Don't Miss!
- News
ದೇಶದ 1,000 ಸ್ಮಾರಕಗಳ ಖಾಸಗೀಕರಣಗೊಳಿಸಿದ ಸರ್ಕಾರ
- Sports
Ind Vs Aus Test : ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡೋದೆ ಅನುಮಾನ !
- Technology
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- Automobiles
ವಿದೇಶದಲ್ಲಿ 20 ಲಕ್ಷವಿದ್ದ ಕಾರು ಭಾರತಕ್ಕೆ ಬಂದರೆ 50 ಲಕ್ಷ ರೂ. ದುಬಾರಿಯಾಗಲು ಕಾರಣವೇನು..?
- Finance
Padma Awards 2023: ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರು ಯಾರು?
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಲೈವಾ ರಜಿನಿ ಅಭಿನಯದ ಅಣ್ಣಾತ್ತೆ ಟ್ರೇಲರ್ ಅ.27ಕ್ಕೆ ರಿಲೀಸ್
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಅಣ್ಣಾತ್ತೆ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಸಿನಿಮಾ ಆರಂಭವಾದಾಗಿನಿಂದಲೂ ರಜಿನಿಕಾಂತ್ ಅಭಿನಯದ ಸಿನಿಮಾ ಅನ್ನುವ ಕಾರಣಕ್ಕೆ ಕುತೂಹಲ ಹೆಚ್ಚಿದೆ. ಈಗಾಗಲೇ ಈ ಸಿನಿಮಾದ ಫಸ್ಟ್‌ಲುಕ್ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ರಜಿನಿ ಅವರ ಮಾಸ್‌ಲುಕ್, ರಜಿನಿ ಖಡಕ್ ಡೈಲಾಗ್‌ಗೆ ಅಭಿಮಾನಿಗಳು ಮಾರುಹೋಗಿದ್ದರು. ಇದೀಗ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗುತ್ತಿದ್ದು, ಕಣ್ತುಂಬಿಕೊಳ್ಳಲು ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ರಜಿನಿಕಾಂತ್ ಅಭಿನಯದ 168ನೇ ಸಿನಿಮಾ ಅಣ್ಣಾತ್ತೆ. ಇಂದು (oct 27) ಸಂಜೆ 6ಗಂಟೆಗೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದ್ದು, ಸಿನಿಮಾ ರಿಲೀಸ್‌ಗೂ ಮುನ್ನ ಬಿಡುಗಡೆಯಾಗುತ್ತಿರುವ ಟ್ರೈಲರ್‌ಗೆ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಅಣ್ಣಾತ್ತೆ ಸಿನಿಮಾವನ್ನು ಸಿರುಥೈ ಶಿವ ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ರಮುಖ ಭಾಗಗಳನ್ನ ಹೈದರಾಬಾದ್‌ನಲ್ಲಿ ಚಿತ್ರೀಕರಿಸಿದ್ದು, ಈಗಾಗಲೇ ಶೂಟಿಂಗ್ ಕಂಪ್ಲೀಟ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ರಿಲೀಸ್‌ಗೆ ತಯಾರಾಗಿದೆ.
ಅಂದುಕೊಂಡಂತೆ ಆಗಿದ್ದರೆ ಅಣ್ಣಾತ್ತೆ ಸಿನಿಮಾ ಈ ಹಿಂದೆಯೇ ರಿಲೀಸ್ ಆಗಬೇಕಿತ್ತು. ಆದರೆ ಶೂಟಿಂಗ್ ಸಮಯದಲ್ಲಿ ರಜಿನಿಕಾಂತ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೆಲದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಜಿನಿಕಾಂತ್ ನಂತರದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಸಿನಿಮಾ ರಿಲೀಸ್ ತಡವಾದರೂ ಈಗ ಅದ್ಧೂರಿಯಾಗಿ ಟ್ರೇಲರ್ ರಿಲೀಸ್‌ಗೆ ಮುಂದಾಗಿದೆ. ಸಿನಿಮಾದಲ್ಲಿ ರಜಿನಿಕಾಂತ್ ಲುಕ್ ಮಾಸ್ ಆಗಿದ್ದು, ಲಾಂಗ್ ಹಿಡಿದು ರೌಡಿಗಳ ವಿರುದ್ಧ ಸಮರ ಸಾರೋ ರಜಿನಿ, ಸಮಾಜದ ಸ್ವಾಸ್ಥ್ಯಕ್ಕಾಗಿ ಚಿತ್ರದಲ್ಲಿ ಹೋರಾಡುತ್ತಾರೆ.
ನವೆಂಬರ್ 4ಕ್ಕೆ ವರ್ಲ್ಡ್ ವೈಡ್ ಅಣ್ಣಾತ್ತೆ ಸಿನಿಮಾ ಬಿಡುಗಡೆಯಾಗುತ್ತಿದೆ. ,ದೀಪಾವಳಿ ಸಂಭ್ರಮಕ್ಕೆ ರಜಿನಿಕಾಂತ್ ಅಭಿಮಾನಿಗಳು ಥಿಯೇಟರ್‌ನಲ್ಲಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ರಿಲೀಸ್‌ಗು ಮುನ್ನ ಇಂದು ಟ್ರೇಲರ್ ರಿಲೀಸ್ ಮಾಡುತ್ತಿರುವ ಚಿತ್ರತಂಡ, ಮಿಸ್ ಮಾಡದೇ ಸಿನಿಮಾ ನೋಡಿ ಆದರೆ ಈಗ ಟ್ರೇಲರ್ ನೋಡಿ ಖುಷಿಪಡಿ ಎಂದು ಟ್ವೀಟ್ ಮಾಡಿದೆ.
ಅಣ್ಣಾತ್ತೆ ಸಿನಿಮಾದ ಫಸ್ಟ್ ಕಾಪಿಯನ್ನು ರಜಿನಿಕಾಂತ್ ಈಗಾಗಲೇ ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಸಿನಿಮಾ ಎಮೋಷನಲಿ ಜನರಿಗೆ ತುಂಬ ಹತ್ತಿರವಾಗುತ್ತೆ. ಚಿತ್ರದಲ್ಲಿ ಯಾವುದೇ ತರಹದ ಅಶ್ಲೀಲ ದೃಶ್ಯಗಳು ಇಲ್ಲ. ಇದು ಸಂಪೂರ್ಣ ಕೌಟುಂಬಿಕ ಚಿತ್ರ ಹೀಗಾಗಿ ಮಕ್ಕಳು ಮಹಿಳೆಯರು ಥಿಯೇಟರ್‌ಗೆ ಬಂದು ಸಿನಿಮಾ ನೋಡಬಹುದು ಎಂದು ತಿಳಿಸಿದ್ದರು. ಅಣ್ಣಾತ್ತೆ ಸಿನಿಮಾ ಸನ್ ಪಿಕ್ಚರ್ಸ್ ಬ್ಯಾನರ್‌ನಡಿ ತಯಾರಾಗಿದ್ದು, ನವೆಂಬರ್ 4ಕ್ಕೆ ವರ್ಲ್ಡ್‌ವೈಡ್ ರಿಲೀಸ್‌ಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಡಿ.ಇಮ್ಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ದೊಡ್ಡ ದೊಡ್ಡ ತಾರಾಗಣ ಇದ್ದು, ನಯನತಾರ, ಕೀರ್ತಿ ಸುರೇಶ್, ಮೀನ, ಖುಷ್ಬು ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಸಿನಿಮಾದ ಟೈಟಲ್ ಟ್ರ್ಯಾಕ್ ಕೂಡ ಇತ್ತೀಚೆಗೆ ರಿಲೀಸ್ ಆಗಿತ್ತು. ಇದರಲ್ಲಿ ರಜಿನಿ ಅವರ ವೈಟ್ ಆಂಡ್ ವೈಟ್ ಪಂಚೆ ಶರ್ಟ್, ಕನ್ನಡಕ ಧರಿಸಿ ಟ್ರೆಡಿಷನಲ್ ಲುಕ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ಈ ಹಾಡಿಗೆ ಸ್ವರ ಮಾಂತ್ರಿಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಾಗಿದ್ದರು. ಇದು ಎಸ್‌ಪಿಬಿ ಅವರ ಕೊನೆಯ ಹಾಡು ಕೂಡ ಹೌದು. ರಜಿನಿಕಾಂತ್ ಅವರ ಬಹುತೇಕ ಎಲ್ಲಾ ಸಿನಿಮಾಗಳಿಗೂ ಎಸ್‌ಪಿಬಿ ಧ್ವನಿಯಾಗುತ್ತಿದ್ದರು, ಕೊನೆಯ ಸಿನಿಮಾದ ಒಂದು ಹಾಡನ್ನು ಅವರೆ ಹಾಡಿದ್ದಾರೆ ಅನ್ನೋದು ವಿಶೇಷ.
ಈ ಹಿಂದೆ ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಹೇಳಿಕೊಂಡಿದ್ದಾಗ ಇನ್ನು ರಜಿನಿಕಾಂತ್ ಸಿನಿಮಾ ಮಾಡೊದಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ರಜಿನಿಕಾಂತ್ ಮಾತ್ರ ಸಿನಿಮಾ ನಂಟು ಬಿಟ್ಟಿಲ್ಲ, ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದು, ಅನಾರೋಗ್ಯದ ನಡುವೆಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅಣ್ಣಾತ್ತೆ ಸಿನಿಮಾದ ಬಳಿಕ ಮತ್ತೊಂದು ಸಿನಿಮಾ ರಜಿನಿಕಾಂತ್ ಕೈಯಲ್ಲಿ ಇದ್ದು, ರಜಿನಿ ಅವರ 169ನೇ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿದ್ದಾರೆ.