ತಮಿಳು ನಟ-ರಾಜಕಾರಣಿ ವಿಜಯಕಾಂತ್ ಆಸ್ಪತ್ರೆಗೆ ದಾಖಲು
ತಮಿಳು ನಟ, ರಾಜಕಾರಣಿ ವಿಜಯಕಾಂತ್ ಅವರು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಅಕ್ಟೋಬರ್ 6 ರಂದು ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವಿಜಯಕಾಂತ್ ಆರೋಗ್ಯ ಕುರಿತು ಡಿಎಂಡಿಕೆ ಪಕ್ಷ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿಜಯಕಾಂತ್ ಆರೋಗ್ಯ ಸ್ಥಿರವಾಗಿದೆ, ಶೀಘ್ರದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದೆ.
''ಡಿಎಂಡಿಕೆ ನಾಯಕ, ಕ್ಯಾಪ್ಟನ್ ವಿಜಯಕಾಂತ್ ಅವರನ್ನು ದ್ವಿತೀಯ ಪರೀಕ್ಷೆಗಳಿಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆರೋಗ್ಯವಾಗಿದ್ದಾರೆ. ದಯವಿಟ್ಟು ಕ್ಯಾಪ್ಟನ್ ಆರೋಗ್ಯಕ್ಕೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ'' ಎಂದು ಡಿಎಂಡಿಕೆ ಪಕ್ಷ ಮಾಹಿತಿ ನೀಡಿದೆ.

ಇನ್ನು ಆಸ್ಪತ್ರೆ ಸಹ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ''ವಿಜಯಕಾಂತ್ ಆರೋಗ್ಯವಾಗಿದ್ದಾರೆ. ಶೀಘ್ರವೇ ಅವರನ್ನು ಮನೆಗೆ ಕಳುಹಿಸಲಾಗುವುದು'' ಎಂದು ತಿಳಿಸಿದ್ದಾರೆ. ಆದ್ರೆ, ಆರೋಗ್ಯವಾಗಿ ಅವರಿಗೆ ಏನಾಗಿದೆ ಎಂದು ಹೇಳಿಲ್ಲ.
ಇದಕ್ಕೂ ಮುಂಚೆ ವಿಜಯಕಾಂತ್ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಸೆಪ್ಟೆಂಬರ್ 22 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ, ಹತ್ತು ದಿನಗಳ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಕೆಲವು ದಿನಗಳ ಬಳಿಕ ಅವರ ಪತ್ನಿಗೂ ಸೋಂಕು ದೃಢವಾಗಿತ್ತು. ಬಳಿಕ ಅವರು ಸಹ ಚಿಕಿತ್ಸೆ ಪಡೆದು ಹೋಮ್ ಕ್ವಾರಂಟೈನ್‌ನಲ್ಲಿದ್ದರು.


Click it and Unblock the Notifications











