For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಗಾಡ್ ಫಾದರ್ ಒಪ್ಪಿಕೊಂಡ ಗುಟ್ಟು ರಟ್ಟು

  |
  <ul id="pagination-digg"><li class="next"><a href="/news/god-father-tamil-varalaru-remake-upendra-pc-sreeram-066803.html">Next »</a></li></ul>

  ವರಮಹಾಲಕ್ಷ್ಮಿ ಹಬ್ಬದಂದು (ಜುಲೈ 27, 2012) ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್‌‌ಫಾದರ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಜಿತ್ ನಟನೆಯ ತಮಿಳಿನ 'ವರಲಾರು' ರೀಮೇಕ್ ಈ ಚಿತ್ರದಲ್ಲಿ ಉಪೇಂದ್ರ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ. ಅಪ್ಪ, ಇಬ್ಬರು ಮಕ್ಕಳ ತ್ರಿಪಾತ್ರ ಉಪ್ಪಿಯದು.

  ರಿಯಲ್ ಸ್ಟಾರ್ ಉಪೇಂದ್ರ 'ಆರಕ್ಷಕ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಈಗ ತ್ರಿಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಮೂರು ಪಾತ್ರಗಳು ಅತಿಂಥವಲ್ಲ. ಪರಮ ಕ್ರೂರಿಗಳಾಗಿರುವ ಪಾತ್ರಗಳವು. ಅಂತಹ ಪಾತ್ರಗಳಲ್ಲಿ ಇದುವರೆಗೆ ಉಪ್ಪಿ ನಟಿಸಿಯೇ ಇಲ್ಲ. ಇಷ್ಟೇ ಅಲ್ಲ, ಈ ಚಿತ್ರದಲ್ಲಿ ನಟಿಸುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ.

  ಗಾಡ್ ಫಾದರ್ ಪಕ್ಕಾ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ನಾಯಕಿಯಾಗಿ ಜಯಮಾಲಾ ಪುತ್ರಿ ಸೌಂದರ್ಯಾ ನಟಿಸಿದ್ದಾರೆ. ಸದಾ, ಭೂಮಿಕಾ ಚಾವ್ಲಾ, ಕ್ಯಾಥರಿನ್ ಥ್ರೆಸಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಾಡ್ ಫಾದರ್ ನಿರ್ದೇಶಕರು ತಮಿಳಿನ ಖ್ಯಾತ ಛಾಯಾಗ್ರಾಹಕ ಪಿ ಸಿ ಶ್ರೀರಾಮ್. ನಿರ್ಮಾಪಕರು ಗಂಡಗಲಿ ಕೆ ಮಂಜು.

  ತಮಿಳಿನ 'ವರಲಾರು' ಚಿತ್ರ ಆ ಕಾಲದಲ್ಲಿ ಭಾರೀ ಪ್ರಶಂಸೆ ಪಡೆದುಕೊಂಡಿತ್ತು. ಮೂರು ಪಾತ್ರಗಳಲ್ಲಿ ಅಜಿತ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ಹೆಣ್ಣಿನಂತೆ, ಹೆಣ್ಣಿಗನಂತೆ ಕಾಣಿಸಿಕೊಂಡು ಭಾರೀ ಸಂಚಲನ ಸೃಷ್ಟಿಸಿದ್ದರು ಅಜಿತ್. ಅದೇ ಪಾತ್ರವನ್ನು ಇಲ್ಲಿ ಉಪ್ಪಿ ಮಾಡಿದ್ದಾರೆ. ಬಹಳಷ್ಟು ನಾಯಕರು ನಿರಾಕರಿಸಿದ ಪಾತ್ರವನ್ನು ಉಪೇಂದ್ರ ಒಪ್ಪಿ ಮಾಡಿದ್ದಾರೆ.

  ಆಶ್ಚರ್ಯವೆಂದರೆ ಉಪೇಂದ್ರ ಈ ಚಿತ್ರವನ್ನು ಒಪ್ಪಿದ್ದು ಕೇವಲ ನಿರ್ಮಾಪಕ ಕೆ. ಮಂಜು ಅವರ ಸ್ನೇಹಕ್ಕೆ ಬೆಲೆ ಕೊಡುವ ದೃಷ್ಟಿಯಿಂದ ಎಂಬುದು ಗಮನಾರ್ಹ ಸಂಗತಿ. ಈ ವಿಷಯವನ್ನು ಸ್ವತಃ ಉಪೇಂದ್ರ ಬಾಯ್ಬಿಟ್ಟಿದ್ದಾರೆ. ಈ ಚಿತ್ರದ ತೆಲುಗು ರಿಮೇಕ್‌ ನಲ್ಲಿ ಉಪ್ಪಿ ನಟಿಸಬೇಕು ಎಂಬ ಆಫರ್ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/god-father-tamil-varalaru-remake-upendra-pc-sreeram-066803.html">Next »</a></li></ul>
  English summary
  Super Star Upendra movie God Father Releases on 27th July 2012 all over Karnataka. This is Tamil Movie Varalaru Remake. Upendra acted in three role in this movie. Jayamala daughter Soundarya debuts in this movie. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X