲಾಗಿದೆ. ತಲೈವಾಗೆ ಅದೃಷ್ಟದ ಗಾಯಕ ಎಂದು ಗುರುತಿಸಿಕೊಂಡಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು 168ನೇ ಚಿತ್ರದ ಟೈಟಲ್ ಹಾಡು ಹಾಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  ರಜನಿಕಾಂತ್ 'ದರ್ಬಾರ್'ಗೆ ಅದೃಷ್ಟ ತಂದ ಎಸ್.ಪಿ ಬಾಲಸುಬ್ರಹ್ಮಣ್ಯಂರಜನಿಕಾಂತ್ 'ದರ್ಬಾರ್'ಗೆ ಅದೃಷ್ಟ ತಂದ ಎಸ್.ಪಿ ಬಾಲಸುಬ್ರಹ್ಮಣ್ಯಂ

  ರಜನಿಕಾಂತ್ ಅಭಿನಯದ ಬಹುತೇಕ ಚಿತ್ರಗಳಲ್ಲಿ ಎಸ್ ಪಿ ಬಿ ಶೀರ್ಷಿಕೆ ಗೀತೆ ಹಾಡಿದ್ದಾರೆ. ದರ್ಬಾರ್ ಸಿನಿಮಾದ ಟೈಟಲ್ ಹಾಡು ಕೂಡ ಎಸ್ ಪಿ ಬಿ ಅವರೇ ಹಾಡಿದ್ದಾರೆ. ಬಾಲಸುಬ್ರಹ್ಮಣ್ಯಂ ಸಿನಿಮಾದ ಮೊದಲ ಹಾಡು ಹೇಳಿದ್ರೆ ಅದು ಪಕ್ಕಾ ಹಿಟ್ ಆಗುತ್ತೆ ಎನ್ನುವುದು ಸ್ವತಃ ರಜನಿಯ ನಂಬಿಕೆ ಕೂಡ ಹೌದು.

  ಹಾಗಾಗಿ, ರಜನಿಕಾಂತ್ ಸಿನಿಮಾ ಮಾಡುವ ನಿರ್ದೇಶಕರು ಕೂಡ ಇದೇ ಸಂಪ್ರದಾಯಕ್ಕೆ ಮುಂದಾಗ್ತಾರೆ. ವಿವೇಕ್ ಈ ಹಾಡಿಗೆ ಸಾಹಿತ್ಯ ಬರೆಯಲಿದ್ದು, ಡಿ ಇಮ್ಮಾನ್ ಸಂಗೀತ ನೀಡಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ವೇಳೆ ಈ ಸಿನಿಮಾ ತೆರೆಗೆ ಬರಲಿದೆ.

  English summary
  Superstar starrer next movie title song will sung sp balasubrahmanyam. movie directed by siva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X