For Quick Alerts
  ALLOW NOTIFICATIONS  
  For Daily Alerts

  ಅಚ್ಚರಿ ಮೂಡಿಸಿದೆ ಸ್ಟಾರ್ ನಟನ ಬಾಡಿ ಬಿಲ್ಡಿಂಗ್: ಹೊಸ ಸಿನಿಮಾಗೆ ರೆಡಿ ಎಂದ ನಟ!

  |

  ಕಥೆ ಇಷ್ಟ ಆಗಿದ್ರೆ ಆ ಚಿತ್ರಕ್ಕಾಗಿ ಆ ಪಾತ್ರಕ್ಕಾಗಿ ಎಷ್ಟೇ ಕಷ್ಟದ ಕೆಲಸವಿದ್ದರೂ ಮಾಡಲು ಮುಂದಾಗುವಂತಹ ಕಲಾವಿದರು ಚಿತ್ರರಂಗದಲ್ಲಿದ್ದಾರೆ. ಜಿಮ್ ಮುಖನೇ ನೋಡದ ಕಿಚ್ಚ ಸುದೀಪ್ 'ಪೈಲ್ವಾನ್' ಚಿತ್ರಕ್ಕಾಗಿ ಜಿಮ್ ಗೆ ಹೋಗಿ ಬಾಡಿ ಬಿಲ್ಡ್ ಮಾಡಿದ್ದು ನೋಡಬಹುದು.

  ಇದೀಗ, ತಮಿಳು ಸ್ಟಾರ್ ನಟನೊಬ್ಬ ತಮ್ಮ ಮುಂದಿನ ಚಿತ್ರಕ್ಕಾಗಿ ಬಾಡಿ ಬಿಲ್ಡ್ ಮಾಡಿದ್ದು, ಆ ನಟನ ಬಾಡಿ ಟ್ರಾನ್ಸ್ ಮಿಷನ್ ನೋಡುತ್ತಿದ್ದರೇ ಅಚ್ಚರಿ ಮೂಡಿಸುತ್ತಿದೆ. ಮೊದಲೇ ಫಿಟ್ ಆಗಿದ್ದ ಈ ನಟ ಈಗ ಬಾಕ್ಸರ್ ರೀತಿ ಸಜ್ಜಾಗಿದ್ದಾರೆ. ಅಷ್ಟಕ್ಕೂ, ಆ ನಟ ಯಾರು? ಮುಂದಿನ ಸಿನಿಮಾ ಯಾವುದು? ಮುಂದೆ ಓದಿ...

  ತಮಿಳು ಆರ್ಯ ವರ್ಕೌಟ್ ವಿಡಿಯೋ

  ತಮಿಳು ಆರ್ಯ ವರ್ಕೌಟ್ ವಿಡಿಯೋ

  ತಮಿಳು ನಟ ಆರ್ಯ ತಮ್ಮ ವರ್ಕೌಟ್ ವಿಡಿಯೋವನ್ನು ಹಂಚಿಕೊಂಡಿದ್ದು, ಕಾಲಿವುಡ್ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡ್ತಿದೆ. ಮೊದಲೇ ಫಿಟ್ ಆಗಿದ್ದ ಆರ್ಯ ಇದೀಗ, ಮತ್ತಷ್ಟು ಬಾಡಿ ಬಿಲ್ಡ್ ಮಾಡಿದ್ದಾರೆ. ಡಬ್ಲ್ಯೂ ಡಬ್ಲ್ಯೂ ಇ ಆಟಗಾರನಂತೆ ಸಜ್ಜಾಗಿರುವ ಆರ್ಯ 'ಮುಂದಿನ ಚಿತ್ರಕ್ಕೆ ನಾನು ರೆಡಿ' ಎಂದು ತಿಳಿಸಿದ್ದಾರೆ.

  ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ.!ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ.!

  ಪಾ ರಂಜಿತ್ ಜೊತೆ ಹೊಸ ಸಿನಿಮಾ

  ಪಾ ರಂಜಿತ್ ಜೊತೆ ಹೊಸ ಸಿನಿಮಾ

  ರಜನಿಕಾಂತ್ ಅಭಿನಯದ ಕಬಾಲಿ ಮತ್ತು ಕಾಲಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪಾ ರಂಜಿತ್ ಜೊತೆ ಆರ್ಯ ಹೊಸ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕಾಗಿ ಈ ತಯಾರಿ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿರುವ ಆರ್ಯ ''ಪಾ ರಂಜಿತ್ ಸರ್ ಐ ಯಾಮ್ ರೆಡಿ'' ಎಂದು ಕ್ಯಾಪ್ಷನ್ ಹಾಕಿ ತಮ್ಮ ಮುಂದಿನ ಪ್ರಾಜೆಕ್ಟ್ ಕುರಿತು ಕುತೂಹಲ ಹೆಚ್ಚಿಸಿದ್ದಾರೆ.

  ಬಾಕ್ಸರ್ ಗಾಗಿ ಈ ತಯಾರಿ

  ಬಾಕ್ಸರ್ ಗಾಗಿ ಈ ತಯಾರಿ

  ಪಾ ರಂಜಿತ್ ನಿರ್ದೇಶನ ಮಾಡಲಿರುವ ಹೊಸ ಚಿತ್ರದಲ್ಲಿ ಆರ್ಯ ಬಾಕ್ಸರ್ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಹಾಗಾಗಿಯೇ ಈ ಮಟ್ಟದ ತಯಾರಿ ನಡೆಸಿದ್ದಾರೆ. ಇದು ಆರ್ಯ ನಟನೆಯ 30ನೇ ಚಿತ್ರವಾಗಿದ್ದು, ಈ ಸಿನಿಮಾ ಸ್ವತಃ ಆರ್ಯ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆಯಂತೆ.

  ರೀಮೇಕ್ ಎಂದು ಹೇಳಲಾಗುತ್ತಿದೆ

  ರೀಮೇಕ್ ಎಂದು ಹೇಳಲಾಗುತ್ತಿದೆ

  ಅಂದ್ಹಾಗೆ, ಆರ್ಯ ಮತ್ತು ರಾ ರಂಜಿತ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಈ ಚಿತ್ರ ಹಿಂದಿಯ ರೀಮೇಕ್ ಎಂದು ಹೇಳಲಾಗುತ್ತಿದೆ. ಆದರೆ, ಅದು ಪಕ್ಕ ಆಗಿಲ್ಲ. 2017ರ ಸೂಪರ್ ಹಿಟ್ ಸಿನಿಮಾ ಮುಕ್ಕಾಬಾಜ್ ರೀಮೇಕ್ ಎನ್ನಲಾಗುತ್ತಿದೆ.

  English summary
  Tamil actor Arya shared his workout video. and he is ready for his next project with pa ranjith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X