For Quick Alerts
  ALLOW NOTIFICATIONS  
  For Daily Alerts

  ಸೂರ್ಯ ಮುಂದಿನ ಚಿತ್ರದ ಬಜೆಟ್ ಕೇಳಿದ್ರಾ ಅಬ್ಬಾ ಅಂತೀರಾ!

  |

  'ಸೂರರೈ ಪೊಟ್ರು' ಸಿನಿಮಾದ ಯಶಸ್ಸಿನ ನಂತರ ತಮಿಳು ನಟ ಸೂರ್ಯ 'ಜೈಭೀಮ್' ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ತಮ್ಮದೇ ಪ್ರೊಡಕ್ಷನ್‌ನಲ್ಲಿ ಈ ಚಿತ್ರ ಸೆಟ್ಟೇರಿದ್ದು, ನೈಜ ಘಟನೆಯಾಧರಿತ ಕಥೆ ಎನ್ನಲಾಗಿದೆ. ಇದರ ಜೊತೆಗೆ 'ವೆಟ್ರಿಮಾರನ್' ನಿರ್ದೇಶನದಲ್ಲಿ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು ಭಾರಿ ಕುತೂಹಲ ಮೂಡಿಸಿದೆ.

  ಚಿತ್ರಕ್ಕೆ 'ವಾದಿವಾಸಲ್' ಎಂದು ಹೆಸರಿಟ್ಟಿದ್ದು, ಅಧಿಕೃತವಾಗಿ ಚಿತ್ರೀಕರಣ ಪ್ರಾರಂಭಿಸಿಲ್ಲ. ಸೆಪ್ಟೆಂಬರ್‌ ತಿಂಗಳಲ್ಲಿ ಈ ಚಿತ್ರ ಶೂಟಿಂಗ್ ಶುರು ಮಾಡಲಿದೆ ಎಂದು ಹೇಳಲಾಗಿತ್ತು. ಇದೀಗ, ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

  ಅಮೇಜಾನ್ ಪ್ರೈಮ್ ಜೊತೆ ನಟ ಸೂರ್ಯ ಮೆಗಾ ಒಪ್ಪಂದಕ್ಕೆ ಸಹಿಅಮೇಜಾನ್ ಪ್ರೈಮ್ ಜೊತೆ ನಟ ಸೂರ್ಯ ಮೆಗಾ ಒಪ್ಪಂದಕ್ಕೆ ಸಹಿ

  ಪ್ರಿ-ಪ್ರೊಡಕ್ಷನ್‌ಗಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಹಾಗಾಗಿ ಅಕ್ಟೋಬರ್‌ನಲ್ಲಿ ಶೂಟಿಂಗ್‌ಗೆ ಹೋಗಲು ತೀರ್ಮಾನಿಸಲಾಗಿದೆಯಂತೆ. ಜಿವಿ ಪ್ರಕಾಶ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡ್ತಿದ್ದು, ಅದಾಗಲೇ ಕಂಪೋಸಿಂಗ್ ಆರಂಭಿಸಿದ್ದಾರೆ. ತಮಿಳು ಬರಹಗಾರ ಸಿಎಸ್ ಚೆಲ್ಲಪ್ಪ ಬರೆದಿರುವ ಕಾದಂಬರಿ ಆಧರಿಸಿ ಸಿನಿಮಾ ಮಾಡಲಾಗಿದ್ದು, ಕಲೈಪುಲಿ ತನು ಬಂಡವಾಳ ಹಾಕುತ್ತಿದ್ದಾರೆ. ಬಜೆಟ್ ವಿಚಾರದಲ್ಲಿ ಈ ಚಿತ್ರ ಹೆಚ್ಚು ಸುದ್ದಿ ಮಾಡಿದೆ. ಖ್ಯಾತ ಚಿತ್ರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿರುವ ಪ್ರಕಾರ, ಸುಮಾರು 200ಕೋಟಿಗೂ ಅಧಿಕ ಮೊತ್ತವನ್ನು ಈ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರಂತೆ ನಿರ್ಮಾಪಕರು.

  ಸದ್ಯದ ವರದಿ ಪ್ರಕಾರ, ತಮಿಳುನಾಡಿನ ಖ್ಯಾತ ಕ್ರೀಡೆ ಜಲ್ಲಿಕಟ್ಟು ಬಗ್ಗೆ ಈ ಚಿತ್ರ ಕಥೆ ಹೊಂದಿದೆ. ಯೋಜನೆಯಂತೆ ಚಿತ್ರೀಕರಣದಲ್ಲಿ ನೂರಾರು ಸಂಖ್ಯೆಯ ಜೂನಿಯರ್ ಕಲಾವಿದರು ಭಾಗವಹಿಸಬೇಕಾಗಿದೆ. ಕೋವಿಡ್ ಭೀತಿಯಿರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ಆರಂಭಿಸಲು ಸಾಧ್ಯವಿಲ್ಲ. ಶೂಟಿಂಗ್ ಆರಂಭಕ್ಕೂ ಮುನ್ನ ತಂತ್ರಜ್ಞರು ಮತ್ತು ಕಲಾವಿದರೆಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವ ಯೋಜನೆಯೂ ಇದೆ. ಇನ್ನು ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ತಂದೆ ಹಾಗೂ ಮಗ ಎರಡೂ ಪಾತ್ರವನ್ನು ಸೂರ್ಯ ಅವರೇ ನಿಭಾಯಿಸಲಿದ್ದಾರೆ.

  ಥ್ರಿಲ್ ಹೆಚ್ಚಿಸಿದ 'ಜೈ ಭೀಮ್' ಸುದ್ದಿ: ಸೂರ್ಯ ನಟಿಸಲಿರುವ ಲಾಯರ್ ಇವರೇಥ್ರಿಲ್ ಹೆಚ್ಚಿಸಿದ 'ಜೈ ಭೀಮ್' ಸುದ್ದಿ: ಸೂರ್ಯ ನಟಿಸಲಿರುವ ಲಾಯರ್ ಇವರೇ

  'ಜೈ ಭೀಮ್' ಸಿನಿಮಾ ಚಿತ್ರೀಕರಣ ಆರಂಭಿಸಿದ್ದು, ಟಿಜೆ ಜ್ಞಾನವೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 1993 ಕಾನೂನು ಹೋರಾಟವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಎನ್ನುವವರ ಪಾತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಈ ಸಿನಿಮಾ ಇರುಳಾರ್ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ಕಾನೂನು ಹೋರಾಟದ ಬಗ್ಗೆ ಇರುವ ಚಿತ್ರವಾಗಿದೆ. ನ್ಯಾಯಮೂರ್ತಿ ಕೆ.ಚಂದ್ರು ಹೆಸರಾಂತ ನ್ಯಾಯಧೀಶರಾಗಿದ್ದು, 96,000 ಅಧಿಕ ಪ್ರಕರಣಗಳನ್ನು ನಡೆಸಿದ್ದಾರೆ. ಹಾಗೂ ಕೆಲವು ಮಹತ್ವದ ತೀರ್ಪುಗಳಿಗಾಗಿ ಕಾನೂನು ವಲಯದಲ್ಲಿ ಭಾರಿ ಪ್ರಸಿದ್ಧರಾಗಿದ್ದಾರೆ.

  Suriya Starrer Vaadivaasal to begin from October

  ಪಾಂಡಿರಾಜ್ ನಿರ್ದೇಶನದಲ್ಲಿ ಸಿನಿಮಾವೊಂದು ಮಾಡುತ್ತಿದ್ದು, ಈ ಚಿತ್ರ ಸೆಪ್ಟೆಂಬರ್‌ ತಿಂಗಳಲ್ಲಿ ಮುಗಿಸುವ ಯೋಜನೆ ಇದೆ. ಇನ್ನು ವಿಶೇಷ ಅಂದ್ರೆ ಸೂರ್ಯ ಮತ್ತು ಜ್ಯೋತಿಕಾ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಮುಂದಿನ ನಾಲ್ಕು ಸಿನಿಮಾಗಳನ್ನು ಅಮೇಜಾನ್ ಪ್ರೈಮ್‌ಗೆ ಮಾರಾಟ ಮಾಡಿದ್ದಾರೆ. ಇದರಲ್ಲಿ ಜೈಭೀಮ್ ಸಿನಿಮಾವೂ ಸೇರಿದೆ.

  ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಜೈ ಭೀಮ್' ಸಿನಿಮಾ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. 'ಉದನ್‌ಪಿರಪ್ಪೆ' ಚಿತ್ರ ಅಕ್ಟೋಬರ್ ತಿಂಗಳಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. 'ಓ ಮೈ ಡಾಗ್' ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಪ್ರೀಮಿಯರ್ ಕಾಣಲಿದೆ. 'ರಾಮನ್ ಆಂಡಲುಮ್ ರಾವಣನ್ ಆಂಡಲುಮ್' ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಮಣಿರತ್ನಂ ನಿರ್ಮಾಣದಲ್ಲಿ ತಯಾರಾಗಿದ್ದ 'ನವರಸ' ವೆಬ್ ಸಿರೀಸ್‌ನಲ್ಲಿ ಸೂರ್ಯ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಒಂಬತ್ತು ಕಥೆ, ಒಂಬತ್ತು ನಿರ್ದೇಶಕರು ಮಾಡಿರುವ ಚಿತ್ರ ಇದಾಗಿದ್ದು, ಒಂದು ಭಾಗದಲ್ಲಿ ಸೂರ್ಯ ಸಹ ನಟಿಸಿದ್ದಾರೆ.

  English summary
  The most anticipated Suriya's Vaadivaasal to begin from October. The budget is said to be a mammoth 200+ cr.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X