For Quick Alerts
  ALLOW NOTIFICATIONS  
  For Daily Alerts

  ಸೂರ್ಯ-ಜ್ಯೋತಿಕಾ ವಿವಾಹ ವಾರ್ಷಿಕೋತ್ಸವ: ಸ್ಟಾರ್ ಜೋಡಿಯ ಇಂಟರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ

  |

  ತಮಿಳು ಸಿನಿಮಾರಂಗದ ಪ್ರಸಿದ್ಧ ಮತ್ತು ಕ್ಯೂಟ್ ಜೋಡಿಗಳಲ್ಲಿ ನಟ ಸೂರ್ಯ ಮತ್ತು ಜ್ಯೋತಿಕಾ ಜೋಡಿ ಒಂದು. ಈ ಸ್ಟಾರ್ ಜೋಡಿಗೆ ಇಂದು ವಿಶೇಷವಾದ ದಿನ. ನಟಿ ಜ್ಯೋತಿಕಾ ಮತ್ತು ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುದಿನವಿದು. ಸೂರ್ಯ ಮತ್ತು ಜ್ಯೋತಿಕಾ ದಾಂಪತ್ಯಕ್ಕೆ 15 ವರ್ಷಗಳ ಸಂಭ್ರಮ. ತಮಿಳು ಸ್ಟಾರ್ ನಟ ಸೂರ್ಯ ನಟಿ ಜ್ಯೋತಿಕಾ ಅವರನ್ನು 2006, ಸೆಪ್ಟಂಬರ್ 11ರಂದು ವಿವಾಹ ಆಗಿದರು.

  15 ವರ್ಷಗಳ ಸುಂದರ ದಾಂಪತ್ಯವನ್ನು ಕಳೆದಿರುವ ತಾರಾಜೋಡಿಗೆ ಅಭಿಮಾನಿಗಳು ಮತ್ತು ಚಿತ್ರದರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೆ ಹರಿದುಬರುತ್ತಿದೆ. ಈ ಸಂತೋಷದ ದಿನದಂದು ನಟಿ ಜ್ಯೋತಿಕಾ ಸುಂದರ ಫೋಟೋ ಶೇರ್ ಮಾಡುವ ಮೂಲಕ ಪತಿಯ ಬಗ್ಗೆ ಪ್ರೀತಿಯ ಸಾಲಿಗಳನ್ನು ಬರೆದಿದ್ದಾರೆ. ಪತ್ನಿಯ ಪೋಸ್ಟ್ ಶೇರ್ ಮಾಡಿ ನಟ ಸೂರ್ಯ ಕೂಡ ಜ್ಯೋತಿಕಾ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

  ಅಂದಹಾಗೆ ಜ್ಯೋತಿಕಾ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಪ್ರೀತಿಯ ಪತಿ ಸೂರ್ಯ ಜೊತೆ ಇರುವ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಅಂದಹಾಗೆ ನಟಿ ಜ್ಯೋತಿಕಾ ಇತ್ತೀಚಿಗಷ್ಟೆ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಡುತ್ತಿದ್ದಂತೆ ಫಾಲೋವರ್ಸ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ತನ್ನ ಹೊಸ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜ್ಯೋತಿಕಾ ಪತಿ ಸೂರ್ಯ ಬಗ್ಗೆ ಬರೆದುಕೊಂಡಿದ್ದಾರೆ.

  "15 ವರ್ಷಗಳ ಸಂತೋಷ. ಪ್ರೀತಿ ಮತ್ತು ಆಶೀರ್ವಾದ ಮಾಡಿದ ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಜ್ಯೋತಿಕಾ ಪೋಸ್ಟ್ ಗೆ ನಟ ಸೂರ್ಯ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ. "ನೀವು ನನ್ನ ಬ್ಲೆಸಿಂಗ್ ಜ್ಯೋ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಮುಂದೆ ಓದಿ..

  1999ರಲ್ಲಿ ಮೊದಲ ಭೇಟಿ

  1999ರಲ್ಲಿ ಮೊದಲ ಭೇಟಿ

  1999ರಲ್ಲಿ ನಟ ಸೂರ್ಯ ಪುವೆಲ್ಲಂ ಕೇಟ್ಟುಪ್ಪರ್ ಸಿನಿಮಾ ಸೆಟ್ ನಲ್ಲಿ ಮೊದಲ ಬಾರಿಗೆ ನಟಿ ಜೋತಿಕಾ ಅವರನ್ನು ಭೇಟಿಯಾದರು. ಇದು ಸಿನಿಮಾ ಸೂರ್ಯ ಅಭಿನಯದ 5ನೇ ಚಿತ್ರ. ಜ್ಯೋತಿಕಾಗಿ 3ನೇ ಸಿನಿಮಾ. ಆ ಸಿನಿಮಾ ಮಾಡುವಾಗ ಇಬ್ಬರು ಸಹ ಇನ್ನೂ ಸ್ಟಾರ್ ಆಗಿ ಹೊರಹೊಮ್ಮಲಿಲ್ಲ. ನಟಿ ಜ್ಯೋತಿಕಾ ಮುಂಬೈ ಮೂಲದವರಾಗಿದ್ದರಿಂದ ತಮಿಳು ಮಾತನಾಡಲು ಬರುತ್ತಿರಲಿಲ್ಲ. ಜ್ಯೋತಿಕಾ ಕಷ್ಟಪಟ್ಟು ತಮಿಳು ಕಲಿಯುತ್ತಿದ್ದರು. ಜ್ಯೋತಿಕಾ ಆಗಿನ್ನು ತಮಿಳು ಕಲಿಯುತ್ತಿದ್ದರೂ, ಸ್ಪಷ್ಟವಾಗಿ ಡೈಲಾಗ್ ಹೇಳುವ ರೀತಿಗೆ ಸೂರ್ಯ ಫಿದಾ ಆಗಿದ್ದರು.

  ಸರಳವಾಗಿ ಮದುವೆಯಾದ ಸೂರ್ಯ-ಜ್ಯೋತಿಕಾ ಇಂಟರೆಸ್ಟಿಂಗ್ ಲವ್ ಸ್ಟೋರಿಸರಳವಾಗಿ ಮದುವೆಯಾದ ಸೂರ್ಯ-ಜ್ಯೋತಿಕಾ ಇಂಟರೆಸ್ಟಿಂಗ್ ಲವ್ ಸ್ಟೋರಿ

  ಸೂರ್ಯ ಜೊತೆ ಜ್ಯೋತಿಕಾ ಸ್ನೇಹ

  ಸೂರ್ಯ ಜೊತೆ ಜ್ಯೋತಿಕಾ ಸ್ನೇಹ

  ಪುವೆಲ್ಲಂ ಕೇಟ್ಟುಪ್ಪರ್ ಸಿನಿಮಾ ನಂತರ ಜ್ಯೋತಿಕಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಾರೆ. ತಮಿಳು ಚಿತ್ರರಂಗದಲ್ಲಿ ಜ್ಯೋತಿಕಾ ಸ್ಟಾರ್ ನಟಿಯಾಗಿ ಗುರುತಿಕೊಳ್ಳುತ್ತಾರೆ. ಜ್ಯೋತಿಕಾ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ವೇಳೆ ಸೂರ್ಯ ಅದೇ ಮಾರ್ಗದಲ್ಲಿ ಹೋಗುತ್ತಿದ್ದರು. ಆಗ ಜ್ಯೋತಿಕಾ ಸಹಚರರನ್ನು ಕಳುಹಿಸಿ ಸೂರ್ಯರನ್ನು ಕರೆಸಿಕೊಂಡರು. ನಂತರ ಇಬ್ಬರು ಉತ್ತಮ ಸ್ನೇಹಿತರಾಗುತ್ತಾರೆ. ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗಿತು.

  ಸೂರ್ಯನೆ ಹೀರೋ ಆಗಬೇಕೆಂದಿದ್ದ ಜ್ಯೋತಿಕಾ

  ಸೂರ್ಯನೆ ಹೀರೋ ಆಗಬೇಕೆಂದಿದ್ದ ಜ್ಯೋತಿಕಾ

  ಇಬ್ಬರು ಸ್ನೇಹಿತರಾದ ನಂತರ ಸೂರ್ಯ, ಜ್ಯೋತಿಕಾರನ್ನು ಪಾರ್ಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ ಸೂರ್ಯ ಆಪ್ತ ಸ್ನೇಹಿತರ ಬಳಗಕ್ಕೆ ಜ್ಯೋತಿಕಾರನ್ನು ಪರಿಚಯ ಮಾಡಿಕೊಟ್ಟರು. ಅದೇ ಸಮಯದಲ್ಲಿ ಸೂರ್ಯ ಅಭಿನಯದ ನಂದ ಸಿನಿಮಾ ಕೂಡ ರಿಲೀಸ್ ಆಗಿತ್ತು. ಆ ಸಮಯದಲ್ಲಿ ಜ್ಯೋತಿಕಾ ಮೊದಲ ದಿನ ಮೊದಲ ಶೋ ವೀಕ್ಷಿಸಿ ಮೆಚ್ಚಿಕೊಂಡರು. ಮುಂದಿನ ಸಿನಿಮಾಗೆ ಸೂರ್ಯ ಅವರೆ ಹೀರೋ ಆಗಬೇಕು ಎಂದು ನಿರ್ದೇಶಕ ಗೌತಮ್ ಮೆನನ್ ಅವರಿಗೆ ತಿಳಿಸಿದರು.

  ಕಾಖಾ ಕಾಖಾ ಸಿನಿಮಾದಲ್ಲಿ ನಟನೆ

  ಕಾಖಾ ಕಾಖಾ ಸಿನಿಮಾದಲ್ಲಿ ನಟನೆ

  ನಟಿ ಜ್ಯೋತಿಕಾ ಆಗಲೆ ದೊಡ್ಡ ಸ್ಟಾರ್ ಆಗಿ ಗುರುತಿಕೊಂಡಿದ್ದ ಕಾರಣ ಜ್ಯೋತಿಕಾ ಮಾತನ್ನು ನಿರ್ದೇಶಕರು ತಳ್ಳಿಹಾಕಲಿಲ್ಲ. ಕಾಖಾ ಕಾಖಾ ಸಿನಿಮಾದಲ್ಲಿ ಮತ್ತೆ ಜ್ಯೋತಿಕಾ ಮತ್ತು ಸೂರ್ಯ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. 2003ರಲ್ಲಿ ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸುಗಳಿಸುತ್ತೆ. ಇಬ್ಬರು ಒಟ್ಟಿಗೆ 3 ಸಿನಿಮಾಗಳನ್ನು ಮಾಡುತ್ತಿದ್ದಂತೆ ಇಬ್ಬರ ನಡುವೆ ಗಾಸಿಪ್ ಹರಿದಾಡಲು ಪ್ರಾರಂಭವಾಯಿತು. ಇಬ್ಬರಿಗೂ ನಿಶ್ಚಿತಾರ್ಥವಾಗಿದೆ ಎನ್ನುವ ಸುದ್ದಿಗಳು ಹರಿದಾಡಲು ಪ್ರಾರಂಭವಾಯಿತು. ನಟ ಸೂರ್ಯ ಮನೆಯವರಿಗೆ ಮನವರಿಕೆ ಮಾಡಿಕೊಡಲು ಸ್ವಲ್ಪ ಸಮಯ ತೆಗೆದುಕೊಂಡರು. ಸೂರ್ಯ ಮನೆಯವರು ಇಬ್ಬರ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅನೇಕ ಅಡೆತಡೆಗಳ ನಡುವೆಯೂ ಇಬ್ಬರ ಪ್ರೀತಿ ಮತ್ತಷ್ಟು ಗಟ್ಟಿಯಾಯಿತು.

  2006ರಲ್ಲಿ ಮದುವೆ

  2006ರಲ್ಲಿ ಮದುವೆ

  ಕೊನೆಗೆ ಇಬ್ಬರು 2006 ಸೆಪ್ಟಂಬರ್ ನಲ್ಲಿ ಹಸೆಮಣೆ ಏರಿದರು. ಚೆನೈನ ಪಾರ್ಕ್ ಶರಟನ್ ಹೋಟೆಲ್ ನಲ್ಲಿ ಇಬ್ಬರು ಹಸೆಮಣೆ ಏರಿದರು. ಸರಳವಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆಗೆ ಚಿತ್ರರಂಗದ ಗಣ್ಯರು ಬರದಿದ್ದರು, ಕೆಲವು ರಾಜಕೀಯ ಗಣ್ಯರು ಹಾಜರಾಗಿ ಆಶೀರ್ವಾದ ಮಾಡಿದರು. ಮದುವೆ ಬಳಿಕ ನಟಿ ಜ್ಯೋತಿಕಾ ಸಿನಿಮಾದಿಂದ ದೂರ ಸರಿದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ದಿಯಾ ಮತ್ತು ದೇವ್ ಎಂದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮದುವೆ ನಂತರ ಜ್ಯೋತಿಕಾ ಅಭಿನಯಕ್ಕೆ ಗುಡ್ ಬೈ ಹೇಳಿದರು. ಮುಂಬೈನಿಂದ ನಂತರ ಪತಿಯ ಮನೆ ಚೆನ್ನೈಗೆ ಸ್ಥಳಾಂತರ ಆದರು. ಇಬ್ಬರು ತಮಿಳಿನ ಖ್ಯಾತ ತಾರಾ ಜೋಡಿಯಾಗಿ, ಇತರರಿಗೆ ಮಾದರಿಯಾಗಿದ್ದಾರೆ. ಅನೇಕ ವರ್ಷಗಳ ಗ್ಯಾಪ್ ನಂತರ ಜ್ಯೋತಿಕಾ 2015ರಲ್ಲಿ 36 ವಯದಿನಿಲೆ ಸಿನಿಮಾ ಮೂಲಕ ಮತ್ತೆ ಬಣ್ಣದ ಲೋಕ್ಕೆ ಮರಳಿದರು. ಬಳಿಕ ಜ್ಯೋತಿಕಾ ಪೊನ್ಮಗಲ್ ವಂಧಲ್ ಸಿನಿಮಾದಲ್ಲಿ ಕಾಣಿಸಿಕೊಂಡಿರು. ಇದೀಗ ತಮಿಳಿನ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  ಸೂರ್ಯ ಸಿನಿಮಾಗಳು

  ಸೂರ್ಯ ಸಿನಿಮಾಗಳು

  ಸೂರ್ಯ ಜೈ ಭೀಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಸೂರ್ಯ ಹುಟ್ಟುಹಬ್ಬದ ದಿನ ಫಸ್ಟ್ ಲುಕ್ ಮತ್ತು ಟೈಟಲ್ ಅನೌನ್ಸ ಮಾಡಲಾಗಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾ ಜೊತೆಗೆ ವಾಡಿವಾಸಲ್ ಮತ್ತು ಇನ್ನೊಂದು ಸಿನಿಮಾಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ನಿರ್ಮಾಣದ ಕಡೆಯು ಗಮನ ಹರಿದ್ದಾರೆ.

  English summary
  Surya and Jyothika wedding anniversary; Interesting Love Story about Actor Surya And Jyothika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X