Don't Miss!
- News
Breaking; ಹಾಲಿ ಶಾಸಕನಿಗೆ ಟಿಕೆಟ್ ನೀಡದಂತೆ ಎಚ್ಡಿಕೆಗೆ ಮನವಿ!
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೆಟ್ರೋಲ್ ಬಂಕ್ ಹುಡುಗನ ಜೀವನ ಬದಲಿಸಿದ್ದು ಎಸ್‌ಪಿ ಬಾಲಸುಬ್ರಹ್ಮಣ್ಯಂ
ಎಸ್.ಪಿ.ಬಾಲಸುಬ್ರಹ್ಮಣ್ಯಂ ತಮ್ಮ ಸುಮಧುರ ಕಂಠದಿಂದ ಎಷ್ಟು ಖ್ಯಾತರೋ ಅಷ್ಟೇ ತಮ್ಮ ವಿನಯವಂತ ವರ್ತನೆ ಹಾಗೂ ಮಾನವೀಯ ಗುಣದಿಂದಲೂ ಖ್ಯಾತರು.
ಎಸ್‌ಪಿ ಬಾಲಸುಬ್ರಹ್ಮಣ್ಯಂ ಗಳಿಸಿದ್ದೆಲ್ಲವೂ ಶ್ರಮದಿಂದಲೇ. ಎಳವೆಯಲ್ಲಿಯೇ ಶ್ರಮದ ಮಹತ್ವ ಅರಿತಿದ್ದರು ಎಸ್‌ಪಿಬಿ. ತಾವು ಮಾತ್ರವಲ್ಲ, ತಮ್ಮೊಂದಿಗೆ ಇನ್ನೊಂದಿಷ್ಟು ಮಂದಿ ಪ್ರತಿಭಾವಂತರನ್ನು ಬೆಳೆಸಿದ್ದಾರೆ ಎಸ್‌ಪಿಬಿ. ಆದರೆ ಆ ಬಗ್ಗೆ ಎಂದೂ ದೊಡ್ಡತನದಿಂದ ಮಾತನಾಡಿದವರಲ್ಲ ಅವರು.
ನನ್ನ
ಮಾತು
ಕೇಳಲಿಲ್ಲ
ನೀನು:
ಎಸ್‌ಪಿಬಿ
ನೆನೆದು
ಭಾವುಕರಾದ
ಇಳಯರಾಜ
ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಭಾವಂತ ಹುಡುಗನೊಬ್ಬ ದೊಡ್ಡ ಸೆಲೆಬ್ರಿಟಿ ಆಗುವಲ್ಲಿ ಎಸ್‌ಪಿಬಿ ಮಾಡಿದ್ದ ಸಹಾಯ, ನೀಡಿದ್ದ ಬೆಂಬಲ ದೊಡ್ಡದು. ಆ ಪ್ರತಿಭಾವಂತ ಯಾರೂ ಅಲ್ಲ, ಖ್ಯಾತ ನಿರ್ದೇಶಕ ಭಾರತಿ ರಾಜು.

ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ರಾಜು
ಹೌದು, ಖ್ಯಾತ ತಮಿಳು ನಿರ್ದೇಶಕ ಭಾರತಿ ರಾಜು ಚೆನ್ನೈನಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ತಾವೇ ನಾಟಕಗಳನ್ನು ಬರೆದುಕೊಂಡು ನಾಟಕ ಆಡುತ್ತಿದ್ದರು. ನಾಟಕಗಳಿಂದಲೇ ಎಸ್‌ಪಿಬಿಗೆ ಭಾರತಿ ರಾಜು ಪರಿಚಯವಾದರು. ಆಮೇಲೆ ನಡೆದಿದ್ದ ಕುತೂಹಲಕಾರಿ ಕತೆ.

ಭಾರತಿ ರಾಜು ನಾಟಕಗಳಿಗೆ ಎಸ್‌ಪಿಬಿ ಸಂಗೀತ
ಭಾರತಿರಾಜು ನಾಟಕಗಳಿಗೆ ಹಾಡು ಹಾಡಲು, ಕೊಳಲು ಊದಲು ಎಸ್‌ಪಿಬಿ ಹೋಗುತ್ತಿದ್ದರು. ಭಾರತಿ ಜೊತೆಗೆ ಆತ್ಮೀಯ ಸ್ನೇಹ ಎಸ್‌ಪಿಬಿಯದ್ದು. ಎಸ್‌ಪಿಬಿ ಹಾಡುಗಾರನಾಗಿ ಬೇಗನೆ ಗುರುತಿಸಿಕೊಂಡು, ಅವಕಾಶಗಳು ಸಹ ದೊರಕಿಬಿಟ್ಟವು, ಆದರೆ ಭಾರತಿ ರಾಜುಗೆ ಅದೃಷ್ಟ ಬಂದಿರಲಿಲ್ಲ.
ನನ್ನ
ಸಮಾಧಿಯ
ಮೇಲೆ
ಹೀಗೆ
ಬರೆಯಿರಿ
ಎಂದಿದ್ದರು
ಎಸ್‌ಪಿ
ಬಾಲಸುಬ್ರಹ್ಮಣ್ಯಂ

ಪುಟ್ಟಣ್ಣ ಕಣಗಾಲ್ ಬಳಿ ಕೆಲಸ ಕೊಡಿಸಿದ್ದು ಎಸ್‌ಪಿಬಿ
ಆಗ ಎಸ್‌ಪಿಬಿ ಅವರು ಭಾರತಿ ರಾಜುವನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಗೆ ಪರಿಚಯ ಮಾಡಿಸಿ ಸಹಾಯಕ ನಿರ್ದೇಶಕ ಸ್ಥಾನ ಕೊಡಿಸಿದ್ದರು ಎಸ್‌ಪಿಬಿ, ಅಷ್ಟೇ ಅಲ್ಲದೆ, ಭಾರತಿ ರಾಜು ಕಷ್ಟದ ಸಮಯದಲ್ಲಿ ತಮ್ಮ ಅಣ್ಣನ ಬಳಿ ಸಹಾಯಕನಾಗಿ ಸೇರಿಸಿದ್ದರು ಎಸ್‌ಪಿಬಿ. ಮಲಯಾಳಂ ಸಿನಿಮಾ ನಿರ್ದೇಶಕ ಬಾಬಿಗೂ ಪರಿಚಯಿಸಿ ಕೆಲಸ ಕೊಡಿಸಿದ್ದರು ಎಸ್‌ಪಿಬಿ. ಆ ನಂತರ ಭಾರತಿ ರಾಜು ಹಿಂತುರಿಗಿ ನೋಡಿದ್ದೇ ಇಲ್ಲ. ಈಗಲೂ ಅತ್ಯುತ್ತಮ ನಿರ್ದೇಶಕ ಅವರು.
Recommended Video

ಇಳಯರಾಜ ರನ್ನು ಪರಿಚಯಿಸಿದ್ದು ಭಾರತಿ ರಾಜು
ಇದೇ ಭಾರತಿ ರಾಜು ಅವರು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವಾಗ, ಅವರ ಊರಿನವರೇ ಆಗಿದ್ದ ಇಳಯರಾಜ ಅವರನ್ನು ಎಸ್‌ಪಿಬಿ ಬಳಿಗೆ ಕಳಿಸಿದ್ದರಂತೆ, ಅವರಿಗೆ ಎಸ್‌ಪಿಬಿ ನಡೆಸುತ್ತಿದ್ದ ಆರ್ಕೆಸ್ಟ್ರಾನಲ್ಲಿ ಕೆಲಸ ಕೊಡೆಂದು. ಅಂತೆಯೇ ಎಸ್‌ಪಿಬಿ ಇಳಯರಾಜ ಗೆ ಕೆಲಸ ಕೊಟ್ಟರು, ಆ ನಂತರ ನಡೆದಿದ್ದು ನಡೆದಿದ್ದು ಇತಿಹಾಸ. ಇಂದು ಈ ಮೂವರೂ ಸಹ ಇಡೀಯ ದೇಶವೇ ಗುರುತಿಸುವ ದೊಡ್ಡ ಸೆಲೆಬ್ರಿಟಿಗಳು. ಈಗ ಎಸ್‌ಪಿಬಿ ಇಲ್ಲ.