For Quick Alerts
  ALLOW NOTIFICATIONS  
  For Daily Alerts

  ನಟ ಸೂರ್ಯಾ ಮುಂದಿನ ಸಿನಿಮಾಕ್ಕೆ ಕನ್ನಡತಿ ನಾಯಕಿ?

  |

  ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿರುವ 'ಸೂರರೈ ಪೊಟ್ರು' ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ಸೂರ್ಯಾ, ಇದೀಗ ಮುಂದಿನ ಸಿನಿಮಾದ ಕಡೆಗೆ ಗಮನ ಹರಿಸಿದ್ದಾರೆ.

  ಸೂರ್ಯಾ ತಮ್ಮ 40 ನೇ ಸಿನಿಮಾಕ್ಕೆ ಸಜ್ಜಾಗಿದ್ದು, ಸಿನಿಮಾವನ್ನು ಹಿಟ್ ನಿರ್ದೇಶಕ ಪಾಂಡಿರಾಜನ್ ನಿರ್ದೇಶಿಸಲಿದ್ದಾರೆ. ಸೂರ್ಯಾ-ಪಾಂಡಿರಾಜನ್ ಸಿನಿಮಾ ಮಾಡುತ್ತಿರುವುದಾಗಿ ಈಗಾಗಲೇ ಟ್ವಿಟ್ಟರ್‌ನಲ್ಲಿ ಘೋಷಿಸಲಾಗಿದೆ.

  'ಸೂರರೈ ಪೊಟ್ರು' ನೈಜತೆಗೆ ದೂರ ಎಂದವರಿಗೆ ಕ್ಯಾಪ್ಟನ್ ಗೋಪಿನಾಥ್ ಉತ್ತರ

  ಸೂರ್ಯಾ ಹೊಸ ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ಸಿನಿಮಾದಲ್ಲಿ ಕನ್ನಡದ ನಟಿಯೊಬ್ಬರು ಸೂರ್ಯಾ ಎದುರಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಸೂರ್ಯಾ 40 ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿ?

  ಸೂರ್ಯಾ 40 ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿ?

  ತೆಲುಗಿನಲ್ಲಿ ಈಗಾಗಲೇ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ, ಸೂರ್ಯಾ ಅವರ 40ನೇ ಸಿನಿಮಾಕ್ಕೆ ನಾಯಕಿ ಆಗಿರಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಶ್ಮಿಕಾ ಜೊತೆಗೆ ಮಾತುಕತೆ ಪೂರ್ತಿ ಆಗಿದ್ದು, ಅಧಿಕೃತ ಹೇಳಿಕೆಯಷ್ಟೆ ಬಾಕಿ ಉಳಿದಿದೆ.

  ಸೂರ್ಯಾ ಸಹೋದರ ಕಾರ್ತಿ ಜೊತೆ ನಟಿಸಿದ್ದಾರೆ ರಶ್ಮಿಕಾ

  ಸೂರ್ಯಾ ಸಹೋದರ ಕಾರ್ತಿ ಜೊತೆ ನಟಿಸಿದ್ದಾರೆ ರಶ್ಮಿಕಾ

  ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಸೂರ್ಯಾ ಸಹೋದರ ಕಾರ್ತಿ ನಟನೆಯ 'ಸುಲ್ತಾನ್' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸುಲ್ತಾನ್, ರಶ್ಮಿಕಾ ನಟನೆಯ ಮೊದಲ ತಮಿಳು ಸಿನಿಮಾ. ಈ ಸಿನಿಮಾದಿಂದಲೇ ರಶ್ಮಿಕಾಗೆ ಸೂರ್ಯಾ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ ಎನ್ನಲಾಗುತ್ತಿದೆ.

  ಚಿರಂಜೀವಿ ಸೊಸೆ ಜೊತೆ ಸೇರಿ ಕ್ಯಾರೆಟ್ ಹಲ್ವಾ ಮಾಡಿದ ರಶ್ಮಿಕಾ ಮಂದಣ್ಣ

  ಯಾರ ಸಿನಿಮಾ ಮೊದಲು ಪ್ರಾರಂಭವಾಗಲಿದೆ?

  ಯಾರ ಸಿನಿಮಾ ಮೊದಲು ಪ್ರಾರಂಭವಾಗಲಿದೆ?

  ನಟ ಸೂರ್ಯಾ, ನಿರ್ದೇಶಕ ಗೌತಮ್ ವಾಸುದೇವ ಮೆನನ್ ಸಿನಿಮಾಕ್ಕೂ ಓಕೆ ಅಂದಿದ್ದಾರೆ. ಪಾಂಡಿರಾಜನ್ ಅಥವಾ ಗೌತಮ್ ವಾಸುದೇವ ಮೆನನ್, ಯಾರ ಸಿನಿಮಾ ಮೊದಲಿಗೆ ಪ್ರಾರಂಭವಾಗಲಿದೆ ಕಾದು ನೋಡಬೇಕಿದೆ.

  Rajinikanth ಅಭಿಮಾನಿಗಳಿಗೆ ಆತಂಕ | Filmibeat Kannada
  ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ

  ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ

  ರಶ್ಮಿಕಾ ಮಂದಣ್ಣ, ತೆಲುಗಿನ ಪುಷ್ಪಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಪೊಗರು, ತಮಿಳಿನ ಸುಲ್ತಾನ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ತೆಲುಗಿನಲ್ಲ 'ಆಡುವಾಳ್ಳು ಮೀಕು ಜೋಹಾರುಲು' ಸಿನಿಮಾದಲ್ಲಿ ನಟಿಸಬೇಕಿದೆ. ಈ ನಡುವೆ ಸೂರ್ಯಾ ಸಿನಿಮಾದಲ್ಲಿ ಸಹ ನಟಿಸಲಿದ್ದಾರೆ.

  ದೇಶದ ಗಮನ ಸೆಳೆದಿದ್ದಾರೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ

  Read more about: rashmika mandanna suriya tamil movie
  English summary
  Actress Rashmika Mandanna may act in Suriya's 40th movie. She already acted in Suriya's brother Karthi's movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X