For Quick Alerts
  ALLOW NOTIFICATIONS  
  For Daily Alerts

  'ಸಂಭಾವನೆ ಬಿಟ್ಟರೂ ಈ ಪಾತ್ರ ಬಿಡಲ್ಲ' ಎಂದು ಬೇಡಿಕೊಂಡಿದ್ದರು ವಿಜಯ್ ಸೇತುಪತಿ

  |

  ಸೌತ್ ಸಿನಿಮಾರಂಗದ ನಟ ವಿಜಯ್ ಸೇತುಪತಿ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

  ವಿಜಯ್ ಸೇತುಪತಿ ಬೆಳವಣಿಗೆ ನಿಜಕ್ಕೂ ಸ್ಫೂರ್ತಿ ತುಂಬುವ ಹಾಗಿದೆ. ಯಾವುದೇ ಹಿನ್ನಲೆ ಇಲ್ಲದೆ, ಸಾಮಾನ್ಯ ಹುಡುಗನಾಗಿ ಚಿತ್ರರಂಗಕ್ಕೆ ಬಂದ ವಿಜಯ್ ಸೇತುಪತಿ ಈಗ ಸ್ಟಾರ್ ಆಗಿದ್ದಾರೆ. ಬೇರೆ ಬೇರೆ ರೀತಿಯ ಸಿನಿಮಾಗಳ ಮೂಲಕ ತಮ್ಮ ನಟನ ಸಾಮರ್ಥ್ಯ ಸಾಬೀತು ಮಾಡುತ್ತಿದ್ದಾರೆ.

  ಸೇಲ್ಸ್ ಮ್ಯಾನ್ ಆಗಿದ್ದ ವಿಜಯ್ ಸೇತುಪತಿ ಸ್ಟಾರ್ ಆಗಿಬಿಟ್ರು!ಸೇಲ್ಸ್ ಮ್ಯಾನ್ ಆಗಿದ್ದ ವಿಜಯ್ ಸೇತುಪತಿ ಸ್ಟಾರ್ ಆಗಿಬಿಟ್ರು!

  ಸಿನಿಮಾದಿಂದ ಸಿನಿಮಾಗೆ ಡಿಫರೆಂಟ್ ಪಾತ್ರಗಳನ್ನು ವಿಜಯ್ ಸೇತುಪತಿ ಪ್ರಯತ್ನ ಮಾಡುತ್ತಾರೆ. ಇತ್ತೀಚಿಗಷ್ಟೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ಅವರು, ಪ್ರಮುಖವಾಗಿ ಒಂದು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಒಬ್ಬ ದೊಡ್ಡ ಸ್ಟಾರ್ ಆದ ಮೇಲೂ ಆ ಒಂದು ಪಾತ್ರ ಮಾಡಲು ಅವರು ಬೇಡಿಕೊಂಡಿದ್ದರಂತೆ. ಆ ಪಾತ್ರಕ್ಕಾಗಿ ಸಂಭಾವನೆ ಬೇಡ ಎಂದು ಹೇಳಿದ್ದರಂತೆ.

  'ಸೂಪರ್ ಡಿಲಕ್ಸ್' ಸಿನಿಮಾ

  'ಸೂಪರ್ ಡಿಲಕ್ಸ್' ಸಿನಿಮಾ

  'ಸೂಪರ್ ಡಿಲಕ್ಸ್' ವಿಜಯ್ ಸೇತುಪತಿ ನಟನೆಯ ಸಿನಿಮಾ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮಂಗಳ ಮುಖಿ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಒಬ್ಬ ಸ್ಟಾರ್ ನಟನಾಗಿ ಈ ಪಾತ್ರ ಮಾಡಲು ಧೈರ್ಯ ಬೇಕು. ಈ ಚಿತ್ರದ ಕಥೆ ಹೇಳಿ ವಿಜಯ್ ಸೇತುಪತಿ ಬಹಳ ಖುಷಿಯಾಗಿದ್ದರಂತೆ. ಕಥೆ ಬರೆದ ರೀತಿ ಅವರಿಗೆ ಬಹಳ ಇಷ್ಟ ಆಗಿದೆ. ಹೀಗಾಗಿ, ಈ ಸಿನಿಮಾ ನಾನು ಮಾಡುತ್ತೇನೆ ಎಂದು ಬೇಡಿಕೊಂಡಿದ್ದರಂತೆ.

  ಯಾವುದೇ ಸಂಭಾವನೆ ಬೇಡ

  ಯಾವುದೇ ಸಂಭಾವನೆ ಬೇಡ

  ಸಿನಿಮಾದ ಒಂದು ದೃಶ್ಯವನ್ನು ಕೇಳಿ ವಿಜಯ್ ಸೇತುಪತಿ ಉತ್ಸುಕರಾದರಂತೆ. ಈ ಪಾತ್ರವನ್ನು ಹೇಗೆ ನಿರ್ವಹಿಸುತ್ತೇನೆ ಗೊತ್ತಿಲ್ಲ, ಆದರೆ, ಈ ಸಿನಿಮಾ ಮಿಸ್ ಮಾಡಿಕೊಳ್ಳಬಾರದು ಎನ್ನುವುದು ಅವರ ನಿರ್ಧಾರ ಆಗಿತಂತೆ. ಈ ಸಿನಿಮಾಗಾಗಿ ನನಗೆ ಯಾವುದೇ ಸಂಭಾವನೆ ನೀದೆ ಇದ್ದರೂ ಪರವಾಗಿಲ್ಲ, ನಾನು ಈ ಸಿನಿಮಾದಲ್ಲಿ ನಟಿಸಿದರೆ ಸಾಕು ಎಂದು ಹೇಳಿದ್ದರಂತೆ.

  ಮತ್ತೊಂದು ವಿಭಿನ್ನ ಪಾತ್ರ ಹೊತ್ತು ಬಂದ ವಿಜಯ್ ಸೇತುಪತಿಮತ್ತೊಂದು ವಿಭಿನ್ನ ಪಾತ್ರ ಹೊತ್ತು ಬಂದ ವಿಜಯ್ ಸೇತುಪತಿ

  50 ರಿಂದ 60 ಟೇಕ್

  50 ರಿಂದ 60 ಟೇಕ್

  ಚಿತ್ರೀಕರಣದ ಮೊದಲ ದಿನ, ಮೊದಲ ದೃಶ್ಯ ವಿಜಯ್ ಸೇತುಪತಿ ಬಹಳ ಕಷ್ಟ ಪಟ್ಟರು. ಮೊದಲ ದೃಶ್ಯಕ್ಕಾಗಿ ಅವರು 50 ರಿಂದ 60 ಟೇಕ್ ತೆಗೆದುಕೊಂಡರು. ಈ ಬಗ್ಗೆ ಮಾತನಾಡಿರುವ ಅವರು ನಾನು ಎಷ್ಟು ಟೇಕ್ ತೆಗೆದುಕೊಂಡೆ ಎನ್ನುವುದಕ್ಕಿಂತ, ಫೈನಲಿ ಎಷ್ಟು ಚೆನ್ನಾಗಿ ಮಾಡಿದೆ ಎನ್ನುವುದು ಮುಖ್ಯ ಎಂದಿದ್ದಾರೆ. ಒಂದು, ಎರಡು ಟೇಕ್ ಎನ್ನುವುದು ನನಗೆ ಸಂಬಂಧ ಪಟ್ಟಲ್ಲ. ಪಾತ್ರ ಚೆನ್ನಾಗಿ ಬರಬೇಕು ಅಷ್ಟೇ. ಎಂದರು.

  ಬೇರೆಯವರ ಜೊತೆಗೆ ಸ್ಪರ್ಧಿ ಮಾಡುವುದಿಲ್ಲ

  ಬೇರೆಯವರ ಜೊತೆಗೆ ಸ್ಪರ್ಧಿ ಮಾಡುವುದಿಲ್ಲ

  ನಟನೆಯ ವಿಚಾರದಲ್ಲಿ ನಾನು ಉಳಿದ ಕಲಾವಿದರ ಜೊತೆಗೆ ಸ್ಪರ್ಧೆ ಮಾಡುವುದಿಲ್ಲ, ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ. ಸೂಪರ್ ಡಿಲಕ್ಸ್ ಸಿನಿಮಾ ಮಾಡುವಾಗ ನಾನು ಯಾರನ್ನು ಕಾಪಿ ಮಾಡಲು ಹೋಗಲಿಲ್ಲ. ನನ್ನ ಮನಸ್ಸಿನ ಒಳಗೆ ಹೆಣ್ಣಿನ ಭಾವನೆ ಬಂದಾಗ ನಟಿಸಿದೆ. ನಾನು ಮಾನಿಟರ್ ನೋಡಲಿಲ್ಲ. ಈ ಟೇಕ್ ಓಕೆ ಎಂದು ನನಗೆಯೇ ತಿಳಿಯುತ್ತಿತ್ತು ಎಂದು ವಿಜಯ್ ಸೇತುಪತಿ ವಿವರಿಸಿದ್ದಾರೆ.

  ಶಾರೂಖ್ ಖಾನ್ ಕಾಮೆಂಟ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ವಿಜಯ್ ಸೇತುಪತಿಶಾರೂಖ್ ಖಾನ್ ಕಾಮೆಂಟ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ವಿಜಯ್ ಸೇತುಪತಿ

  ಸಿನಿಮಾ ನೋಡಿ ಥ್ರಿಲ್ ಅಂದ ರಣ್ವೀರ್

  ಸಿನಿಮಾ ನೋಡಿ ಥ್ರಿಲ್ ಅಂದ ರಣ್ವೀರ್

  ಇದೇ ಸಂದರ್ಶನದಲ್ಲಿ ನಟ ರಣ್ವೀರ್ ಸಿಂಗ್ ಕೂಡ ಭಾಗಿಯಾಗಿದ್ದರು. ಸೂಪರ್ ಡಿಲೆಕ್ಸ್ ಸಿನಿಮಾವನ್ನು ಅವರು ನೋಡಿ ಥ್ರಿಲ್ ಆಗಿದ್ದರಂತೆ. ಈ ಸಿನಿಮಾವನ್ನು ಎಲ್ಲರೂ ನೋಡಿ ಎಂದು ಅವರು ಹೇಳಿದ್ದಾರೆ. ಚಿತ್ರದಲ್ಲಿ ಬರುವ ಪುಟ್ಟ ಬಾಲಕ ರಾಜ್ ಕುಟ್ಟಿ ಪಾತ್ರವನ್ನು ರಣ್ವೀರ್ ಬಹಳ ಇಷ್ಟ ಪಟ್ಟಿದ್ದಾರೆ.

  English summary
  Tamil actor Vijay Sethupathi spoke about Super Deluxe movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X