For Quick Alerts
  ALLOW NOTIFICATIONS  
  For Daily Alerts

  ರಜನಿ- ಶಿವಣ್ಣ 'ಜೈಲರ್' ಸಿನಿಮಾ ಅಪ್‌ಡೇಟ್: ಏನಂದ್ರು ಸೂಪರ್ ಸ್ಟಾರ್ ?

  |

  ಒಂದು ದೊಡ್ಡ ಬ್ರೇಕ್‌ಗಾಗಿ ಸೂಪರ್ ಸ್ಟಾರ್‌ ರಜನಿಕಾಂತ್ ಬಹಳ ವರ್ಷಗಳಿಂದ ಕಾಯುತ್ತಿದ್ದಾರೆ. ನೆಲ್ಸನ್ ನಿರ್ದೇಶನದಲ್ಲಿ 'ಜೈಲರ್' ಸಿನಿಮಾ ಘೋಷಣೆಯಾಗಿದೆ. ಆದರೆ ಯಾವಾಗ ಶೂಟಿಂಗ್ ಅನ್ನುವುದರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.

  ಇಂದು (ಆಗಸ್ಟ್ 7) ಚೆನ್ನೈ ಏರ್‌ಪೋರ್ಟ್‌ನಲ್ಲಿ ಮಾಧ್ಯಮದವರ ಪ್ರಶ್ನೆಗೆ ತಲೈವಾ ಪ್ರತಿಕ್ರಿಯಿಸಿದ್ದಾರೆ. 'ದರ್ಬಾರ್', 'ಅಣ್ಣಾತ್ತೆ' ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಖಡಕ್ ಟೈಟಲ್‌ನಿಂದಲೇ 'ಜೈಲರ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದ್ದು, ಯಾವಾಗ ಶೂಟಿಂಗ್ ? ಯಾವಾಗ ಸಿನಿಮಾ ರಿಲೀಸ್? ಅಂತ ಅಭಿಮಾನಿಗಳು ಕಾಯುವಂತಾಗಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಹ ಈ ಚಿತ್ರಲ್ಲಿ ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಹಾಗಾಗಿ ಸ್ಯಾಂಡಲ್‌ವುಡ್‌ನಲ್ಲೂ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ.

  ಅತಿ ಹೆಚ್ಚು ತೆರಿಗೆ ಕಟ್ಟಿ ಪ್ರಶಸ್ತಿ ಪಡೆದ ತಲೈವಾ- ಕಿಲಾಡಿಯ ಒಟ್ಟು ಆಸ್ತಿ ಮೌಲ್ಯ ಎಷ್ಟು?ಅತಿ ಹೆಚ್ಚು ತೆರಿಗೆ ಕಟ್ಟಿ ಪ್ರಶಸ್ತಿ ಪಡೆದ ತಲೈವಾ- ಕಿಲಾಡಿಯ ಒಟ್ಟು ಆಸ್ತಿ ಮೌಲ್ಯ ಎಷ್ಟು?

  ಐಶ್ವರ್ಯ ರೈ 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಜೋಡಿಯಾಗಿ ನಟಿಸಲಿದ್ದಾರೆ. ರಮ್ಯಾ ಕೃಷ್ಣ, ಯೋಗಿಬಾಬು, ಪ್ರಿಯಾಂಕ ಅರುಣ್ ಮೋಹನ್ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಹೈವೋಲ್ಟೇಜ್ ಆಕ್ಷನ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. 'ಜೈಲರ್' ಅವತಾರದಲ್ಲಿ ತಲೈವಾನ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

   ಮುಂದೆ ಶೂಟಿಂಗ್ ಎಂದ ರಜಿನಿಕಾಂತ್

  ಮುಂದೆ ಶೂಟಿಂಗ್ ಎಂದ ರಜಿನಿಕಾಂತ್

  ದೆಹಲಿಗೆ ಹೋಗಿದ್ದ ಸೂಪರ್ ಸ್ಟಾರ್ ರಜಿನಿಕಾಂತ್ ಇಂದು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದ ತಲೈವಾನ ಮಾಧ್ಯಮದವರು ಮುಂದೇನು ಸಾರ್ ಎಂದು ಕೇಳಿದ್ದರು. ಅದಕ್ಕೆ 'ಶೂಟಿಂಗೇ' ಎನ್ನುತ್ತಾ ತಮ್ಮದೇ ಸ್ಟೈಲ್‌ನಲ್ಲಿ ನಕ್ಕು ಹೊರಟಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

  'ನನ್ನ ಜೀವನದಲ್ಲಿ ಶೇಕಡಾ 10ರಷ್ಟು ಸಂತೋಷ, ನೆಮ್ಮದಿ ಉಳಿಯಲಿಲ್ಲ'- ರಜನಿಕಾಂತ್'ನನ್ನ ಜೀವನದಲ್ಲಿ ಶೇಕಡಾ 10ರಷ್ಟು ಸಂತೋಷ, ನೆಮ್ಮದಿ ಉಳಿಯಲಿಲ್ಲ'- ರಜನಿಕಾಂತ್

   ಜೈಲಿನಲ್ಲೇ ಇಡೀ ಸಿನಿಮಾ ಕಥೆ

  ಜೈಲಿನಲ್ಲೇ ಇಡೀ ಸಿನಿಮಾ ಕಥೆ

  ಆಗಸ್ಟ್ ಮೊದಲ ವಾರದಲ್ಲೇ 'ಜೈಲರ್' ಸಿನಿಮಾ ಸೆಟ್ಟೇರುತ್ತೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಕೊಂಚ ತಡವಾಗಿದ್ದು, ಶೀಘ್ರದಲ್ಲೇ ಸಿನಿಮಾ ಮುಹೂರ್ತ ನೆರವೇರಲಿದೆ. ಚಿತ್ರಕ್ಕಾಗಿ ಈಗಾಗಲೇ ಸೆಟ್‌ಗಳನ್ನು ಹಾಕುವ ಕೆಲಸವೂ ಶುರುವಾಗಿದೆಯಂತೆ. 'ಬೀಸ್ಟ್' ಚಿತ್ರದ ಬಹುತೇಕ ಕಥೆಯನ್ನು ಒಂದು ಮಾಲ್‌ನಲ್ಲಿ ಕಟ್ಟಿಕೊಟ್ಟಿದ್ದ ನಿರ್ದೇಶನ ನೆಲ್ಸನ್, 'ಜೈಲರ್' ಕಥೆಯನ್ನು ಸೆಂಟ್ರಲ್‌ ಜೈಲ್‌ನಲ್ಲೇ ಹೇಳಲು ಹೊರಟಿದ್ದಾರೆ ಅನ್ನಲಾಗ್ತಿದೆ.

   ಎಲ್ಲೆಲ್ಲಿ ಸಿನಿಮಾ ಚಿತ್ರೀಕರಣ

  ಎಲ್ಲೆಲ್ಲಿ ಸಿನಿಮಾ ಚಿತ್ರೀಕರಣ

  'ಜೈಲರ್' ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ಜೋರಾಗಿ ನಡೀತಿದ್ದು, ದೆಹಲಿ, ಹೈದರಾಬಾದ್‌, ಚೆನ್ನೈನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಪ್ಲ್ಯಾನ್ ನಡೀತಿದೆಯಂತೆ. ಮೊದಲು ಚೆನ್ನೈ, ನಂತರ ಕಾರೈಕಲ್ ಬೀಚ್‌ನಲ್ಲಿ ಶೂಟಿಂಗ್ ನಡೆಯಲಿದೆ. ಇನ್ನು ಕರ್ನಾಟಕದಲ್ಲೂ ಚಿತ್ರೀಕರಣಕ್ಕೆ ಚಿಂತನ ನಡೆಸಿದ್ದು, ರಜನಿ- ಶಿವಣ್ಣ ಕಾಂಬಿನೇಷನ್‌ ದೃಶ್ಯಗಳನ್ನು ಇಲ್ಲೇ ಸೆರೆಹಿಡಿಯುವ ಸಾಧ್ಯತೆಯಿದೆ.

   ಹೊಸ ಲುಕ್‌ನಲ್ಲಿ 'ಜೈಲರ್'

  ಹೊಸ ಲುಕ್‌ನಲ್ಲಿ 'ಜೈಲರ್'

  ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಗೆಟಪ್‌ಗಳು, ಲುಕ್, ಸ್ಟೈಲ್ ಹೇಗೆಲ್ಲಾ ಇರುತ್ತೆ ಅನ್ನುವುದನ್ನು ಬಿಡಿಸಿ ಹೇಳೋದು ಬೇಕಾಗಿಲ್ಲ. 'ಜೈಲರ್' ಚಿತ್ರದಲ್ಲೂ ತಲೈವಾನ ಹೊಸ ಲುಕ್‌ನಲ್ಲಿ ತೋರಿಸುವ ಪ್ರಯತ್ನ ನಡೀತಿದೆಯಂತೆ. ಸೆಲೆಬ್ರೆಟಿ ಸ್ಟೈಲಿಸ್ಟ್ ಆಲಿಮ್ ಹಕೀಮ್ ಸೂಪರ್ ಸ್ಟಾರ್ ಸ್ಟೈಲ್‌ಗೆ ಹೊಸ ಟಚ್ ಕೊಡುವ ಸುಳಿವು ಸಿಕ್ಕಿದೆ. ಇತ್ತೀಚೆಗೆ ರಜಿನಿಕಾಂತ್‌ ಜೊತೆ ಕೆಲಸ ಮಾಡುತ್ತಿರುವುದಾಗಿ ಆಲಿಮ್ ಪೋಸ್ಟ್ ಮಾಡಿದ್ದರು.

  English summary
  Superstar Rajinikanth Jailer Movie Shooting Update. Know More.
  Sunday, August 7, 2022, 18:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X