For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ರೇಸ್ ನಲ್ಲಿ 'ಸೂರರೈ ಪೊಟ್ರು': ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಸೂರ್ಯ ಮತ್ತು ಅಪರ್ಣ

  |

  ದಕ್ಷಿಣ ಭಾರತದ ಖ್ಯಾತ ನಟ ಸೂರ್ಯ ಮತ್ತು ನಟಿ ಅಪರ್ಣ ಬಾಲಮುರಳಿ ನಟನೆಯ ಸೂಪರ್ ಹಿಟ್ ಸೂರರೈ ಪೊಟ್ರು ಸಿನಿಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಇಳಿದಿರುವ ಸುದ್ದಿ ಕೇಳಿದ್ದೀರಿ. ಇದೀಗ ಈ ಸಿನಿಮಾ ಅತ್ಯುತ್ತಮ ನಟ, ನಟಿ ಮತ್ತು ಉತ್ತಮ ಸಿನಿಮಾ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನುವ ಸುದ್ದಿ ಬಹಿರಂಗವಾಗಿದೆ.

  ಸುಧಾ ಕೊಂಗಾರ ನಿರ್ದೇಶನದಲ್ಲಿ ಮೂಡಿಬಂದ ಸೂರರೈ ಪೊಟ್ರು ಸಿನಿಮಾ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾವಾಗಿದೆ. ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ನಟ ಸೂರ್ಯ ಕಾಣಿಸಿಕೊಂಡಿದ್ದಾರೆ. ಪತ್ನಿಯ ಪಾತ್ರದಲ್ಲಿ ಅಪರ್ಣ ಬಾಲಮುರಳಿ ಮಿಂಚಿದ್ದಾರೆ.

  ನಟ ಸೂರ್ಯ 40ನೇ ಸಿನಿಮಾ ಘೋಷಣೆ; ನಿರ್ದೇಶಕ, ನಾಯಕಿ ಇವರೇನಟ ಸೂರ್ಯ 40ನೇ ಸಿನಿಮಾ ಘೋಷಣೆ; ನಿರ್ದೇಶಕ, ನಾಯಕಿ ಇವರೇ

  ಈ ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ, ಸಂಗೀತ, ನಿರ್ದೇಶನ, ಅತ್ಯುತ್ತಮ ಕತೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿದಿತ್ತು.

  ಇದೀಗ ಅತ್ಯುತ್ತಮ ನಟ ಮತ್ತು ನಟಿ ಅರ್ಹತ ಪಟ್ಟಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ದಕ್ಷಿಣ ಭಾರತದ ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಮಾಹಿತಿ ಹಂಚಿಕೊಂಡಿದ್ದಾರೆ. ಸೂರ್ಯ ಮತ್ತು ಅಪರ್ಣ ಇಬ್ಬರು ಆಸ್ಕರ್ ಅರ್ಹತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ.

  Bigg Boss Kannada Season 8 : ಬಿಗ್ ಬಾಸ್ ಮನೆಗೆ ಹೋಗ್ತಿರೋ ರಾಜಕಾರಿಣಿಯ ಬಗ್ಗೆ ಹೇಳಿದ ಪರಮೇಶ್ವರ್ ಗುಂಡ್ಕಲ್

  ನಟ ಸೂರ್ಯ ಕೋವಿಡ್ ನಿಂದ ಚೇತರಿಸಿಕೊಂಡಿದ್ದು, 40ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 40ನೇ ಚಿತ್ರಕ್ಕೆ ಪಾಂಡಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಮುಹೂರ್ತ ಆಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

  English summary
  Surya starrer Soorarai Pottru has joined oscars in the eligibily list of best actor and Actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X