For Quick Alerts
  ALLOW NOTIFICATIONS  
  For Daily Alerts

  ಹೇಗಿದ್ದ ದರ್ಶನ್ 'ಭೂಪತಿ' ಸಿನಿಮಾದ ನಾಯಕಿ ಈಗ ಹೇಗಾಗಿದ್ದಾರೆ ನೋಡಿ

  |

  ಚಾಲೆಂಗ್ ಸ್ಟಾರ್ ದರ್ಶನ್ ಅಭಿನಯದ ಭೂಪತಿ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದ ನಟಿ ಶೆರಿನ್ ಶೃಂಗಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಆಂಟಿ ಎಂದು ಕರೆದ ನೆಟ್ಟಿಗನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದ ಶೆರಿನ್ ಈಗ ತೆಳ್ಳಾಗಿದ್ದಾರೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

  Nikhil & Revathi GYM Workout : ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್ | Filmiibeat Kannada

  ದಪ್ಪಗಿರುವ ಮತ್ತು ಈಗ ತೆಳ್ಳಗಾಗಿರುವ ಎರಡು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಬಾಡಿ ಶೇಮಿಂಗ್ ಮಾಡುವವರಿಗೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. 10 ಕೆಜಿ ತೂಕ ಇಳಿಸಿರುವ ಶೆರಿನ್ ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಲಾಕ್ ಡೌನ್ ಸಮಯವನ್ನು ಉತ್ತಮವಾಗಿ ಬಳಸಿಕೊಂಡಿರುವ ಶೆರಿನ್ ತೂಕ ಇಳಿಸಿ ಅಚ್ಚರಿ ಮೂಡಿಸಿದ್ದಾರೆ. ಮುಂದೆ ಓದಿ...

  'ಆಂಟಿ' ಎಂದು ಕರೆದ ನೆಟ್ಟಿಗನನ್ನು ತರಾಟೆಗೆ ತೆಗೆದುಕೊಂಡ ದರ್ಶನ್ ನಾಯಕಿ'ಆಂಟಿ' ಎಂದು ಕರೆದ ನೆಟ್ಟಿಗನನ್ನು ತರಾಟೆಗೆ ತೆಗೆದುಕೊಂಡ ದರ್ಶನ್ ನಾಯಕಿ

  ತೂಕ ಇಳಿಸಿ ಫೋಟೋ ಹಂಚಿಕೊಂಡ ನಟಿ

  ತೂಕ ಇಳಿಸಿ ಫೋಟೋ ಹಂಚಿಕೊಂಡ ನಟಿ

  ನಟಿ ಶೆರಿನ್ ಅಂದು ಮತ್ತು ಈಗ ಹೇಗಾಗಿದ್ದಾರೆ ಎನ್ನುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಎರಡು ಫೋಟೋದಲ್ಲೂ ಒಂದೆ ಡ್ರೆಸ್ ಧರಿಸಿದ್ದಾರೆ. ಒಂದು ವರ್ಷದಲ್ಲಿ ಹೇಗೆ ಬದಲಾಗಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಇತ್ತೀಚಿಗೆ ನೆಟ್ಟಿಗರಿಂದ ಬಾಡಿ ಶೇಮಿಂಗ್ ಗೆ ಒಳಗಾಗಿದ್ದ ನಟಿ ಅದನ್ನೆ ಚಾಲೆಂಜ್ ಆಗಿ ತೆಗೆದುಕೊಂಡು ತೂಕ ಇಳಿಸಿದ್ದಾರೆ.

  ಇನ್ನೊಬ್ಬರ ನಗು ಮತ್ತು ಕಣ್ಣೀರಿಗೆ ನೀವು ಕಾರಣ ಆಗಿರುತ್ತೀರಿ

  ಇನ್ನೊಬ್ಬರ ನಗು ಮತ್ತು ಕಣ್ಣೀರಿಗೆ ನೀವು ಕಾರಣ ಆಗಿರುತ್ತೀರಿ

  ನಟಿ ಶೆರಿನ್ ತೂಕ ಇಳಿಸಿರುವ ಫೋಟೋ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇನ್ನೊಬ್ಬರ ಕಣ್ಣೀರಿಗೆ ಮತ್ತು ನಗುವಿಗೆ ನೀವು ಕಾರಣವಾಗಿರುತ್ತೀರಿ ಬುದ್ದಿವಂತಿಕೆಯಿಂದ ಆರಿಸಿ ಎಂದು ಹೇಳಿದ್ದಾರೆ. " ಒಂದು ವರ್ಷ ಮತ್ತು 10 ಕೆ ಜಿ ನಂತರ. ಆಗ ನಾನು ನೋಡಿದ ರೀತಿಗೆ ಸಂತೋಷವಾಗಿದೆ. ತೂಕವನ್ನು ಇಳಿಸುವುದು ಸುಲಭ. ನೋಯಿಸುವ ಮತ್ತು ಹಾನಿಕಾರಕ ಮಾತುಗಳನ್ನು ಹಿಂದಿರುಗಿಸುವುದಲ್ಲ. ಇನ್ನೊಬ್ಬರ ನಗು ಅಥವಾ ಕಣ್ಣೀರಿನ ಹಿಂದಿನ ಕಾರಣ ನೀವು ಆಗಿರಬಹುದು. ಬುದ್ದಿವಂತಿಕೆಯಿಂದ ಆರಿಸಿ" ಎಂದು ಹೇಳಿದ್ದಾರೆ.

  ಟ್ರೋಲ್ ಮಾಡಿದ ನೆಟ್ಟಿಗನಿಗೆ ಖಡಕ್ ಉತ್ತರ ನೀಡಿದ್ದರು

  ಟ್ರೋಲ್ ಮಾಡಿದ ನೆಟ್ಟಿಗನಿಗೆ ಖಡಕ್ ಉತ್ತರ ನೀಡಿದ್ದರು

  ಇತ್ತೀಚಿಗೆ ನಟಿ ಶೆರಿನ್ ಅನ್ನು ಆಂಟಿ ಎಂದು ಕರೆದ ನೆಟ್ಟಿಗನಿಗೆ ಸರಿಯಾದ ಉತ್ತರ ನೀಡಿದ್ದರು "ನಾವು ಹೇಗೆ ಕಾಣಿಸುತ್ತೇವೆ ಎನ್ನುವ ಆಧಾರದ ಮೇಲೆ ಬೇಗ ಜಡ್ಜ್ ಮಾಡುತ್ತಾರೆ. ನಾವು ನಿಜವಾಗಿ ಬಾಹ್ಯ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇದು ಸ್ವಯಂ ಪ್ರೀತಿ ಮತ್ತು ಸ್ವಯಂ ಸ್ವೀಕಾರದ ಪರಿಕಲ್ಪನೆಯೊಂದಿಗೆ ಬದುಕಲು ಕಲಿಸುತ್ತೆ. ಎಂದಿದ್ದರು. ಆ ನಂತರ ಆತ ಮತ್ತೆ ಕ್ಷಮೆಯಾಚಿಸಿದ್ದ.

  ಕನ್ನಡದ ನಟಿ ಶೆರಿನ್

  ಕನ್ನಡದ ನಟಿ ಶೆರಿನ್

  ಶೆರಿನ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಪೊಲೀಸ್ ಡಾಗ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶೆರಿನ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 34 ವರ್ಷದ ಈ ನಟಿ ಕನ್ನಡಗಿಂತ ಹೆಚ್ಚಾಗಿ ತಮಿಳು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದಾರೆ. ದರ್ಶನ್ ನಾಯಕನಾಗಿ ಮಿಂಚಿದ್ದ ಭೂಪತಿ ಸಿನಿಮಾ ಶೆರಿನ್ ಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ. ಧ್ರುವ, ಸಿಹಿಗಾಳಿ ಸೇರಿದ್ದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿಯೂ ಶೆರಿನ್ ಅಭಿನಯಿಸಿದ್ದಾರೆ.

  ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದರು

  ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದರು

  ಶೆರಿನ್ ಕೊನೆಯದಾಗಿ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಕೊನೆಯದಾಗಿ 2012ರಲ್ಲಿ ಬಂದ ಎಕೆ 56 ಸಿನಿಮಾದಲ್ಲಿ ಮಿಂಚಿದ್ದಾರೆ. ಆ ಸಿನಿಮಾ ಬಳಿಕ ಮತ್ತೆ ಬಣ್ಣಹಚ್ಚಿಲ್ಲ. ಕಳೆದ ವರ್ಷ ತಮಿಳು ಬಿಗ್ ಬಾಸ್ -3 ನಲ್ಲಿ ಭಾಗಿಯಾಗಿದ್ದರು. ಮೂರನೆ ರನ್ನರ್ ಅಪ್ ಆಗಿ ಮನೆಯಿಂದ ಹೊರಬಂದಿದ್ದರು.

  English summary
  Actress Sherin Shringar Shares weight loss photos in Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X