For Quick Alerts
  ALLOW NOTIFICATIONS  
  For Daily Alerts

  ಅಮೇಜಾನ್‌ನಲ್ಲಿ 10 ಕೋಟಿ ವೀಕ್ಷಣೆ ಕಂಡ 'ಸೂರರೈ ಪೊಟ್ರು': ಲಾಭ ಎಷ್ಟು?

  |

  ತಮಿಳು ನಟ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಿತ್ತು. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

  ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿದ್ದ ಸೂರ್ಯ ಸಿನಿಮಾ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸೇರಿ 10 ಕೋಟಿ ವೀಕ್ಷಣೆ ಕಂಡಿದೆಯಂತೆ. ಈ ಮೂಲಕ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆದಿದೆ ಎನ್ನಲಾಗಿದೆ.

  ಅಮೇಜಾನ್ ಪ್ರೈಮ್ ಪ್ರಕಾರ ಚಿತ್ರ ಮೂರು ಪಟ್ಟು ಲಾಭ ಮಾಡಿದೆಯಂತೆ.

  'ಸೂರರೈ ಪೊಟ್ರು' ಚಿತ್ರಕ್ಕಾಗಿ ಮೋಹನ್ ಬಾಬುಗೆ ಅಪ್ರೋಚ್ ಮಾಡಿದ್ದು ಯಾರು?'ಸೂರರೈ ಪೊಟ್ರು' ಚಿತ್ರಕ್ಕಾಗಿ ಮೋಹನ್ ಬಾಬುಗೆ ಅಪ್ರೋಚ್ ಮಾಡಿದ್ದು ಯಾರು?

  ಅಂದ್ಹಾಗೆ, ಸೂರರೈ ಪೊಟ್ರು ಸಿನಿಮಾ 20 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆಯಂತೆ. ಸೂರ್ಯ ಅವರ ಸಂಭಾವನೆ 25 ಕೋಟಿಯಂತೆ. ಒಟ್ಟು 45 ಕೋಟಿ ಸಿನಿಮಾಗೆ ಆಗಿದೆಯಂತೆ.

  'ಸೂರರೈ ಪೊಟ್ರು' ನೈಜತೆಗೆ ದೂರ ಎಂದವರಿಗೆ ಕ್ಯಾಪ್ಟನ್ ಗೋಪಿನಾಥ್ ಉತ್ತರ'ಸೂರರೈ ಪೊಟ್ರು' ನೈಜತೆಗೆ ದೂರ ಎಂದವರಿಗೆ ಕ್ಯಾಪ್ಟನ್ ಗೋಪಿನಾಥ್ ಉತ್ತರ

  ಅಮೇಜಾನ್ ಪ್ರೈಮ್ 45 ಕೋಟಿ ನೀಡಿ ಈ ಚಿತ್ರವನ್ನು ಖರೀದಿ ಮಾಡಿತ್ತು ಎಂದು ವರದಿಯಾಗಿದೆ. ಟಿವಿ ಹಕ್ಕು ಸನ್ ಪಿಕ್ಚರ್ಸ್‌ಗೆ 15 ಕೋಟಿಗೆ ಸೇಲ್ ಮಾಡಲಾಗಿದೆ.

  ಮತ್ತೊಂದೆಡೆ ಸುಧಾ ಕೊಂಗರಾ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಸೂರ್ಯ, ಅಪರ್ಣ, ಪರೇಶ್ ರಾವತ್, ಮೋಹನ್ ಬಾಬು, ಊರ್ವಶಿ, ಪ್ರಕಾಶ್ ಬೆಳವಾಡಿ, ಸಂಪತ್ ರಾಜ್, ಜಾಕಿ ಶ್ರಾಫ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದರು.

  English summary
  Tamil actor suriya starrer Soorarai Pottru movie generate 10 crore views in amazon prime video. as per source movie made triple profit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X