For Quick Alerts
  ALLOW NOTIFICATIONS  
  For Daily Alerts

  "ರಿಷಬ್ ಶೆಟ್ಟಿನ ನೋಡಿ ಮಣಿರತ್ನಂ ಕಲಿಬೇಕು": 'ಕಾಂತಾರ' ಚಿತ್ರಕ್ಕೆ ತಮಿಳು ಪ್ರೇಕ್ಷಕನ ರಿವ್ಯೂ ವೈರಲ್

  |

  ದಿನದಿಂದ ದಿನಕ್ಕೆ 'ಕಾಂತಾರ' ಆರ್ಭಟ ಹೆಚ್ಚಾಗುತ್ತಲೇ ಇದೆ. ಸಿನಿಮಾ ನೋಡಿದವರು ಬೆರಗಾಗುತ್ತಲೇ ಇದ್ದಾರೆ. ಅಬ್ಬಬ್ಬಾ ಅಂದೆಂಥಾ ಸಿನಿಮಾ, ಅದೆಂಥಾ ಅಭಿನಯ ಎಂದು ಕೊಂಡಾಡುತ್ತಿದ್ದಾರೆ. ಪರಭಾಷಾ ಸ್ಟಾರ್‌ಗಳು, ಫಿಲ್ಮ್ ಮೇಕರ್ಸ್ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ಕನ್ನಡದಲ್ಲೇ ಸಿನಿಮಾ ಹೊರರಾಜ್ಯಗಳಲ್ಲೂ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಕಾಂತಾರ' ಎದುರು 'ಪೊನ್ನಿಯಿನ್ ಸೆಲ್ವನ್' ಕೂಡ ವೇಸ್ಟ್ ಎಂದು ತಮಿಳು ಪ್ರೇಕ್ಷಕರೊಬ್ಬರು ಹೇಳಿರುವ ವಿಡಿಯೋ ವೈರಲ್ ಆಗಿದೆ.

  ಕಾಂತಾರ..ಕಾಂತಾರ..ಕಾಂತಾರ.. ಸದ್ಯ ಭಾರತೀಯ ಚಿತ್ರರಂಗದಲ್ಲೀಗ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರೋ ಸಿನಿಮಾದ್ದೇ ಟಾಕು. ಅದ್ಯಾವಮಟ್ಟಿಗೆ ಸಿನಿಮಾ ಪ್ರೇಕ್ಷಕರನ್ನು ಆವರಿಸಿಕೊಂಡಿದೆ ಎಂದರೆ ಕೆಲವರಿಗೆ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅಷ್ಟರಮಟ್ಟಿಗೆ ಸಿನಿಮಾ ನೋಡುಗರ ಪರಿಣಾಮ ಬೀರಿದೆ. ರಾಣಾ ದಗ್ಗುಬಾಟಿ, ಧನುಷ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾ ನೋಡಿ ಬಹುಪರಾಕ್ ಹೇಳುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲೂ 'ಕಾಂತಾರ' ಸಿನಿಮಾ ಸದ್ದು ಮಾಡ್ತಿದೆ. ಹಿಂದಿ ಯುಟ್ಯೂಬರ್ ಒಬ್ಬ ಸಿನಿಮಾ ನೋಡಿದ ಮೇಲೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದುಬಿಟ್ಟಿದ್ದಾರೆ.

  ಮೊದಲ ದಿನ 'ಕಾಂತಾರ' ಹಿಂದಿ ವರ್ಷನ್ ಕಲೆಕ್ಷನ್ ಎಷ್ಟು? ಹಿಂದಿ ಬೆಲ್ಟ್‌ನಲ್ಲಿ ರೆಸ್ಪಾನ್ಸ್ ಹೇಗಿದೆ?ಮೊದಲ ದಿನ 'ಕಾಂತಾರ' ಹಿಂದಿ ವರ್ಷನ್ ಕಲೆಕ್ಷನ್ ಎಷ್ಟು? ಹಿಂದಿ ಬೆಲ್ಟ್‌ನಲ್ಲಿ ರೆಸ್ಪಾನ್ಸ್ ಹೇಗಿದೆ?

  ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳು ರಿಲೀಸ್ ಆಗುವುದೇ ಕಷ್ಟ ಎನ್ನುವ ಕಾಲವೊಂದಿತ್ತು. ಆದರೆ 'ಕಾಂತಾರ' ಚಿತ್ರವನ್ನು ತಮಿಳು ಪ್ರೇಕ್ಷಕರು ಕನ್ನಡದಲ್ಲೇ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್ ನೋಡಿ ಕಳೆದು ಹೋಗಿದ್ದಾರೆ. ಸಿನಿಮಾ ನೋಡಿ ಬಂದ ತಮಿಳು ಪ್ರೇಕ್ಷಕರೊಬ್ಬರು ಏನು ಹೇಳಿದ್ದಾರೆ ಎನ್ನುವುದನ್ನು ಮುಂದೆ ಓದಿ.

  ರಿಷಬ್ ಮುಂದೆ ಮಣಿರತ್ನಂ ಪಾಪ

  ರಿಷಬ್ ಮುಂದೆ ಮಣಿರತ್ನಂ ಪಾಪ

  'ಕಾಂತಾರ' ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ನಿಧಾನವಾಗಿ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗ್ತಿದೆ. ತಮಿಳು ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತಮಿಳು ಪ್ರೇಕ್ಷಕರೊಬ್ಬರು ರಿಷಬ್ ಶೆಟ್ಟಿ ಮುಂದೆ ಮಣಿರತ್ನಂ ಪಾಪ ಎಂದಿದ್ದಾರೆ. "ಕಾಂತಾರ ಮುಂದೆ ಮಣಿರತ್ನಂ ಪಾಪ. ಅಷ್ಟು ಎಮೋಷನ್, ಅಷ್ಟು ಅದ್ಭುತವಾಗಿದೆ. ಚಿತ್ರದಲ್ಲಿರುವ ಪ್ರತಿಯೊಂದು ಅಂಶಕ್ಕೂ ಜೀವಬಂದು ನಟಿಸಿದೆ. 'ಪೊನ್ನಿಯಿನ್ ಸೆಲ್ವನ್' ಬಜೆಟ್‌ನಲ್ಲಿ 5% ಬಜೆಟ್‌ ಸಿನಿಮಾ ಇದು. ಆದರೆ ಸಿನಿಮಾ ಮಾತ್ರ ಅದ್ಭುತ".

  ಕಾಂತಾರ ಸಂದರ್ಶನದ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಹಿಂದಿ ನಿರೂಪಕ ಯಾರು? ಗರ್ಲ್‌ಫ್ರೆಂಡ್‌ಗಿಂತ ಹೆಚ್ಚಂತೆ!ಕಾಂತಾರ ಸಂದರ್ಶನದ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಹಿಂದಿ ನಿರೂಪಕ ಯಾರು? ಗರ್ಲ್‌ಫ್ರೆಂಡ್‌ಗಿಂತ ಹೆಚ್ಚಂತೆ!

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ವೇಸ್ಟ್

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ವೇಸ್ಟ್

  "ಕಲ್ಕಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಅದ್ಭುತ, ಅತ್ಯದ್ಭುತ. ಆದರೆ ಸಿನಿಮಾ ಮಾತ್ರ ವೇಸ್ಟ್. 'ಕಾಂತಾರ' ಹಿಮಾಲಯ ಪರ್ವತ. ಅದರ ಮುಂದೆ ಪೊನ್ನಿಯಿನ್ ಸೆಲ್ವನ್ ಪಾಪ. ಎರಡನ್ನೂ ಹೋಲಿಸಲು ಸಾಧ್ಯವಿಲ್ಲ. ಯಾವ ಧರ್ಮವೂ ಇಲ್ಲ. ನಮ್ಮನ್ನು ಮೀರಿದ ಶಕ್ತಿಯೊಂದು ಈ ಪ್ರಪಂಚದಲ್ಲಿ ಇದೆ. ಇದನ್ನು ನೋಡಿ ಎಲ್ಲರೂ ಕಲಿಬೇಕು."

  ರಿಷಬ್ ನೋಡಿ ಮಣಿರತ್ನಂ ಕಲಿಬೇಕು

  ರಿಷಬ್ ನೋಡಿ ಮಣಿರತ್ನಂ ಕಲಿಬೇಕು

  "ಮಣಿರತ್ನಂ 'ರೋಜಾ' ಸಿನಿಮಾ ನೋಡಿ ಹೆಮ್ಮೆ ಆಗಿತ್ತು. ಆದರೆ ಈ ಸಿನಿಮಾ ನೋಡಿದ ಮೇಲೆ ಮಣಿರತ್ನಂ ಪಾಪ ಎನ್ನಿಸ್ತಾರೆ. ರಿಷಬ್ ಶೆಟ್ಟಿ ಕೈ ಹಿಡಿದು ಮಣಿರತ್ನಂ ನಡೀಬೇಕು. ಭಾಷೆ ಅರ್ಥವಾಗದೆಯೇ ನನ್ನಿಂದ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಭಾಷೆ ಅರ್ಥವಾದವರು ದೇವರು ಮೈ ಮೇಲೆ ಬಂದು ಆಡಿರುತ್ತಾರೆ. ಸಿನಿಮಾ ಬಹಳ ಚೆನ್ನಾಗಿದೆ. ಮಾತು ಬರುತ್ತಿಲ್ಲ. ಇನ್ನು ನಾನು ಅದೇ ಗುಂಗಿನಲ್ಲಿ ಇದ್ದೀನಿ.

  ಲೈಫಲ್ಲಿ ಫಸ್ಟ್ ಟೈಂ ಕನ್ನಡ ಚಿತ್ರ ನೋಡಿದ್ದು

  ಲೈಫಲ್ಲಿ ಫಸ್ಟ್ ಟೈಂ ಕನ್ನಡ ಚಿತ್ರ ನೋಡಿದ್ದು

  "ಆ ಮಣ್ಣು, ನೆಲ, ಜನರನ್ನು ಪ್ರೀತಿಸಿದ್ದಾರೆ. ಅದಕ್ಕೆ ಸಿನಿಮಾ ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ. ಲೈಫ್‌ ಅಲ್ಲಿ ಮೊದಲ ಬಾರಿ ಕನ್ನಡ ಸಿನಿಮಾ ನೋಡ್ದೆ. ಸಾಟಿಯಿಲ್ಲದ ನಿರ್ದೇಶನ, ಸಾಟಿಯಿಲ್ಲದ ನಟನೆ, ಪ್ರತಿಯೊಬ್ಬರು, ಗಿಡ, ಮರ, ರೆಂಬೆ ಕೊಂಬೆ ಎಲ್ಲವೂ ನಟಿಸುವಂತೆ ಮಾಡಿದ್ದಾರೆ. ಸೌಂಡ್‌ ಎಫೆಕ್ಟ್, ಸಿನಿಮಾಟೋಗ್ರಫಿ ಎಲ್ಲವೂ ಅದ್ಭುತ. ಮತ್ತೆ ನೋಡ್ತಿನಿ. ಫ್ಯಾಮಿಲಿ ಜೊತೆ ನೋಡ್ತೀನಿ. ಮಕ್ಕಳನ್ನು ಕರ್ಕೊಂಡ್ ಬರ್ತೀನಿ" ಎಂದು ತಮಿಳು ಪ್ರೇಕ್ಷಕರೊಬ್ಬರು ಹೇಳಿದ್ದಾರೆ.

  English summary
  Tamil Audience says Rishab Shetty's Kantara Bigger than Maniratnam Directed Ponniyin Selvan. Know More.
  Friday, October 14, 2022, 14:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X