For Quick Alerts
  ALLOW NOTIFICATIONS  
  For Daily Alerts

  ತಾಯಿಯಾದ ಸಂಭ್ರಮದಲ್ಲಿ 'ಯುವರತ್ನ' ನಟಿ ಸಯೇಶಾ ಸೈಗಲ್

  |

  ಕಾಲಿವುಡ್ ನ ಖ್ಯಾತ ನಟ ಆರ್ಯ ಮತ್ತು ಸಯೇಶಾ ದಂಪತಿ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಆರ್ಯ ದಂಪತಿ ತಂದೆ-ತಾಯಿಯಾದ ಖುಷಿಯಲ್ಲಿದ್ದಾರೆ. ಹೌದು, ನಟಿ ಸಯೇಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

  ಸುದ್ದಿ ಹೊರಬೀಳುತ್ತಿದ್ದಂತೆ ಆರ್ಯ ದಂಪತಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅಭಿನಂದನೆ ತಿಳಿಸುತ್ತಿದ್ದಾರೆ. ಸಯೇಶಾ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಹಾಗಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸುತ್ತಿದೆ.

  ಅಂದಹಾಗೆ ಮಗುವಾಗಿರುವ ವಿಚಾರವನ್ನು ಸಹ ಆರ್ಯ ದಂಪತಿ ಬಹಿರಂಗ ಪಡಿಸಿಲ್ಲ. ಆದರೆ ಆರ್ಯ ಸ್ನೇಹಿತ, ನಟ ವಿಶಾಲ್ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಈ ಸುದ್ದಿಯನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ನಾನು ಅಂಕಲ್ ಆಗಿದ್ದೀನಿ. ನನ್ನ ಸಹೋದರ ಜಮ್ಮಿ ಮತ್ತು ಸಯೇಶಾ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ. ಚಿತ್ರೀಕರಣದ ಒತ್ತಡದ ನಡುವೆಯೂ ಅತಿಯಾದ ಸಂತೋಷ. ಯಾವಾಗಲು ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಆರ್ಯ ಅಪ್ಪನಾಗಿ ಹೊಸ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ" ಎಂದು ಬರೆದುಕೊಳ್ಳುವ ಮೂಲಕ ಸಂತಸದ ವಿಚಾರವನ್ನು ಶೇರ್ ಮಾಡಿದ್ದಾರೆ.

  ಅಂದಹಾಗೆ ನಟ ಆರ್ಯ ಡಬಲ್ ಸಂಭ್ರಮದಲ್ಲಿದ್ದಾರೆ. ಆರ್ಯ ನಟನೆಯ ಬಹುನಿರೀಕ್ಷೆ ಸರ್ಪಟ್ಟ ಪರಂಬೈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ತನ್ನ ಕನಸಿನ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರಕ್ಕಾಗಿ ಆರ್ಯ ಸಿಕ್ಕಾಪಟ್ಟೆ ಶ್ರಮವಹಿಸಿದ್ದರು. ಇದೀಗ ಸಿನಿಮಾ ಬಿಗುಡಗೆಯಾಗಿ ಎಲ್ಲಾಕಡೆಯಿಂದ ಅದ್ಭುತ ಪ್ರತಿಕ್ರಿಯೆ ಹರಿದುಬರುತ್ತಿದೆ. ಇದೇ ಸಮಯದಲ್ಲಿ ಮನೆಗೆ ಮಗಳು ಆಗಮಿಸಿರುವುದು ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ.

  Tamil Actor Arya And Sayyeshaa blessed with baby girl
  ನಾನು ತಪ್ಪು ಮಾಡಿದ್ದೀನಿ ಅಂತ ಒಪ್ಪಿಕೊಳ್ತೀನಿ

  ಇನ್ನು ಆರ್ಯ ಮತ್ತು ಸಯೇಶಾ ಇಬ್ಬರೂ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆ ಸಮಾರಂಭದಲ್ಲಿ ಸ್ನೇಹಿತರು, ಕುಟುಂಬದರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ನಟಿ ಸಯೇಶಾ ಸಿನಿಮಾ ವಿಚಾರಕ್ಕೆ ಬರುವುದಾದರೇ ಕೊನೆಯದಾಗಿ ಯುವರತ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಳಿಕ ಸಯೇಶಾ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದರು. ಆದರೆ ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ.

  English summary
  Tamil Actor Arya And Sayyeshaa blessed with baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X