For Quick Alerts
  ALLOW NOTIFICATIONS  
  For Daily Alerts

  ಸಲಾರ್ ಶೂಟಿಂಗ್ ಸೆಟ್‌ನಿಂದ ಸೆಲ್ಫಿ ಹಂಚಿಕೊಂಡ ನಟಿ ಶ್ರುತಿ ಹಾಸನ್

  |

  ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ಸಲಾರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ತೆಲಂಗಾಣದ ಗೋದಾವರಿ ಮೈನಿಂಗ್ ಪ್ರದೇಶದಲ್ಲಿ ಸಲಾರ್ ಶೂಟಿಂಗ್ ಚಾಲ್ತಿಯಲ್ಲಿದೆ. ಜನವರಿ 29ರಿಂದ ಶೂಟಿಂಗ್ ಶುರುವಾಗಿದ್ದು, ಪ್ರಭಾಸ್ ಭಾಗಿಯಾಗಿದ್ದಾರೆ.

  ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಸೇರಿರುವ ಶ್ರುತಿ ಮೊದಲ ದಿನ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮೊದಲ ದಿನವೇ ಸಲಾರ್ ಚಿತ್ರದ ಮೇಕಿಂಗ್ ಫೋಟೋಗಳು ಬಹಿರಂಗ

  ಸಲಾರ್ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದ ನಂತರ ಸೆಲ್ಫಿ ಹಂಚಿಕೊಳ್ಳುವ ಮೂಲಕ ಶೂಟಿಂಗ್ ಶುರು ಮಾಡಿದ್ದೇನೆ ಎಂದು ಅಭಿಮಾನಿಗಳಿಗೆ ಮಾಹಿತಿ ರವಾನಿಸಿದ್ದಾರೆ.

  ಮುಖಕ್ಕೆ ಮಾಸ್ಕ್ ಧರಿಸಿ ಫೋಟೋಗೆ ಪೋಸ್ ನೀಡಿರುವ ಶ್ರುತಿ ಹಾಸನ್, ಇನ್ನೊಂದು ಫೋಟೋ ಹಂಚಿಕೊಂಡಿದ್ದಾರೆ. ಸಲಾರ್ ಸೆಟ್‌ನಲ್ಲಿರುವ ಮಹಿಳಾ ಕಲಾವಿದೆಯೊಂದಿಗಿರುವ ಫೋಟೋ ಸಹ ಪೋಸ್ಟ್ ಮಾಡಿದ್ದಾರೆ.

  ಸಲಾರ್ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ದೂರದಿಂದ ನಿಂತು ಪ್ರಭಾಸ್ ಅವರನ್ನು ನೋಡಲು ಕಾಯುತ್ತಿದ್ದಾರೆ. ಮೊದಲ ದಿನ ಚಿತ್ರೀಕರಣದ ವೇಳೆ ಪ್ರಭಾಸ್ ಅವರ ಮೇಕಿಂಗ್ ಫೋಟೋ ಹಾಗೂ ಸೆಟ್‌ನಲ್ಲಿ ಓಡಾಡುವ ಕೆಲವು ವಿಡಿಯೋಗಳು ವೈರಲ್ ಆಗಿದ್ದವು.

  'ಸಲಾರ್' ಸಿನಿಮಾಗೆ ಆಯ್ಕೆಯಾಗಿ ಟ್ರೋಲ್ ಗೆ ಗುರಿಯಾದ ನಟಿ ಶ್ರುತಿ ಹಾಸನ್

  ಇನ್ನು ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಕೆಜಿಎಫ್ ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಇಲ್ಲಿಯೂ ಮುಂದುವರಿಯುತ್ತಿದ್ದಾರೆ. ಭುವನ್ ಗೌಡ ಕ್ಯಾಮೆರಾ, ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ.

  ಶೃತಿ ಹಾಸನ್ ವಿರುದ್ಧ ತಿರುಗಿ ಬಿದ್ದ ಕನ್ನಡಿಗರು | Filmibeat Kannada
  English summary
  Prabhas movie leading lady Shruti Hassan shared selfie from set of Salaar. pic went viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X