For Quick Alerts
  ALLOW NOTIFICATIONS  
  For Daily Alerts

  ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿರುವ ಸಾಯಿ ಪಲ್ಲವಿಗೆ ತಾರಾ ದಂಪತಿಯ ಬೆಂಬಲ

  |

  'ಲೇಡಿ ಪವರ್ ಸ್ಟಾರ್' ಬಿರುದು ಪಡೆದುಕೊಂಡಿದ್ದಾರೆ ನಟಿ ಸಾಯಿ ಪಲ್ಲವಿ. ಅವರು ಮಾಡುವ ಪಾತ್ರಗಳು, ನೀಡುವ ಪರ್ಫಾರ್ಮೆನ್ಸ್ ಹಾಗಿರುತ್ತವೆ.

  ಪುರುಷ ಪ್ರಾಧಾನ್ಯದ ಸಿನಿಮಾಗಳೇ ತುಂಬಿರುವ ಚಿತ್ರರಂಗದಲ್ಲಿ ಸಾಯಿ ಪಲ್ಲವಿ ನಾಯಕಿಗೆ ಪ್ರಾಮುಖ್ಯತೆ ಇರುವ ಸಿನಿಮಾಗಳನ್ನಷ್ಟೆ ಒಪ್ಪಿಕೊಂಡು ನಟಿಸುತ್ತಾ ಬರುತ್ತಿದ್ದಾರೆ. ಸ್ಟಾರ್ ನಟನೊಟ್ಟಿಗೆ ಸಿನಿಮಾ ಮಾಡಿದರೂ ನಾಯಕಿ ಪಾತ್ರಕ್ಕೆ ಸೂಕ್ತ ಪ್ರಾಧಾನ್ಯತೆ ಇರುವುದನ್ನು ಖಾತ್ರಿಪಡಿಸಿಕೊಂಡ ಬಳಿಕವಷ್ಟೆ ನಟಿಸಲು ಸೈ ಎನ್ನುತ್ತಾರೆ ಸಾಯಿ ಪಲ್ಲವಿ.

  ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಸಾಯಿ ಪಲ್ಲವಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ಕೇವಲ ಮಾಸ್ ಸಿನಿಮಾಗಳಷ್ಟೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗುತ್ತಿರುವ ಈ ಕಾಲದಲ್ಲಿ ಮಹಿಳಾ ಪ್ರಧಾನ ಸಿನಿಮಾ ಇಟ್ಟುಕೊಂಡು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ಹೊರಟಿದ್ದಾರೆ ಸಾಯಿ ಪಲ್ಲವಿ ಹಾಗೂ ತಂಡ. ಇದಕ್ಕೆ ಅವರಿಗೆ ತಮಿಳಿನ ತಾರಾ ದಂಪತಿಯ ಬೆಂಬಲ ದೊರೆತಿದೆ.

  ಸಾಯಿ ಪಲ್ಲವಿಗೆ ಬೆಂಬಲ ನೀಡಿದ ಸೂರ್ಯ, ಜ್ಯೋತಿಕಾ

  ಸಾಯಿ ಪಲ್ಲವಿಗೆ ಬೆಂಬಲ ನೀಡಿದ ಸೂರ್ಯ, ಜ್ಯೋತಿಕಾ

  ಸಾಯಿ ಪಲ್ಲವಿ 'ಗಾರ್ಗಿ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಪ್ಪಟ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಎಲ್ಲ ಭಾಷೆಗಳಲ್ಲಿಯೂ ಸಾಯಿ ಪಲ್ಲವಿಯೇ ಡಬ್ ಮಾಡಿರುವುದು ವಿಶೇಷ. ಈ ಸಿನಿಮಾಕ್ಕೆ ದೊಡ್ಡ ನಟರು ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ ಪ್ರಮುಖರು ತಮಿಳಿನ ಸ್ಟಾರ್ ನಟ ಸೂರ್ಯ ಹಾಗೂ ಅವರ ಪತ್ನಿ ಜ್ಯೋತಿಕಾ.

  'ಗಾರ್ಗಿ' ಜೊತೆ ಕೈಜೋಡಿಸಿದ ಸೂರ್ಯ, ಜ್ಯೋತಿಕ

  'ಗಾರ್ಗಿ' ಜೊತೆ ಕೈಜೋಡಿಸಿದ ಸೂರ್ಯ, ಜ್ಯೋತಿಕ

  ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಸದಭಿರುಚಿಯುಳ್ಳ, ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಸೂರ್ಯ ಹಾಗೂ ಜ್ಯೋತಿಕ, ಸಾಯಿ ಪಲ್ಲವಿಯ 'ಗಾರ್ಗಿ' ಜೊತೆ ಕೈಜೋಡಿಸಿದ್ದು, ಈ ಸಿನಿಮಾವನ್ನು ಅವರೇ ಪ್ರೆಸೆಂಟ್ ಮಾಡಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸೂರ್ಯ, ''ನಾನು ಮತ್ತು ಜೋ (ಜೋತಿಕ) 'ಗಾರ್ಗಿ' ಜೊತೆ ಕೈಜೋಡಿಸಿದ್ದೇವೆ. ಕೆಲವು ಪಾತ್ರಗಳು ನಿಮ್ಮ ಮನದೊಳಗೆ ಅಚ್ಚಳಿಯದೇ ಉಳಿದುಕೊಳ್ಳಲಿವೆ'' ಎಂದಿದ್ದಾರೆ.

  ಈ ಸಿನಿಮಾ ಇಷ್ಟವಾಗಲಿದೆ ಎಂಬ ನಿರೀಕ್ಷೆ ಇದೆ: ಸೂರ್ಯ

  ಈ ಸಿನಿಮಾ ಇಷ್ಟವಾಗಲಿದೆ ಎಂಬ ನಿರೀಕ್ಷೆ ಇದೆ: ಸೂರ್ಯ

  ಮುಂದುವರೆದು, ''ಹೊಸ ಬಗೆಯ ಆಲೋಚನೆಗಳನ್ನು, ಅತ್ಯುತ್ತಮ ಬರವಣಿಗೆಯನ್ನು ಸೆಲೆಬ್ರೇಟ್ ಮಾಡುವ ಸಮಯ ಇದಾಗಿದೆ. ನಿಮಗೆಲ್ಲರಿಗೆ ಈ ಸಿನಿಮಾ ಇಷ್ಟವಾಗಲಿದೆ ಎಂಬ ನಿರೀಕ್ಷೆ ಇದೆ'' ಎಂದಿದ್ದಾರೆ. ಸೂರ್ಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಾಯಿ ಪಲ್ಲವಿ, ''ನಿಮ್ಮ ಈ ಪ್ರೀತಿ ಪೂರ್ವಕ ನಡೆಗೆ ಜ್ಯೋತಿಕಾ ಹಾಗೂ ಸೂರ್ಯ ಅವರಿಗೆ ಧನ್ಯವಾದ. ಇದು ನಮ್ಮ ಪಾಲಿಗೆ ಬಹಳ ಮಹತ್ವದ್ದು'' ಎಂದಿದ್ದಾರೆ.

  ಸಾಮಾನ್ಯ ಮಹಿಳೆಯ ಕಾನೂನು ಹೋರಾಟದ ಕತೆ

  ಸಾಮಾನ್ಯ ಮಹಿಳೆಯ ಕಾನೂನು ಹೋರಾಟದ ಕತೆ

  'ಗಾರ್ಗಿ' ಸಿನಿಮಾವು, ಸಾಮಾನ್ಯ ಮಹಿಳೆಯೊಬ್ಬಾಕೆ ಮಾಡುವ ಕಾನೂನು ಹೋರಾಟದ ಕತೆಯನ್ನು ಹೊಂದಿದೆ. ಐದು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿರುವ ಈ ಸಿನಿಮಾವನ್ನು ಗೌತಮ್ ರಾಮಚಂದ್ರನ್ ಬರೆದು, ನಿರ್ದೆಶನ ಮಾಡಿದ್ದಾರೆ. ಈ ಸಿನಿಮಾಕ್ಕಾಗಿ ಸಾಯಿ ಪಲ್ಲವಿ, ಶೀಥಲ್ ಶೆಟ್ಟಿಯಿಂದ ಕನ್ನಡ ಕಲಿತು ತಾವೇ ಡಬ್ಬಿಂಗ್ ಮಾಡಿದ್ದಾರೆ. ಸಿನಿಮಾವು ಕನ್ನಡದಲ್ಲಿಯೂ ಬಿಡುಗಡೆ ಆಗಲಿದೆ.

  English summary
  Actor Suriya and Jyothika supports Sai Pallavi's movie Gargi. Suriya and Jyothika will present Gargi movie in pan India level.
  Monday, June 27, 2022, 10:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X