For Quick Alerts
  ALLOW NOTIFICATIONS  
  For Daily Alerts

  SPB Health Update: ಎಸ್‌ಪಿಬಿ ಆರೋಗ್ಯದಲ್ಲಿ ಸುಧಾರಣೆ ಇಲ್ಲ, ಆದರೆ ಸ್ಥಿರವಾಗಿದ್ದಾರೆ

  |

  ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಕುರಿತು ಆಸ್ಪತ್ರೆಯಿಂದ ಇಂದಿನ (ಆಗಸ್ಟ್ 21) ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದ್ದು, ಎಸ್‌ಪಿಬಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿಲ್ಲ ಎಂದು ತಿಳಿದಿದೆ.

  Upendra ಬ್ರಹ್ಮ ಚಿತ್ರದಲ್ಲಿನ ಡುಯೆಟ್ ಹಾಡು ತಯಾರಾದ ಕ್ಷಣಗಳು | Filmibeat Kannada

  ನಿನ್ನೆಗೆ ಹೋಲಿಸಿಕೊಂಡರೆ ಎಸ್‌ಪಿಬಿ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ಎಸ್‌ಪಿಬಿ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.

  ನನ್ನ ಮುಂದಿನ ಸಿನಿಮಾಗೆ ನೀವು ಹಾಡಲು ಕಾಯುತ್ತಿದೀನಿ: ಎಸ್ ಪಿ ಬಿ ಕುರಿತು ಶಿವಣ್ಣ ಭಾವುಕ ಮಾತು

  'ಇಂದಿನ ಪತ್ರಿಕಾ ಪ್ರಕಟಣೆ ಎಸ್‌ಪಿಬಿ ಸ್ಥಿರವಾಗಿದ್ದಾರೆ ಎಂದು ಹೇಳುತ್ತದೆ. ಇದರರ್ಥ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದಲ್ಲ, ಯಾವುದೇ ತೊಂದರೆಯಿಲ್ಲ, ಅವರ ಎಲ್ಲಾ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ' ಎಂದು ಮಾಹಿತಿ ನೀಡಿದ್ದಾರೆ.

  'ಎಸ್‌ಪಿಬಿ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲು ನಮಗೆ ಸಂತೋಷವಾಗಿದೆ. ನಿಮ್ಮ ಎಲ್ಲಾ ಪ್ರಾರ್ಥನೆಗಳಿಗೆ ಧನ್ಯವಾದಗಳು' ಎಂದು ಎಸ್ ಪಿ ಚರಣ್ ತಿಳಿಸಿದ್ದಾರೆ.

  ಅಂದ್ಹಾಗೆ, ಆಗಸ್ಟ್ 5 ರಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆ ಅವರನ್ನು ಚೆನ್ನೈ ಎಂಜಿಎಂ ಹೆಲ್ತ್ ಕೇರ್‌ಗೆ ದಾಖಲಾಗಿಸಲಾಗಿತ್ತು. ಬಳಿಕ ವೈದ್ಯರ ಚಿಕಿತ್ಸೆಗೆ ಸ್ಪಂದಿಸದ ಕಾರಣ ಆಗಸ್ಟ್ 14 ರಂದು ಅವರನ್ನು ಐಸಿಯುಗೆ ವರ್ಗಾಯಿಸಲಾಗಿತ್ತು.

  English summary
  SP Balasubrahmanyam Health Update: Today's press release says he is stable but that doesn't mean he is completely recovered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X