For Quick Alerts
  ALLOW NOTIFICATIONS  
  For Daily Alerts

  ಸೈನಾ ನೆಹ್ವಾಲ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್: ಸಿದ್ಧಾರ್ಥ ಬಗ್ಗೆ ಮಹಿಳಾ ಆಯೋಗ ಆಕ್ರೋಶ

  |

  ತಮಿಳು ನಟ ಸಿದ್ಧಾರ್ಥ್ ಆಗಾಗ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಕೇಂದ್ರ ಸರ್ಕಾರ ಹಾಗೂ ಸರ್ಕಾರದ ಬೆಂಬಲಕ್ಕೆ ನಿಂತವರ ವಿರುದ್ಧ ಕಿಡಿಕಾರುತ್ತಲೇ ಇರುತ್ತಾರೆ. ಈ ಬಾರಿ ಕೂಡ ಮಾಜಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿ ಸಿದ್ದಾರ್ಥ್ ಮಾಡಿದ ಟ್ವೀಟ್ ವಿವಾದಕ್ಕೀಡಾಗಿದೆ. ತಮಿಳು ನಟನ ವಿರುದ್ಧ ಮಹಿಳಾ ಆಯೋಗ ಆಕ್ರೋಶ ಹೊರ ಹಾಕಿದೆ.

  ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಬಿಜೆಪಿ ಪಕ್ಷದ ನಾಯಕಿ ಸೈನಾ ನೆಹ್ವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬಿನಲ್ಲಿ ಆದ ರಕ್ಷಣಾ ಲೋಪದ ಕುರಿತು ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ತಮಿಳು ನಟ ಸಿದ್ಧಾರ್ಥ್ ಪ್ರತಿಕ್ರಿಯಿಸಿದ್ದರು. ಇದೇ ಟ್ವೀಟ್ ಈಗ ವಿವಾದಕ್ಕೆ ಸಿಲುಕಿದೆ. ಇದು ರಾಷ್ಟ್ರೀಯ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ಸಿದ್ಧಾರ್ಥ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಲಾಗಿದೆ. ಇದೇ ವೇಳೆ ಸೈನಾ ನೆಹ್ವಾಲ್ ಕೂಡ ಸಿದ್ಧಾರ್ಥ್ ಟ್ವೀಟ್‌ಗೆ ತಿರುಗೇಟು ನೀಡಿದ್ದಾರೆ.

  ತಮಿಳು ನಟ ಸಿದ್ಧಾರ್ಥ್ ವಿರುದ್ಧ ಮಹಿಳಾ ಆಯೋಗ ಕಿಡಿ

  ಸೈನಾ ನೆಹ್ವಾಲ್ ಟ್ವೀಟ್‌ಗೆ ಸಿದ್ದಾರ್ಥ್ ಪ್ರತಿ ಟ್ವೀಟ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ನೆಟ್ಟಿಗರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರ್ಥ್ ವಿವಾದಾತ್ಮಕ ಟ್ವೀಟ್ ವಿಚಾರದಲ್ಲಿ ರಾಷ್ಟ್ರಿಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾಶರ್ಮಾ ಎಂಟ್ರಿ ಕೊಟ್ಟಿದ್ದು, ಸಿದ್ಧಾರ್ಥ್ ವಿವಾದಾತ್ಮಕ ಟ್ವೀಟ್ ವಿಚಾರದಲ್ಲಿ ಎಫ್‌ಐಆರ್ ದಾಖಲಿಸುವಂತೆ ಮಹಾರಾಷ್ಟ್ರದ ಡಿಜಿಪಿಗೆ ಪತ್ರ ಬರೆದಿದ್ದಾರೆ. ಟ್ವಿಟರ್ ಇಂಡಿಯಾಗೂ ಸಿದ್ಧಾರ್ಥ್ ಖಾತೆಯನ್ನು ನಿರ್ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಟ್ವಿಟರ್ ಇಂಡಿಯಾಗೆ ಪತ್ರ ಬರೆದಿದೆ.

  ತಮಿಳು ನಟ ಸಿದ್ಧಾರ್ಥ್ ವಿವಾದವೇನು?

  ತಮಿಳು ನಟ ಸಿದ್ಧಾರ್ಥ್ ವಿವಾದವೇನು?

  ಪಂಜಾಬ್‌ನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಲೋಪ ಆದ ಕುರಿತು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. " ಒಂದು ದೇಶ ತನ್ನ ಪ್ರಧಾನಿಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡರೆ, ಆ ದೇಶವನ್ನು ಸುರಕ್ಷಿತ ದೇಶವೆಂದು ಕರೆಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಮೇಲೆ ನಡೆಸಿದ ಹೇಡಿತನದ ದಾಳಿಯನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ." ಎಂದು ಸೈನಾ ನೆಹ್ವಾಲ್ ಖಂಡಿಸಿದ್ದರು. ಇದಕ್ಕೆ ಸಿದ್ದಾರ್ಥ್ ಸೂಕ್ಷ್ಮ ಕಾಕ್ ವಿಶ್ವ ಚಾಂಪಿಯನ್, ನಾವು ಈಗಾಗಲೇ ರಕ್ಷಕರನ್ನು ಹೊಂದಿದ್ದೇವೆ. ದೇವರಿಗೆ ಧನ್ಯವಾದಗಳು. ಶೇಮ್ ಆನ್ ಯು ರಿಹಾನ್ನ." ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ ಬಳಸಿರುವ 'ಕಾಕ್' ಎನ್ನುವ ಪದವನ್ನುಆಂಗ್ಲಭಾಷೆಯಲ್ಲಿ ಪುರುಷರ ಮರ್ಮಾಂಗಕ್ಕೆ ಹೋಲಿಸಲಾಗುತ್ತೆ. ಈ ಕಾರಣಕ್ಕೆ ಸಿದ್ಧಾರ್ಥ್ ವಿವಾದಕ್ಕೀಡಾಗಿದೆ.

  ತಿರುಗೇಟು ನೀಡಿದ ಸೈನಾ ನೆಹ್ವಾಲ್

  ತಿರುಗೇಟು ನೀಡಿದ ಸೈನಾ ನೆಹ್ವಾಲ್

  ಸಿದ್ಧಾರ್ಥ್ ಟ್ವೀಟ್ ವಿವಾದ ಸೃಷ್ಟಿಸುತ್ತಿದ್ದಂತೆ, ಸೈನಾ ನೆಹ್ವಾಲ್ ಇಂಡಿಯಾ ಟುಡೇಗೆ ಪ್ರತಿಕ್ರಿಯಿಸಿದ್ದಾರೆ. "ಅವರ ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಅವರನ್ನು ನಾನು ಒಬ್ಬ ನಟನಾಗಿ ಇಷ್ಟ ಪಟ್ಟಿದ್ದೇನೆ. ಆದರೆ ಈ ಹೇಳಿಕೆ ಒಳ್ಳೆಯದಲ್ಲ. ಅವರು ತಮ್ಮ ಅಭಿಪ್ರಾಯಗಳನ್ನು ಉತ್ತಮ ಪದಗಳ ಬಳಸಿ ಹೇಳಬಹುದಿತ್ತು." ಎಂದು ಸಿದ್ಧಾರ್ಥ್‌ಗೆ ತಿರುಗೇಟು ನೀಡಿದ್ದಾರೆ. ವಿವಾದದ ಬಳಿಕ ಎಚ್ಚೆತ್ತುಕೊಂಡಿ ಸಿದ್ಧಾರ್ಥ್ " ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಅವಹೇಳನಕಾರಿಯಾಗಿ ಏನನ್ನೂ ಹೇಳಿಲ್ಲವೆಂದು" ಹೇಳಿದ್ದಾರೆ.

  ರಾಜ್ಯ ಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಖಂಡನೆ

  ರಾಜ್ಯ ಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಖಂಡನೆ

  ನಟ ಸಿದ್ಧಾರ್ಥ್ ಮಾಡಿದ ಟ್ವೀಟ್ ಅನ್ನು ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಖಂಡಿಸಿದ್ದಾರೆ. ಸಿದ್ದಾರ್ಥ್ ಮಾಡಿದ ಟ್ವೀಟ್ ಬಳಸಲು ಯೋಗ್ಯವಲ್ಲ ಪದಗಳು. ಸೈನಾ ನೆಹ್ವಾಲ್ ನಮ್ಮ ದೇಶದ ಹೆಮ್ಮೆಯ ಕ್ರೀಡಾಪಟು. ಅವರನ್ನು ನಾವು ಗೌರವಿಸಬೇಕು. ಅವರಿಗೆ ರಾಜಕೀಯ ಮಾಡುವ ಹಾಗೂ ಅವರ ಅಭಿಪ್ರಾಯವನ್ನು ತಿಳಿಸುವ ಎಲ್ಲಾ ಹಕ್ಕು ಕೂಡ ಇದೆ ಎಂದು ಸಿದ್ಧಾರ್ಥ್ ವಿರುದ್ಧ ಕಿಡಿ ಕಾರಿದ್ದಾರೆ.

  English summary
  Saina Nehwal has reacted to actor Siddharth contovercial tweet he made a remark with alleged sexual innuendo. National Commission for Women chairperson Rekha Sharma has demanded action against Tamil actor Siddharth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X