For Quick Alerts
  ALLOW NOTIFICATIONS  
  For Daily Alerts

  ಶಸ್ತ್ರ ಚಿಕಿತ್ಸೆ ಮುಗಿಸಿ ಹೈದರಾಬಾದ್‌ಗೆ ವಾಪಸ್ ಆದ ನಟ ಸಿದ್ಧಾರ್ಥ್

  |

  ಬಹುಭಾಷಾ ನಟ ಸಿದ್ಧಾರ್ಥ್ ಶಸ್ತ್ರಚಿಕಿತ್ಸೆಗೆಂದು ಲಂಡನ್‌ಗೆ ತೆರಳಿದ್ದರು. ಇದೀಗ ಚಿಕಿತ್ಸೆ ಮುಗಿಸಿ ಸಿದ್ಧಾರ್ಥ್ ಹೈದರಾಬಾದ್‌ಗೆ ವಾಪಸ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಅಷ್ಟೆಯಲ್ಲದೆ ತಮ್ಮ ಮುಂದಿನ ಸಿನಿಮಾದ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ.

  ನಟ ಸಿದ್ಧಾರ್ಥ್ ಸ್ಟಂಟ್ ದೃಶ್ಯ ಚಿತ್ರೀಕರಣ ವೇಳೆ ಗಾಯಗೊಂಡಿದ್ದರು. ಬಳಿಕ ಬೆನ್ನುನೋವಿನಿಂದ ಬಳಲುತ್ತಿದ್ದ ಸಿದ್ಧಾರ್ಥ್ ಇತ್ತೀಚಿಗಷ್ಟೆ ಲಂಡನ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಭಾರತಕ್ಕೆ ಮರಳಿದ್ದಾರೆ. ಸಿದ್ಧಾರ್ಥ್ ಸದ್ಯ ಬಹುನಿರೀಕ್ಷೆಯ ಮಹಾ ಸಮುದ್ರಂ ಸಿನಿಮಾದ ಡಬ್ಬಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ.

  ಸಿದ್ಧಾರ್ಥ್ ನಟನೆಯ 'ಮಹಾ ಸಮುದ್ರಂ' ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ನಡೆಯುತ್ತಿದ್ದು, ಸಿದ್ಧಾರ್ಥ್ ಗೈರಾಗಿದ್ದರು. ಈ ಬಗ್ಗೆ ಚಿತ್ರತಂಡವನ್ನು ಪ್ರಶ್ನೆ ಮಾಡಿದ ಮಾಧ್ಯಮಗಳಿಗೆ, ''ಸಿದ್ಧಾರ್ಥ್ ಶಸ್ತ್ರಚಿಕಿತ್ಸೆಗೆಂದು ಲಂಡನ್‌ಗೆ ತೆರಳಿದ್ದು, ಆದಷ್ಟು ಬೇಗ ಮರಳುತ್ತಾರೆ'' ಎಂಬ ಉತ್ತರ ಸಿಕ್ಕಿತ್ತು.

  ಇದೀಗ ಹೈದರಾಬಾದ್‌ಗೆ ವಾಪಸ್ ಆಗಿರುವ ಸಿದ್ಧಾರ್ಥ್, "ದೇಶಕ್ಕೆ ವಾಪಸ್ ಆಗಿ ಮಹಾ ಸಮುದ್ರಂ ಸಿನಿಮಾದ ಡಬ್ಬಿಂಗ್ ಮುಗಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗೆ ಧನ್ಯವಾದಗಳು. ಇನ್ನು ಕೆಲವು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಎಲ್ಲಾ ವೈದ್ಯರಿಗೆ ಧನ್ಯವಾದಗಳು. ನನಗೆ ಬಲವಾದ ಬೆನ್ನು ಮೂಳೆಗಳಿವೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ" ಎಂದು ಸಿದ್ಧಾರ್ಥ್ ಹೇಳಿದ್ದಾರೆ.

  ಮೋದಿ ವಿರೋಧಿ ಟ್ವೀಟ್ ಗಳಿಂದ ಸಿದ್ಧಾರ್ಥ್ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದರು. ತಮ್ಮ ಖಾರವಾದ ಟ್ವೀಟ್‌ಗಳ ಮೂಲಕ, ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ಆಗಾಗ್ಗೆ ಟೀಕಿಸುತ್ತಲೇ ಇರುತ್ತಾರೆ ಸಿದ್ಧಾರ್ಥ್. ಇದೇ ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಐಟಿ ಸೆಲ್‌ ಮೇಲೆ ಆರೋಪ ಮಾಡಿದ್ದ ಸಿದ್ಧಾರ್ಥ್, ''ಬಿಜೆಪಿ ಐಟಿ ಸೆಲ್ ನನ್ನ ಮೊಬೈಲ್ ನಂಬರ್ ಅನ್ನು ಲೀಕ್ ಮಾಡಿದೆ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ಕುಟುಂಬದವರನ್ನು ಅತ್ಯಾಚಾರ ಮಾಡುವುದಾಗಿಯೂ ಬೆದರಿಕೆ ಸಂದೇಶಗಳು ಬಂದಿವೆ'' ಎಂದಿದ್ದರು. ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ ಸಿದ್ಧಾರ್ಥ್‌ಗೆ ಭದ್ರತೆ ಒದಗಿಸಲು ಮುಂದಾಗಿತ್ತು, ಆದರೆ ಭದ್ರತೆಯನ್ನು ನಿರಾಕರಿಸಿದರು ಸಿದ್ಧಾರ್ಥ್.

  ಸಿನಿಮಾ ವಿಚಾರಕ್ಕೆ ಬರವುದಾದರೇ ಸಿದ್ಧಾರ್ಥ್ 2013ರ ಬಳಿಕ ಮತ್ತೆ ಟಾಲಿವುಡ್ ಕಡೆ ಮುಖಮಾಡಿದ್ದಾರೆ. ಟಾಲಿವುಡ್‌ನಲ್ಲಿ ಸಿದ್ಧಾರ್ಥ್ ಕೊನೆಯದಾಗಿ ಜಬರ್ದಸ್ತ್ ಸಿನಿಮಾದಲ್ಲಿ ನಚಿಸಿದ್ದರು. ಇದೀಗ ಮಹಾ ಸಮುದ್ರಂ ಮೂಲಕ ಮತ್ತೆ ವಾಪಸ್ ಆಗುತ್ತಿದ್ದಾರೆ. ಈ ಸಿನಿಮಾದಲ್ಲಿ ಶರ್ವಾನಂದ್ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ತಮಿಳು ಮತ್ತು ತೆಲುಗು ಎರಡು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಅಜಯ್ ಭೂಪತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದಿತಿ ರಾವ್ ಹೈದರಿ, ಅನು ಎಮ್ಯಾನುಯೆಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಗಪತಿ ಬಾಬು, ಗರುಡ ರಾಮ್, ಧನಂಜಯ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ದಸರ ಹಬ್ಬಕ್ಕೆ ಅಂದರೆ ಅಕ್ಟೋಬರ್ 14ಕ್ಕೆ ತೆರೆಗೆ ಬರುತ್ತಿದೆ.

  English summary
  Actor Siddharth returns to Hyderabad after spine surgery in London.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X