ಸೂಪರ್ ಸ್ಟಾರ್ ರಜನಿಕಾಂತ್ ಕಂಡಕ್ಟರ್: ಹಳೇ ಫೋಟೋ ವೈರಲ್

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನಟ ಆಗುವುದಕ್ಕೂ ಮೊದಲು ಬಸ್ ಕಂಡಕ್ಟರ್ ಆಗಿದ್ದರು. ಇಂದಿನ ಜನರೇಷನ್ ಅವರು ಈ ವಿಷಯವನ್ನು ಕೇಳಿ ಅಥವಾ ಓದಿ ತಿಳಿದಿರಬಹುದು. ಆದ್ರೆ, ಕಣ್ಣಾರೆ ನೋಡುವ ಅವಕಾಶ ಇರಲಿಲ್ಲ.

ಇದೀಗ, ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕ್ಲಿಕ್ಕಿಸಿರುವ ಹಳೇಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಬಸ್ ಎದುರುಗಡೆ ನಾಲ್ಕು ಜನ ನಿಂತಿದ್ದು, ಈ ಪೈಕಿ ಒಬ್ಬರು ರಜನಿಕಾಂತ್.

ಭಾರತೀಯ ಚಿತ್ರರಂಗ ಮಾತ್ರವಲ್ಲ ಜಗತ್ತಿನಾದ್ಯಂತ ರಜನಿಕಾಂತ್ ಅಭಿಮಾನಿಗಳು ಇದ್ದಾರೆ. ಒಂದು ಸಮಯದಲ್ಲಿ ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ರಜನಿಕಾಂತ್.

Rare pic of Rajinikanth when he was BTS Bus conductor in bangalore

ಬಸ್ ಕಂಡಕ್ಟರ್ ಆಗಿದ್ದವರು ಇಂದು ಸೂಪರ್ ಸ್ಟಾರ್ ಪಟ್ಟದಲ್ಲಿದ್ದಾರೆ ಅಂದ್ರೆ ಅದು ಅನೇಕರಿಗೆ ಸ್ಫೂರ್ತಿ. ಅಂದ್ಹಾಗೆ, ರಜನಿಕಾಂತ್ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಬೆಂಗಳೂರಿನ ಮರಾಠಿ ಕುಟುಂಬದಲ್ಲಿ ಜನಿಸಿದ್ದ ರಜನಿ, ಜೀವನಕ್ಕಾಗಿ ಕೂಲಿ, ಕಾರ್ಪೆಂಟರ್ ವೃತ್ತಿ ಮಾಡಿದ್ದಾರೆ.

ಇದಾದ ಬಳಿಕ ಬಿಟಿಎಸ್ ಬಸ್‌ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಂಡಕ್ಟರ್ ವೃತ್ತಿ ಮಾಡಬೇಕಾದರೆ ಜೊತೆ ಜೊತೆಗೆ ನಾಟಕಗಳಲ್ಲಿಯೂ ನಟಿಸುತ್ತಿದ್ದರು. ನಂತರ ಸಿನಿಮಾ ಮೇಲಿನ ಆಸ್ತಿಯಿಂದ ಮದ್ರಾಸಿಗೆ ಹೋಗಿ ನಟನೆಯಲ್ಲಿ ಡಿಪ್ಲೋಮಾ ಸಹ ಪಡೆದರು.

ಆ ನಂತರ 1975ರಲ್ಲಿ ಕೆ ಬಾಲಚಂದಿರ್ ನಿರ್ದೇಶನದ ಅಪೂರ್ವ ರಾಗಂಗಳ್ ಚಿತ್ರದ ಮೂಲಕ ಪ್ರಪ್ರಥಮ ಬಾರಿಗೆ ಸಿನಿಮಾದಲ್ಲಿ ನಟಿಸಿದರು. ಕಮಲ್ ಹಾಸನ್ ನಾಯಕರಾಗಿದ್ದ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ರಜನಿ ನಂತರ ಕನ್ನಡದಲ್ಲಿ ಸಿನಿ ಜರ್ನಿ ಆರಂಭಿಸಿದರು.

ಕನ್ನಡ, ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದರು. ದಿನಕಳೆದಂತೆ ತಮಿಳಿನಲ್ಲಿ ಶಾಶ್ವತ ನೆಲೆ ಕಂಡರು. ಸೂಪರ್ ಸ್ಟಾರ್ ಎಂಬ ಪಟ್ಟ ಸಹ ಅಲಂಕರಿಸಿದರು.

More from Filmibeat

English summary
Rare pic of Superstar Rajinikanth when he was BTS Bus conductor in bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X