For Quick Alerts
  ALLOW NOTIFICATIONS  
  For Daily Alerts

  ವರ್ಕೌಟ್ ಬಳಿಕ ಭರತನಾಟ್ಯ ಕಲಿಯುತ್ತಿರುವ ನಟ ಸಿಂಬು: ಫೋಟೋ ವೈರಲ್

  |

  ತಮಿಳು ನಟ ಸಿಂಬು ಇತ್ತೀಚಿಗೆ ಸಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಈಶ್ವರನ್ ಸಿನಿಮಾದ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಸಿಂಬು, ಬಳಿಕ ಫಿಟ್ ನೆಸ್ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಫಿಟ್ ಅಂಡ್ ಫೈನ್ ಆಗಿರುವ ಸಿಂಬು ನೋಡಿ ದಂಗಾಗಿದ್ದರು.

  ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಸಿಂಬು ಅಚ್ಚರಿ ಮೂಡಿಸಿದ್ದಾರೆ. 101 ಕೆಜಿ ಇದ್ದ ಸಿಂಬು ಈಗ 71 ಕೆಜಿ ಆಗಿದ್ದಾರೆ. ಅಂದ್ಹಾಗೆ ಸಿಂಬು ತೆಳ್ಳಗೆ ಆಗಿರುವುದು ಸಿನಿಮಾಗಾಗಿ ಅಲ್ಲ. ಫಿಟ್ ಆಗಿರಬೇಕು ಎನ್ನುವ ಕಾರಣಕ್ಕೆ ಈ ಪರಿ ತೂಕ ಇಳಿಸಿಕೊಂಡಿದ್ದಾರೆ. ಕೇವಲ ಜಿಮ್ ಮಾತ್ರವಲ್ಲದೆ ವಿವಧ ಕ್ರೀಡೆಗಳಲ್ಲೂ ತೊಡಗಿಕೊಂಡಿದ್ದಾರೆ. ಇದೀಗ ಭರತನಾಟ್ಯ ಕಲಿಯುತ್ತಿದ್ದಾರೆ. ಮುಂದೆ ಓದಿ...

  ನಟ ಸಿಂಬು 30 ಕೆಜಿ ತೂಕ ಇಳಿಸಿಕೊಂಡ ಕಾರಣ ಬಹಿರಂಗ ಪಡಿಸಿದ ಸಹೋದರಿನಟ ಸಿಂಬು 30 ಕೆಜಿ ತೂಕ ಇಳಿಸಿಕೊಂಡ ಕಾರಣ ಬಹಿರಂಗ ಪಡಿಸಿದ ಸಹೋದರಿ

  ನವೆಂಬರ್ ನಿಂದ ವರ್ಕೌಟ್ ಶುರು ಮಾಡಿರುವ ಸಿಂಬು

  ನವೆಂಬರ್ ನಿಂದ ವರ್ಕೌಟ್ ಶುರು ಮಾಡಿರುವ ಸಿಂಬು

  ಕಳೆದ ವರ್ಷ ನವೆಂಬರ್ ನಿಂದ ಸಿಂಬು ವರ್ಕೌಟ್ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಟ್ರೇನರ್ ಸಂದೀಪ್ ರಾಜ್ ಮಾರ್ಗದರ್ಶನದಲ್ಲಿ ಸಿಂಬು ವರ್ಕೌಟ್ ಮಾಡಿದ್ದಾರೆ. ಪ್ರತೀದಿನ ಬೆಳಗ್ಗೆ 4 ಗಂಟೆಗೆ ಎದ್ದು ವಾಕಿಂಗ್ ಮಾಡಿ, ನಂತರ ಜಿಮ್ ಗೆ ತೆರಳುತ್ತಿದ್ದರಂತೆ. ಜಿಮ್ ಜೊತೆಗೆ ವಿವಿಧ ಕ್ರೀಡೆಯಲ್ಲಿಯೂ ಸಿಂಬು ತೊಡಗಿಕೊಂಡಿದ್ದಾರಂತೆ.

  ಭರತನಾಟ್ಯ ಕಲಿಯುತ್ತಿರುವ ಸಿಂಬು

  ಭರತನಾಟ್ಯ ಕಲಿಯುತ್ತಿರುವ ಸಿಂಬು

  ವರ್ಕೌಟ್ ಬಳಿಕ ಸಿಂಬು ಈಗ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಸಿಂಬು ನಟಿ ಶರಣ್ಯ ಮೋಹನ್ ಅವರೊಂದಿಗೆ ಶಾಸ್ತ್ರೀಯ ನೃತ್ಯದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸಿಂಬುಗೆ, ನಟಿ ಶರಣ್ಯ ನೃತ್ಯ ಕಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ತಮಿಳು ನಟ ಸಿಂಬು ಜೊತೆ ತ್ರಿಷಾ ಮದುವೆ: ಪ್ರತಿಕ್ರಿಯೆ ನೀಡಿದ ನಟಿಯ ಆಪ್ತವಲಯತಮಿಳು ನಟ ಸಿಂಬು ಜೊತೆ ತ್ರಿಷಾ ಮದುವೆ: ಪ್ರತಿಕ್ರಿಯೆ ನೀಡಿದ ನಟಿಯ ಆಪ್ತವಲಯ

  ಬಹುಮುಖ ಪ್ರತಿಭೆ ಸಿಂಬು

  ಬಹುಮುಖ ಪ್ರತಿಭೆ ಸಿಂಬು

  ಬಹುಮುಖ ಪ್ರತಿಭೆ ಸಿಂಬು ನಟನೆಯ ಜೊತೆಗೆ ನಿರ್ದೇಶನ, ಬರವಣಿಗೆ, ನೃತ್ಯಗಾರ ಮತ್ತು ಹಿನ್ನಲೆ ಗಾಯಕ. ಇದೀಗ ಭರತನಾಟ್ಯ ಕಲಿಯುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಈಶ್ವರನ್ ಸಿನಿಮಾ ರಿಲೀಸ್ ಗೆ ಸಿದ್ಧವಾಗುತ್ತಿದೆ. ಇದಲ್ಲದೆ ಮಹಾ, ಮಾನಾಡು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth
  ಮಾಂಸಹಾರ ತ್ಯಜಿಸಿರುವ ನಟ

  ಮಾಂಸಹಾರ ತ್ಯಜಿಸಿರುವ ನಟ

  ಫಿಟ್ ಅಂಡ್ ಫೈನ್ ಆಗಿ ಕಾಣಿಸಲು ಸಿಂಬು ಮಾಂಸಹಾರವನ್ನು ತ್ಯಾಜಿಸಿದ್ದಾರಂತೆ. ಜೊತೆಗೆ ಎಲ್ಲಾ ರೀತಿಯ ಜಂಕ್ ಫುಡ್ ಅನ್ನು ಸಹ ಸೇವಿಸುವುದಿಲ್ಲವಂತೆ. ಪೌಷ್ಠಿಕಾಂಶ ಇರುವ ಆಹಾರಗಳನ್ನು ತಿನ್ನುತ್ತಿದ್ದಾರೆ. ಒಂದು ವರ್ಷಗಳ ಕಠಿಣ ಶ್ರಮದ ಬಳಿಕ ಸಿಲಾಂಬರಸನ್ 31 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

  English summary
  Actor Silambarasan learning Bharatanatyam from actress saranya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X