For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿಜಯ್ ಅಭಿಮಾನಿ ಆತ್ಮಹತ್ಯೆ, ಟ್ರೆಂಡ್ ಆಯ್ತು #RIPBala

  |

  ತಮಿಳು ನಟ ವಿಜಯ್ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಅಭಿಮಾನಿಯೊಬ್ಬನ ಸಾವಿನ ವಿಷಯ ತಿಳಿಯುತ್ತಿದ್ದಂತೆ ವಿಜಯ್ ಫ್ಯಾನ್ಸ್ ಟ್ವಿಟ್ಟರ್‌ನಲ್ಲಿ #RIPBala ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

  Prem 6 pack ಫೋಟೋಶೂಟ್ , 'ಮಳೆ' ಚಿತ್ರಕ್ಕಾಗಿ | Filmibeat Kannada

  ವಿಜಯ್ ಅವರ ಅಪ್ಪಟ ಅಭಿಮಾನಿ ಜೀವನದಲ್ಲಿ ನೊಂದು ಸಾವಿಗೆ ಶರಣಾಗಿದ್ದಾನೆ. ಸಾಯುವುದಕ್ಕೂ ಮೊದಲು ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಸಾಯುತ್ತಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

  ಮಹೇಶ್ ಬಾಬು ಸವಾಲು ಪೂರ್ಣಗೊಳಿಸಿದ ತಮಿಳು ನಟ ವಿಜಯ್

  ಈ ಸುದ್ದಿಯನ್ನು ನಟ ವಿಜಯ್ ಅವರಿಗೆ ತಿಳಿಸಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ''ನನಗೆ ಯಾವುದೇ ಪ್ರೇಮ ವೈಫಲ್ಯವಿಲ್ಲ, ಕುಟುಂಬದ ಸಮಸ್ಯೆಯಿಂದಾಗಿ ನಾನು ಹೋಗುತ್ತಿದ್ದೇನೆ. ಎಲ್ಲರೂ ನನ್ನನ್ನು ದ್ವೇಷಿಸುತ್ತಾರೆ'' ಎಂದು ಬರೆದುಕೊಂಡಿದ್ದಾರೆ.

  ಬಾಲಾ ಅವರ ಹಠಾತ್ ನಿಧನ, ವಿಜಯ್ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಭಾರಿ ಆಘಾತವನ್ನುಂಟುಮಾಡಿದೆ. ಹೀಗಾಗಿ, ಟ್ವಿಟ್ಟರ್‌ನಲ್ಲಿ ಬಾಲಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದರು. ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ವೈರಸ್ ರೋಗದಿಂದಾಗಿ ಕೆಲಸ ಕಳೆದುಕೊಂಡಿದ್ದರು. ಮನೆಯಲ್ಲಿಯೂ ಸ್ವಲ್ಪ ತೊಂದರೆ ಇತ್ತು ಎಂದು ತಿಳಿದು ಬಂದಿದೆ.

  ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಬಾಲಮುರುಗನ್ ತನ್ನ ಕೋಣೆಯೊಳಗೆ ಹೋಗಿ ಬೀಗ ಹಾಕಿಕೊಂಡಿದ್ದಾನೆ. ನಂತರ ಸಂಜೆ 6 ಗಂಟೆ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  English summary
  Tamil Actor Vijay Fan Committed Suicide, #RIPBala trends as fans mourn his demise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X