For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಚಿತ್ರವನ್ನು ರಾಜಮೌಳಿ ನಿರ್ದೇಶಿಸುವರೇ?

  |

  ತೀರಾ ಇತ್ತೀಚಿಗೆ ಮಹಾ ಸುದ್ದಿಯೊಂದು ಸ್ಪೋಟವಾಗಿದೆ. ಅದು ರಜನಿಕಾಂತ್ ನಟನೆಯ ಚಿತ್ರಕ್ಕೆ ಸಂಬಂಧಿಸಿದ್ದು. ಬಹುತೇಕ ಎಲ್ಲಾ ಮಾಧ್ಯಮಗಳಲ್ಲೂ ಆ ಸುದ್ದಿ ಪ್ರಕಟವಾದಂತೆ 'ರಜನಿಕಾಂತ್ ಹೊಸ ಸಿನಿಮಾ ಸೆಟ್ಟೇರಲಿದೆ. ರಜನಿ ನಟನೆಯ ಬರಲಿರುವ 'ಕೊಚಡಯ್ಯಾನ್' ಚಿತ್ರದ ನಂತರ ರಜಿನಿ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ರಜನಿಕಾಂತ್ ಅವರಿಗೆ ಬರೋಬ್ಬರಿ ರು. 240 ಕೋಟಿ ಆಫರ್ ನೀಡಲಾಗಿದೆ' ಎಂಬುದು ಸುದ್ದಿ.

  ಈ ಚಿತ್ರಕ್ಕೆ ರಜನಿಕಾಂತ್ ಅವರಿಗೆ ರು. 204 ಕೋಟಿ ಸಂಭಾವನೆ ಆಫರ್ ನೀಡಿರುವವರು ನಿರ್ಮಾಪಕ ಹಂಸರಾಜ ಸಕ್ಸೇನಾ. ಅದೆಲ್ಲಾ ಸುದ್ದಿಯಾದರೂ ಆ ಚಿತ್ರದ ನಿರ್ದೇಶಕರು ಯಾರು ಎಂಬ ಬಗ್ಗೆ ಸರಿಯಾದ ಮಾಹಿತಿಯಿರಲಿಲ್ಲ. ಕೆಲವೊಂದು ಕಡೆ ನಿರ್ದೇಶಕರು ಕೆವಿ ಆನಂದ್ ಎಂದು ಉಲ್ಲೇಖಿಸಲಾಗಿದೆ. ಆದರೆ ಆ ಬಗ್ಗೆ ಪಕ್ಕಾ ಮಾಹಿತಿ ಇರಲಿಲ್ಲ. ಇದೀಗ ಸಿಕ್ಕ ಮಾಹಿತಿ ಪ್ರಕಾರ ರಜನಿಕಾಂತ್ ಅವರಿಗೆ ಆಫರ್ ನೀಡಲಾದ ಆ ಚಿತ್ರದ ನಿರ್ದೇಶಕರು 'ಈಗ' ಖ್ಯಾತಿಯ ಎಸ್ಎಸ್ ರಾಜಮೌಳಿ.

  ಬಂದ ಮಾಹಿತಿ ಆಧಾರದ ಮೇಲೆ ಹೇಳುವುದಾದರೆ ರಜಿನಿಕಾಂತ್ ಅವರಿಗೆ ಬಹುನಿರೀಕ್ಷೆಯ ಮೂಲಕ ಆಫರ್ ನೀಡಲಾಗಿರುವ ಈ ಚಿತ್ರವನ್ನು ನಿರ್ದೇಶಿಸಲಿರುವವರು ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ. ಈ ಚಿತ್ರವು ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್ ಎಂಬ ಸುದ್ದಿಯೂ ಹಬ್ಬಿದೆ. ಆದರೆ ಈ ಸುದ್ದಿ ಇನ್ನೂ ಪಕ್ಕಾ ಆಗಬೇಕಿದೆ. ಏಕೆಂದರೆ ಇತ್ತೀಚಿಗಷ್ಟೇ ಬಾಲಿವುಡ್ ನ ಓ ಮೈ ಗಾಡ್' ಚಿತ್ರ ಬಿಡುಗಡೆಯಾಗಿದೆ, ಹಣೆಬರಹ ಇನ್ನೂ ನಿರ್ಧಾರವಾಗಬೇಕಿದೆ.

  ಅಷ್ಟೇ ಅಲ್ಲ, ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ತೆಲುಗು ಸ್ಟಾರ್, 'ಮಗಧೀರ' ಖ್ಯಾತಿಯ ರಾಮ್ ಚರಣ್ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ರಜನಿಕಾಂತ್ ತಾವು ನಟಿಸುವ ಬಗ್ಗೆ ಇನ್ನೂ 'ಗ್ರೀನ್ ಸಿಗ್ನಲ್' ನೀಡಿಲ್ಲ ಎಂದಿರುವಾಗ ಮಿಕ್ಕ ಮಾಹಿತಿಗಳನ್ನು ಪಕ್ಕಾ ಎನ್ನುವುದು ಸಮಂಜಸವಲ್ಲ. ಹೀಗಾಗಿ ಈ ಚಿತ್ರವನ್ನು ರಾಜಮೌಳಿ ನಿರ್ದೇಶಿಸಲಿರುವುದು ಹಾಗೂ ಇದು ರಜನಿಕಾಂತ್ ಚಿತ್ರವಾಗಲಿರುವುದು ಸದ್ಯಕ್ಕೆ ಗಾಸಿಪ್! (ಏಜೆನ್ಸೀಸ್)

  English summary
  There is news buzz that Super Star Rajinikanth's upcoming, Rs. 240 Crore offered movie to direct by 'Eega' fame SS Rajamouli. But this news has to confirm... 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X