Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆ ನಟನೊಂದಿಗೆ ನಟಿಸಬೇಕೆಂಬ ಆಸೆ ಇತ್ತು ಎಂದ ಸಾಯಿ ಪಲ್ಲವಿ: ಯಾರು ಆ ನಟ?
ನಟಿ ಸಾಯಿ ಪಲ್ಲವಿ ಹಲವು ಕಾರಣಗಳಿಗೆ ತನ್ನ ಸಮಕಾಲೀನ ನಟಿಯರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ. ಸಾಯಿ ಪಲ್ಲವಿ, ಜಾಹೀರಾತುಗಳಲ್ಲಿ ನಟಿಸುವುದಿಲ್ಲ, ಕಮರ್ಷಿಯಲ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ, ಟಾಕ್ ಶೋ ಗಳಿಗೆ ಬರುವುದಿಲ್ಲ, ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಿಲ್ಲ ಹೀಗೆ ಅನೇಕ ನಿಯಮಗಳನ್ನು ಅವರು ಪಾಲಿಸುತ್ತಾರೆ.
ಮಾಧ್ಯಮಗಳ ಕೈಗೂ ಸಹ ಬಹಳ ಅಪರೂಪವಾಗಿ ಸಿಕ್ಕುತ್ತಾರೆ ನಟಿ ಸಾಯಿ ಪಲ್ಲವಿ. ಮಾಧ್ಯಮಗಳಿಗೆ ಸಂದರ್ಶನ ನೀಡಿದರೂ ಸಹ ಮಾತನಾಡುವುದು ಕಡಿಮೆಯೇ. ಇತ್ತೀಚೆಗೆ, ಬಾಲಿವುಡ್ ಸುದ್ದಿಗಳನ್ನು ಹೆಚ್ಚಾಗಿ ವರದಿ ಮಾಡುವ ಪತ್ರಿಕೆಯೊಂದು ಸಾಯಿ ಪಲ್ಲವಿಯನ್ನು ಸಂದರ್ಶನ ಮಾಡಿದೆ, ಈ ಸಂದರ್ಶನದಲ್ಲಿ ಕೆಲವು ವಿಷಯ ಮಾತನಾಡಿದ್ದಾರೆ ಸಾಯಿ ಪಲ್ಲವಿ.
'ಶ್ಯಾಮ್ ಸಿಂಗ್ ರಾಯ್'ಗಾಗಿ ಒಂದಾದ ಸಾಯಿ ಪಲ್ಲವಿ ಮತ್ತು ನಾನಿ
ಸಂದರ್ಶನದಲ್ಲಿ, ತೆಲುಗಿನ ಖ್ಯಾತ ನಟ ಮಹೇಶ್ ಬಾಬು, ಕೊರೊನಾ ಕಲಿಸಿದ ಪಾಠಗಳು, ಮುಂಬರುವ ಸಿನಿಮಾಗಳು ಇನ್ನೂ ಅನೇಕ ವಿಷಯ ಮಾತನಾಡಿದ್ದಾರೆ. ತಾವು ಜೊತೆಯಾಗಿ ನಟಿಸಬೇಕು ಎಂದು ಆಸೆ ಪಟ್ಟಿದ್ದ ನಟರೊಬ್ಬರ ಬಗ್ಗೆಯೂ ಹೇಳಿದ್ದಾರೆ ಸಾಯಿ ಪಲ್ಲವಿ.
ಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿ

ಆ ನಟನೊಂದಿಗೆ ನಟಿಸುವ ಆಸೆಯಿತ್ತು: ಸಾಯಿ ಪಲ್ಲವಿ
ಕೆಲ ತಿಂಗಳ ಹಿಂದಷ್ಟೆ ಕಾಲವಾದ ನಟ ಇರ್ಫಾನ್ ಖಾನ್ ಜೊತೆಗೆ ನಟಿಸಬೇಕು ಎಂದು ಬಹಳ ಆಸೆಯಿತ್ತಂತೆ ನಟಿ ಸಾಯಿ ಪಲ್ಲವಿಗೆ. ಆದರೆ ಆ ಆಸೆ ಈಡೇರಲಿಲ್ಲ ಎಂಬ ಬೇಸರವಿದೆ. 'ಇರ್ಫಾನ್ ಖಾನ್ ನಟನೆಯೆಂದರೆ ನನಗೆ ಬಹಳ ಇಷ್ಟ, ಅವರ ಸಿನಿಮಾಗಳು ಬಹಳ ಇಷ್ಟವಾಗುತ್ತವೆ ನನಗೆ' ಎಂದಿದ್ದಾರೆ ಸಾಯಿ ಪಲ್ಲವಿ.
ನಾಗಚೈತನ್ಯ ಜೊತೆ ಸಾಯಿ ಪಲ್ಲವಿ ಮದುವೆ ಫೋಟೋ ವೈರಲ್

ಸಖತ್ ಹ್ಯಾಂಡ್ಸಮ್ ನಟ ಮಹೇಶ್ ಬಾಬು: ಸಾಯಿ ಪಲ್ಲವಿ
ಮಹೇಶ್ ಬಾಬು ಬಗ್ಗೆಯೂ ಮಾತನಾಡಿರುವ ಸಾಯಿ ಪಲ್ಲವಿ, 'ಮಹೇಶ್ ಬಾಬು ಬಹಳ ಹ್ಯಾಂಡ್ಸಮ್ ನಟ, ಅವರ ಚಿತ್ರಗಳನ್ನು ನೋಡುವಾಗ ಜೂಮ್ ಮಾಡಿ ನೋಡುತ್ತೇನೆ. ಆತ ನಿಜವಾಗಿಯೂ ಹ್ಯಾಂಡ್ಸಮ್, ಆತನ ಚರ್ಮದ ಕಾಂತಿ ಅದ್ಭುತ, ಒಂದೂ ಕಲೆ ಸಹ ಅವರ ಮುಖದಲ್ಲಿಲ್ಲ' ಎಂದಿದ್ದಾರೆ ಸಾಯಿ ಪಲ್ಲವಿ.

ನಾನು ಇನ್ನಷ್ಟು ಒಳ್ಳೆಯ ವ್ಯಕ್ತಿಯಾಗಬೇಕು: ಸಾಯಿ ಪಲ್ಲವಿ
ಕೊರೊನಾ ಕಲಿಸಿದ ಪಾಠದ ಬಗ್ಗೆ ಮಾತನಾಡಿರುವ ಸಾಯಿ ಪಲ್ಲವಿ, 'ನಾನು ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ನಾನು ಅಂದುಕೊಂಡಷ್ಟು ನಾನು ಒಳ್ಳೆಯ ವ್ಯಕ್ತಿ ಅಲ್ಲ. ಇನ್ನಷ್ಟು ಒಳ್ಳೆಯ ವ್ಯಕ್ತಿ ಆಗಬೇಕಿದೆ. ನನ್ನ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾನು ಮಾಡಿಕೊಳ್ಳಬೇಕಿದೆ' ಎಂದಿದ್ದಾರೆ ಸಾಯಿ ಪಲ್ಲವಿ.

ಎರಡು ಸಿನಿಮಾ ಬಿಡುಗಡೆಗೆ ರೆಡಿ
ನಟಿ ಸಾಯಿ ಪಲ್ಲವಿ ಈಗಷ್ಟೆ 'ಲವ್ ಸ್ಟೋರಿ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಾಗಚೈತನ್ಯ ನಾಯಕ. ರಾಣಾ ದಗ್ಗುಬಾಟಿ ನಟನೆಯ 'ವಿರಾಟ ಪರ್ವಂ' ಸಿನಿಮಾದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸಿದ್ದಾರೆ ಸಾಯಿ ಪಲ್ಲವಿ. ತಮಿಳಿನ 'ಪಾವ ಕದೈಗಳ್' ಸಿನಿಮಾ ಡಿಸೆಂಬರ್ 18 ರಂದು ಅಮೆಜಾನ್ ನಲ್ಲಿ ಬಿಡುಗಡೆ ಆಗಲಿದೆ.