For Quick Alerts
  ALLOW NOTIFICATIONS  
  For Daily Alerts

  ಎರಡನೇ ಬಾರಿ ತಂದೆಯಾದ ಸಂತಸದಲ್ಲಿ ನಟ ಕಾರ್ತಿ

  |

  ತಮಿಳಿನ ಖ್ಯಾತ ನಟ ಕಾರ್ತಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಾರ್ತಿ ಎರಡನೇ ಬಾರಿ ತಂದೆಯಾದ ಖುಷಿಯಲ್ಲಿದ್ದಾರೆ. ಕಾರ್ತಿ ಪತ್ನಿ ರಂಜನಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮುದ್ದಾದ ಜೋಡಿಗೆ ಗಂಡುವಾಗಿದೆ. ಮನೆಗೆ ಹೊಸ ಸದಸ್ಯನನ್ನು ಬರಮಾಡಿಕೊಂಡ ಈ ಸುಂದರ ದಂಪತಿಗೆ ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ.

  ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ತಿ ಪತ್ನಿ ರಂಜನಿ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಾದ ಸಂತಸವನ್ನು ನಟ ಕಾರ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಪ್ರೀತಿಯ ಸ್ನೇಹಿತರೆ ಮತ್ತು ಕುಟಂಬದವರು, ನಮಗೆ ಗಂಡುವಾಗಿದೆ. ವೈದ್ಯರು ಮತ್ತು ದಾದಿಯರಿಗೆ ಧನ್ಯವಾದಗಳು. ನನ್ನ ಮುದ್ದು ಕಂದನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ' ಎಂದು ಕಾರ್ತಿ ಟ್ವೀಟ್ ಮಾಡಿದ್ದಾರೆ.

  ಚೊಚ್ಚಲ ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣಚೊಚ್ಚಲ ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

  ಕಾಲಿವುಡ್ ನ ಖ್ಯಾತ ನಟ ಕಾರ್ತಿ 2011ರಲ್ಲಿ ರಂಜನಿ ಜೊತೆ ಹಸೆಮಣೆ ಏರಿದ್ದಾರೆ. ಈ ಸುಂದರ ದಂಪತಿಗೆ 7 ವರ್ಷದ ಮುದ್ದಾದ ಹೆಣ್ಣು ಮಗಳಿದ್ದಾಳೆ. 2013ರಲ್ಲಿ ರಂಜನಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ಉಮಾಯಾಲ್ ಎಂದು ನಾಮಕರಣ ಮಾಡಿದ್ದಾರೆ. ಇದೀಗ ಏಳು ವರ್ಷದ ಬಳಿಕ ಉಮಾಯಾಲ್ ಗೆ ಮುದ್ದಾದ ಸಹೋದರ ಆಗಮಿಸಿದ್ದಾನೆ.

  ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಕಾರ್ತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ ಹಿಟ್ ಕೈದಿ ಸಿನಿಮಾದ ಬಳಿಕ ಕಾರ್ತಿ ಅಭಿಮಾನಿಗಳ ಬಳಗ ಮತ್ತಷ್ಟು ದೊಡ್ಡದಾಗಿದೆ. ಸದ್ಯ ಕಾರ್ತಿ ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  Vajramuni ಮಗ ಚಿತ್ರರಂಗಕ್ಕೆ ಯಾಕೆ ಬಂದಿಲ್ಲ ಗೊತ್ತಾ..? | Filmibeat Kannada

  ಇನ್ನೂ ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಸುಲ್ತಾನ್ ಸಿನಿಮಾದ ಚಿತ್ರಾಕರಣ ಮುಗಿಸಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಗೆ ನಾಯಕಿಯಾಗಿ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಇದು ರಶ್ಮಿಕಾ ಅಭಿನಯದ ಮೊದಲ ತಮಿಳು ಸಿನಿಮಾವಾಗಿದೆ. ಸುಲ್ತಾನ್ ಜೊತೆಗೆ ಇನ್ನೂ ಹೆಸರಿಡದ ಒಂದು ಸಿನಿಮಾದಲ್ಲಿ ಕಾರ್ತಿ ನಟಿಸುತ್ತಿದ್ದಾರೆ.

  English summary
  Tamil Actor Karthi and his wife Ranjani welcomed secone child, a baby boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X