For Quick Alerts
  ALLOW NOTIFICATIONS  
  For Daily Alerts

  ಕೆಟ್ಟ ಜೋಕ್: ಸೈನಾ ನೆಹ್ವಾಲ್‌ ಕ್ಷಮೆ ಕೇಳಿದ ನಟ ಸಿದ್ಧಾರ್ಥ್

  |

  ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ನಟ ಸಿದ್ಧಾರ್ಥ್ ಮಾಡಿದ್ದ ಟ್ವೀಟ್‌ ಕಳೆದೆರಡು ದಿನದಿಂದ ಬಹುವಾಗಿ ಚರ್ಚೆ ಆಗುತ್ತಿದೆ.

  ಆಗಿದ್ದಿಷ್ಟು, ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರ ಸಂಚಾರಕ್ಕೆ ರೈತರು ತಡೆ ಮಾಡಿದ ವಿಚಾರವಾಗಿ ಆಕ್ರೋಶಭರಿತ ಟ್ವೀಟ್ ಮಾಡಿದ್ದ ಸೈನಾ, ಭದ್ರತಾ ವೈಫಲ್ಯವನ್ನು ಟೀಕಿಸಿದ್ದರು.

  ಬಿಜೆಪಿ ವಿರೋಧಿಯಾಗಿರುವ ನಟ ಸಿದ್ಧಾರ್ಥ್ ಸೈನಾ ನೆಹ್ವಾಲ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿ, ''ಸಟಲ್' 'ಕಾಕ್' ವಿಶ್ವ ಚಾಂಪಿಯನ್'' ಎಂದು ದ್ವಂದ್ವಾರ್ಥ ಬರುವಂತೆ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

  ಸೈನಾ ನೆಹ್ವಾಲ್ ತಂದೆ ''ನನ್ನ ಮಗಳು ಒಲಿಂಪಿಕ್ ಪದಕ ಗೆದ್ದಿದ್ದಾಳೆ, ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದಾಳೆ ನೀನು ಏನು ಸಾಧನೆ ಮಾಡಿದ್ದೀಯ'' ಎಂದು ಪ್ರಶ್ನೆ ಮಾಡಿದ್ದರು. ಸೈನಾ ನೆಹ್ವಾಲ್ ಪತಿ, ಪರುಪಲ್ಲಿ ಕಶ್ಯಪ್ ಸಹ ಸಿದ್ಧಾರ್ಥ್ ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸಿದ್ದು, ''ವಿರೋಧ ಮಾಡಿ, ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ ಆದರೆ ಸರಿಯಾದ ಪದಗಳನ್ನು ಆಯ್ಕೆ ಮಾಡಿ'' ಎಂದಿದ್ದರು.

  ತಮ್ಮ ಟ್ವೀಟ್‌ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಟ್ವಿಟ್ಟರ್‌ನಲ್ಲಿ ಸೈನಾಗೆ ಬಹಿರಂಗ ಪತ್ರವನ್ನು ಬರೆದಿರುವ ನಟ ಸಿದ್ಧಾರ್ಥ್, ಕ್ಷಮೆ ಕೇಳಿದ್ದಾರೆ.

  ''ಪ್ರೀಯ ಸೈನಾ, ನನ್ನ ಒರಟು ಜೋಕ್‌ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ'' ಎಂದಿರುವ ಸಿದ್ಧಾರ್ಥ್, ''ನಿಮ್ಮ ಅಭಿಪ್ರಾಯಕ್ಕೆ ಪ್ರತಿಯಾಗಿ ನಾನು ಮಾಡಿದ ಒರಟು ಜೋಕ್‌ ಬಗ್ಗೆ ಕ್ಷಮೆ ಕೇಳುತ್ತೇನೆ. ನಿಮ್ಮೊಂದಿಗೆ ಅನೇಕ ವಿಷಯಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಟ್ವೀಟ್‌ಗೆ ಪ್ರತಿಯಾಗಿ ನಾನು ಮಾಡಿದ ಟ್ವೀಟ್‌ ಅದಕ್ಕೆ ಬಳಸಿದ ಪದಗಳು ಸೂಕ್ತವಾಗಿರಲಿಲ್ಲ. ಸ್ವತಃ ನಾನು ಅಷ್ಟು ಕೆಳಮಟ್ಟದವನಲ್ಲ ಎಂಬ ನಂಬಿಕೆ ನನಗೆ ಇದೆ'' ಎಂದಿದ್ದಾರೆ ಸಿದ್ಧಾರ್ಥ್.

  ''ಮತ್ತು ನಾನು ಮಾಡಿದ ಜೋಕ್‌ನ ವಿಷಯಕ್ಕೆ ಬರುವುದಾದರೆ. ಆ ಒರಟು ಜೋಕ್‌ ಬಗ್ಗೆ ಕ್ಷಮೆ ಇರಲಿ. ಯಾವುದೇ ಜೋಕ್‌ ಅನ್ನು ಹೇಳಿದ ಮೇಲೆ ಅದರ ಅರ್ಥವನ್ನು ವಿವರಿಸುವ ಅವಶ್ಯಕತೆ ಎದುರಾಗುತ್ತದೆಯೆಂದರೆ ಅದು ಖಂಡಿತ ಒಳ್ಳೆಯ ಜೋಕ್ ಅಲ್ಲ. ನಾನು ಹೇಳಿದ ಕೆಟ್ಟ ಜೋಕ್‌ ಬಗ್ಗೆ ಕ್ಷಮೆ ಕೋರುವೆ'' ಎಂದಿದ್ದಾರೆ ಸಿದ್ಧಾರ್ಥ್.

  ''ನಾನು ಪದಗಳೊಂದಿಗೆ ಆಟವಾಗಿ ಜೋಕ್ ಹೊಮ್ಮಿಸಲು ಯತ್ನಿಸಿದ್ದೇನೆ. ಆದರೆ ಹಲವರು ಹೇಳುತ್ತಿರುವಂತೆ ಅದು ದುರುದ್ದೇಶಪೂರಿತ ಅಥವಾ ಲಿಂಗ ಭೇದವುಳ್ಳ ಅಥವಾ ಮಹಿಳೆಗೆ ಅಪಮಾನ ಮಾಡಬೇಕೆಂದು ಮಾಡಿದ ಟ್ವೀಟ್ ಅಲ್ಲ. ನಾನೂ ಒಬ್ಬ ಮಹಿಳಾಪರ ವ್ಯಕ್ತಿ. ನೀವೊಬ್ಬ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿಯೂ ಇಲ್ಲ. ನಾನು ಮಾಡಿದ ಟ್ವೀಟ್‌ನಲ್ಲಿ ಮಹಿಳೆಯರ ಬಗ್ಗೆ ಕೆಟ್ಟ ಉದ್ದೇಶವಾಗಲಿ, ಲಿಂಗ ತಾರತಮ್ಯ ಮಾಡುವ ಉದ್ದೇಶವಾಗಲಿ ಇಲ್ಲ'' ಎಂದಿದ್ದಾರೆ ಸಿದ್ಧಾರ್ಥ್.

  ಕೊನೆಯದಾಗಿ, ''ಈ ವಿವಾದವನ್ನು ನಾವು ಹಿಂದೆ ಬಿಡೋಣ, ನನ್ನ ಈ ಕ್ಷಮೆಯನ್ನು ನೀವು ಒಪ್ಪಿಕೊಳ್ಳುತ್ತೀರ ಎಂದು ಭಾವಿಸಿದ್ದೇನೆ. ನೀವು ಯಾವಾಗಲೂ ನನ್ನ ಪಾಲಿನ ಚಾಂಪಿಯನ್'' ಎಂದಿದ್ದಾರೆ ನಟ ಸಿದ್ಧಾರ್ಥ್.

  English summary
  Actor Siddharth apologies to badminton champion Saina Nehwal for his rude joke. He said You will always be my champion.
  Wednesday, January 12, 2022, 19:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X