twitter
    For Quick Alerts
    ALLOW NOTIFICATIONS  
    For Daily Alerts

    ಪ್ರಧಾನಿ ಮೋದಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ ರಜನಿಕಾಂತ್

    |

    ಭಾರತೀಯ ಚಿತ್ರರಂಗಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ನೀಡಿರುವ ಕೊಡುಗೆ ಗೌರವಿಸಿ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.

    ರಜನಿಕಾಂತ್ ಅವರಿಗೆ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದರು.

    ರಜನಿಕಾಂತ್‌ಗೆ ದಾದಾ ಸಹೇಬ್ ಫಾಲ್ಕೆ: ಅಪಾರ ಸಂತೋಷದ ಸಂಗತಿ ಎಂದ ಪ್ರಧಾನಿ ಮೋದಿರಜನಿಕಾಂತ್‌ಗೆ ದಾದಾ ಸಹೇಬ್ ಫಾಲ್ಕೆ: ಅಪಾರ ಸಂತೋಷದ ಸಂಗತಿ ಎಂದ ಪ್ರಧಾನಿ ಮೋದಿ

    ''ತಲೈವಾ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿರುವುದು ಅಪಾರ ಸಂತೋಷದ ಸಂಗತಿ. ಅವರಿಗೆ ಅಭಿನಂದನೆಗಳು" ಎಂದು ಮೋದಿ ಟ್ವೀಟ್ ಮಾಡಿದ್ದರು.

    Rajinikanth Thank To PM Modi For Conferring Dadasaheb Phalke award

    ಮೋದಿ ಟ್ವೀಟ್‌ಗೆ ಪ್ರತಿಕ್ರಿಯಿಸಿ ಸೂಪರ್ ಸ್ಟಾರ್ ರಜನಿಕಾಂತ್ ''ಅತ್ಯಂತ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ ಮತ್ತು ನಿಮ್ಮ ಶುಭಾಶಯಗಳಿಗೆ ನಾನು ವಿನಮ್ರ. ನಿಮಗೆ ಮತ್ತು ಭಾರತದ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು'' ಎಂದಿದ್ದಾರೆ.

    ಮತ್ತೊಂದು ಟ್ವೀಟ್‌ನಲ್ಲಿ ''ನನಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿದ ಭಾರತ ಸರ್ಕಾರ, ಗೌರವಾನ್ವಿತ ಮತ್ತು ಪ್ರೀತಿಯ ನರೇಂದ್ರ ಮೋದಿ, ಪ್ರಕಾಶ್ ಜಾವಡೇಕರ್ ಮತ್ತು ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಪ್ರಾಮಾಣಿಕವಾಗಿ ಅರ್ಪಿಸುತ್ತೇನೆ. ಸರ್ವಶಕ್ತರಿಗೂ ಧನ್ಯವಾದಗಳು'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    Recommended Video

    ದಾವಣಗೆರೆಯಲ್ಲಿ ಯುವರತ್ನ ನೋಡಲು ನೂಕುನುಗ್ಗಲು:ಪೊಲೀಸರಿಂದ ಲಾಠಿ ಚಾರ್ಜ್ | Filmibeat Kannada

    ಖ್ಯಾತ ಗಾಯಕಿ ಆಶಾ ಭೋಂಸ್ಲೆ, ಶಂಕರ್ ಮಹಾದೇವನ್, ನಟ ಮೋಹನ್ ಲಾಲ್, ನಿರ್ದೇಶಕ ಸುಭಾಷ್ ಘಾಯ್ ಜ್ಯೂರಿಗಳಾಗಿದ್ದರು.

    English summary
    Super star Rajinikanth thank to PM Narendra Modi and Central Govt For Conferring Dadasaheb Phalke award.
    Thursday, April 1, 2021, 18:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X