For Quick Alerts
  ALLOW NOTIFICATIONS  
  For Daily Alerts

  ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ: ವೈದ್ಯರು ಹೇಳಿದ್ದೇನು?

  |

  ಕೊರೊನಾ ವೈರಸ್‌ ಸೋಂಕಿತರಾಗಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  'ಮಳೆ' ಚಿತ್ರದಲ್ಲಿನ Sadhu Kokila , Prem , Amulya behind the scenes

  ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಬಾಲಸುಬ್ರಹ್ಮಣ್ಯಂ ಅವರಿಗೆ ವೆಂಟಿಲೇಟರ್‌ ಸಹಾಯದಿಂದ ಜೀವವಾಯು ಸರಬರಾಜು ಮಾಡಲಾಗುತ್ತಿದ್ದು, ಅಭಿಮಾನಿಗಳು ಆತಂಕದಲ್ಲಿದ್ದಾರೆ.

  'ಬೇಗ ಬಾ ಬಾಲು'....ಎಸ್‌ಪಿಬಿ ಕುರಿತು ಭಾವುಕರಾದ ಇಳಯರಾಜಾ

  ಆಗಸ್ಟ್ 5 ರಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವೈರಸ್ ಇರುವುದು ಖಾತ್ರಿಯಾಗಿತ್ತು. ಅಂದೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 14 ರಂದು ಅವರನ್ನು ಐಸಿಯುಗೆ ವರ್ಗಾಯಿಸಲಾಗಿತ್ತು. ಇದೀಗ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂದು ಅವರ ಎಸ್‌ಪಿಬಿ ಪುತ್ರ ತಿಳಿಸಿದ್ದಾರೆ.

  ಮಾಹಿತಿ ನೀಡುತ್ತಿರುವ ಚರಣ್

  ಮಾಹಿತಿ ನೀಡುತ್ತಿರುವ ಚರಣ್

  ತಂದೆಯ ಆರೋಗ್ಯದ ಬಗ್ಗೆ ಪ್ರತಿದಿನ ಸಾಮಾಜಿಕ ಜಾಲತಾಣದ ಮೂಲಕ ಎಸ್‌ಪಿಬಿ ಪುತ್ರ ಎಸ್‌.ಪಿ.ಚರಣ್ ಮಾಹಿತಿ ನೀಡುತ್ತಿದ್ದು. ಸೋಮವಾರದಂದು ಸಹ ವಿಡಿಯೋ ಮೂಲಕ ಎಸ್‌ಪಿಬಿ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

  ವೈದ್ಯರು ಹೇಳಿರುವುದೇನು?

  ವೈದ್ಯರು ಹೇಳಿರುವುದೇನು?

  ಚರಣ್ ಹೇಳಿರುವಂತೆ, ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆಯಂತೆ. ವೈದ್ಯರು ಹೇಳಿರುವ ಪ್ರಕಾರ ಆರೋಗ್ಯದಲ್ಲಿ ದೊಡ್ಡ ಚೇತರಿಕೆ ಆಗಿಲ್ಲ. ಆದರೆ ಆರೋಗ್ಯ ಮತ್ತಷ್ಟು ಹದಗೆಟ್ಟಿಲ್ಲದಿರುವುದು ಉತ್ತಮ ಸೂಚನೆ ಎಂದಿದ್ದಾರಂತೆ.

  ಎಸ್‌ಪಿ ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ಶಿಫ್ಟ್

  ತಂದೆಯ ಆರೋಗ್ಯ 'ಸ್ಟೇಬಲ್' ಆಗಿದೆ: ಚರಣ್

  ತಂದೆಯ ಆರೋಗ್ಯ 'ಸ್ಟೇಬಲ್' ಆಗಿದೆ: ಚರಣ್

  ಚರಣ್, ವಿಡಿಯೋದಲ್ಲಿ ಹೇಳಿರುವಂತೆ, ತಂದೆಯ ಆರೋಗ್ಯ 'ಸ್ಟೇಬಲ್' ಆಗಿದೆ. ಸುಧಾರಣೆ ಆಗಿರದೇ ಇದ್ದರೂ ಸಹ ಮತ್ತಷ್ಟು ಹದಗೆಟ್ಟಿಲ್ಲ. ಹಾಗಾಗಿ ಇನ್ನು ಕೆಲವು ದಿನಗಳಲ್ಲಿ ಅವರ ಆರೋಗ್ಯ ಸುಧಾರಣೆ ಆಗುವ ವಿಶ್ವಾಸವನ್ನು ಚರಣ್ ವ್ಯಕ್ತಪಡಿಸಿದ್ದಾರೆ.

  ರಜನೀಕಾಂತ್, ಇಳಯರಾಜ ವಿಡಿಯೋ ಸಂದೇಶ

  ರಜನೀಕಾಂತ್, ಇಳಯರಾಜ ವಿಡಿಯೋ ಸಂದೇಶ

  ತಂದೆಗಾಗಿ ಅಭಿಮಾನಿಗಳು, ಗೆಳೆಯರು, ಕುಟುಂಬ ಸದಸ್ಯರು ಪ್ರಾರ್ಥಿಸುತ್ತಿದ್ದಾರೆ ಎಂದಿರುವ ಚರಣ್, ಪ್ರಾರ್ಥನೆಯನ್ನು ಮುಂದುವರೆಸಿ, ಅವರು ಶೀಘ್ರ ಗುಣಮುಖರಾಗಲಿದ್ದಾರೆ ಎಂಬ ವಿಶ್ವಾಸವನ್ನು ಚರಣ್ ವ್ಯಕ್ತಪಡಿಸಿದ್ದಾರೆ. ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಶೀಘ್ರ ಗುಣಮುಖರಾಗಲೆಂದು ಸಂಗೀತ ನಿರ್ದೇಶಕ ಇಳಯರಾಜ, ಸೂಪರ್ ಸ್ಟಾರ್ ರಜನೀಕಾಂತ್ ಪ್ರಾರ್ಥಿಸಿದ್ದಾರೆ. ವಿಡಿಯೋ ಮೂಲಕ ಧೈರ್ಯ ಹೇಳುವ ಯತ್ನ ಮಾಡಿದ್ದಾರೆ.

  English summary
  SP Balasubrahmanyam's health is stable said his son SP Charan. He said SPB is in ventilator still.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X