For Quick Alerts
  ALLOW NOTIFICATIONS  
  For Daily Alerts

  ತಮಿಳು ರೀಮೇಕ್ ಕನ್ನಡ ಚಿತ್ರದಲ್ಲಿ ಸಿಂಧು-ನಿರಂಜನ್

  |

  ಅಚ್ಚ ಕನ್ನಡದ ಬೆಡಗಿ ಸಿಂಧು ಲೋಕನಾಥ್ ಅವರಿಗೆ ಮತ್ತೊಂದು ಸಿನಿಮಾ ಆಫರ್ ಬಂದಿದೆ. ಅದು ಸೂಪರ್ ಹಿಟ್ ತಮಿಳು ಚಿತ್ರ 'ವಜಕ್ಕು ಎನ್ 18/9' ರೀಮೇಕ್ ಆಗಲಿರುವ ಕನ್ನಡ ಚಿತ್ರ 'ಕೇಸ್ ನಂ 18/9. ಹೆಸರಿನ ಪ್ರಾಜೆಕ್ಟ್. ಈಗಾಗಲೇ ಯೋಗರಾಜ್ ಭಟ್ ಅವರ 'ಡ್ರಾಮಾ' ಚಿತ್ರೀಕರಣ ಮುಗಿಸಿರವ ಸಿಂಧು, ಒಂದಾದ ಮೇಲೆ ಇನ್ನೊಂದರಂತೆ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಸಿಂಧು ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನಸೆಳೆದಿದ್ದಾರೆ.

  ಸಿಂಧು ಲೋಕನಾಥ್ ನಟಿಸಿರುವ ಚಿತ್ರಗಳ ಪಟ್ಟಿಯಲ್ಲಿ ಹೊಸ ನಿರ್ದೇಶಕರಾದ ರಾಮ್ ದೀಪ್ ಚಿತ್ರ 'ನನ್ ಲೈಫಲ್ಲಿ' ಕೂಡ ಸೇರಿದೆ. ಆ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು ಇನ್ನೇನು ಸದ್ಯದಲ್ಲೇ ಬಿಡುಗಡೆಯಾಗಲಿದೆ. 'ನನ್ ಲೈಫಲ್ಲಿ' ಚಿತ್ರದಲ್ಲಿ ಸಿಂಧು ಜೋಡಿ ನಾಯಕರಾಗಿ ಅನೀಶ್ ತೇಜೇಶ್ವರ್ ನಟಿಸಿದ್ದಾರೆ. ಯೋಗರಾಜ್ ಭಟ್ಟರ 'ಡ್ರಾಮಾ'ದಲ್ಲಿ ಕೂಡ ಸಿಂಧು ನಟನೆ ಬಗ್ಗೆ ಚಿತ್ರತಂಡದಿಂದ ಸಾಕಷ್ಟು ಪ್ರಶಂಸೆ ಬಂದಿದೆ. ಈಗ ಈ 'ಕೇಸ್ ನಂ 18/9' ಆಫರ್ ಸಿಕ್ಕಿದೆ, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.

  ಇದೀಗ ತಮಿಳು ರೀಮೇಕ್ ಕನ್ನಡದ ಚಿತ್ರಕ್ಕೆ ಸಿಂಧುವನ್ನು ಆಯ್ಕೆ ಮಾಡಿರುವವರು ಈ ಮೊದಲು ಪ್ರಜ್ವಲ್ ದೇವರಾಜ್ ಅಭಿನಯದ 'ಮುರಳಿ ಮೀಟ್ಸ್ ಮೀರಾ' ಚಿತ್ರ ನಿರ್ದೇಶಿಸಿ ತಕ್ಕಮಟ್ಟ್ಟಿಗೆ ಯಶಸ್ಸು ಗಳಿಸಿದ್ದ ನಿರ್ದೇಶಕ ಮಹೇಶ್ ರಾವ್. "ಆ ಚಿತ್ರ ಚೆನ್ನೈ ನಲ್ಲಿ ಬಿಡುಗಡೆಯಾದಾಗ ನಾನು ಅಲ್ಲಿದ್ದೆ. ಚಿತ್ರ ನೋಡಿದ ನನಗೆ ಅದ್ಯಾವ ಪರಿ ಇಷ್ಟವಾಯಿತೆಂದರೆ ಅದರ ರೀಮೇಕ್ ಹಕ್ಕಿಗಾಗಿ ತಕ್ಷಣ ಮಾತನಾಡಿ ವ್ಯವಹಾರ ಕುದುರುವಂತೆ ನೋಡಿಕೊಂಡೆ.

  ಮೂರು ಮಂದಿ 'ಟೀನ್ ಏಜರ್ಸ್' ಲವ್ ಸ್ಟೋರಿಯಾಗಿರುವ ಈ ಕಥೆಗೆ ನಾಯಕಿ ಸಿಂಧು ಅವರಿಗೆ ನಾಯಕರಾಗಿ ಈ ಮೊದಲು 'ಜಾಲಿಡೇಸ್' ಹಾಗೂ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ್ದ ನಿರಂಜನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇನ್ನಿಬ್ಬರು ಹೊಸಬರನ್ನು, ಅದರಲ್ಲೂ ವಿಶೇಷವಾಗಿ ರಂಗಭೂಮಿ ಹಿನ್ನಲೆಯುಳ್ಳವರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಸದ್ಯದಲ್ಲೇ ಇನ್ನಿಬ್ಬರು ನಾಯಕರು ಹಾಗೂ ನಾಯಕಿಯರ ಆಯ್ಕೆ ನಡೆಯಲಿದೆ" ಎಂದಿದ್ದಾರೆ ಮಹೇಶ್ ರಾವ್.

  ಆಶ್ಚರ್ಯವೆಂದರೆ, ತಮಿಳು ನಿರ್ದೇಶಕ 'ಬಾಲಾಜಿ ಶಕ್ತಿವೇಲ್' ನಿರ್ದೇಶನದ ಹಿಂದಿನ ಸೂಪರ್ ಹಿಟ್ ತಮಿಳು 'ಕಾದಲ್' ಚಿತ್ರವು ಎಸ್ ನಾರಾಯಣ್ ನಿರ್ದೆಶನದಲ್ಲಿ ಗಣೇಶ್-ಅಮೂಲ್ಯಾ ಜೋಡಿಯ ಮೂಲಕ ಕನ್ನಡದಲ್ಲಿ 'ಚೆಲುವಿನ ಚಿತ್ತಾರ' ಹೆಸರಿನಲ್ಲಿ ರೀಮೇಕ್ ಆಗಿತ್ತು. ಇದೀಗ ಮತ್ತೊಂದು ಸೂಪರ್ ಹಿಟ್ ಚಿತ್ರ 'ವಜಕ್ಕುಎನ್ 18/9' ಮತ್ತೆ ಕನ್ನಡಕ್ಕೆ 'ಕೇಸ್ ನಂ 18/9' ಹೆಸರಿನಲ್ಲಿ ರೀಮೇಕ್ ಆಗಲಿದೆ. ಆ ಮೂಲಕ ಸಿಂಧು, ಅಮೂಲ್ಯಾರಂತೆ ಅದ್ಭುತ ಯಶಸ್ಸು ಪಡೆದರೆ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)

  English summary
  Kannada Actress Sindhu Loknath Acts as Heroine in the Super Hit Tamil movie "Vazhakku Enn 18/9' remake Kannada Movie 'Case No 18/9'. This movie to direct by Mahesh Rao in Kannada soon. Hero is Jolly Days' fame Niranjan. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X