For Quick Alerts
  ALLOW NOTIFICATIONS  
  For Daily Alerts

  ನಟಿ ಕಂಗನಾರನ್ನು ಭಗತ್ ಸಿಂಗ್ ಗೆ ಹೋಲಿಸಿದ ತಮಿಳು ನಟ ವಿಶಾಲ್

  |

  ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ನಟಿ ಕಂಗನಾ ರಣಾವತ್ ಬೆಂಬಲಕ್ಕೆ ನಿಂತಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಿಡಿದೆದ್ದಿರುವ ಕಂಗನಾರನ್ನು ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಭಗತ್ ಸಿಂಗ್ ಗೆ ಹೋಲಿಸಿದ್ದಾರೆ.

  ಕಂಗನಾ ರಣಾವತ್ ಮತ್ತು ಶಿವಸೇನೆ ನಡುವಿನ ಕಿತ್ತಾಟದ ನಡುವೆ ಕಂಗನಾ ಬಂಗಲೆಯನ್ನು ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿದೆ. ಪಾಲಿಕೆ ಕ್ರಮವನ್ನು ಖಂಡಿಸಿ ಕಂಗನಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ' ಎಂದು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕಂಗನಾ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ದಕ್ಷಿಣ ಭಾರತದ ನಟ ವಿಶಾಲ್ ಕಂಗನಾಗೆ ಪರ ನಿಂತಿದ್ದಾರೆ. ಮುಂದೆ ಓದಿ..

  ಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ: ಉದ್ಧವ್ ಠಾಕ್ರೆಗೆ ವಿರುದ್ಧ ಕಂಗನಾ ಕಿಡಿ

  ಕಂಗನಾರನ್ನು ಭಗತ್ ಸಿಂಗ್ ಗೆ ಹೋಲಿಸಿದ ವಿಶಾಲ್

  ಕಂಗನಾರನ್ನು ಭಗತ್ ಸಿಂಗ್ ಗೆ ಹೋಲಿಸಿದ ವಿಶಾಲ್

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ವಿಶಾಲ್, "ಕಂಗನಾ, ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್. ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಧ್ವನಿ ಎತ್ತುವುದರಲ್ಲಿ ನಿಮಗೆ ಎರಡನೇ ಆಲೋಚನೆ ಇರಲ್ಲ. ನಿಮ್ಮ ವೈಯಕ್ತಿಕ ಸಮಸ್ಯೆ ಅಲ್ಲದಿದ್ದರೂ ಸರ್ಕಾರವನ್ನು ಎದುರಿಸಿ ನಿಲ್ಲುವ ಮೂಲಕ ಮಾದರಿಯಾಗಿದ್ದೀರಿ. 1920ರಲ್ಲಿ ಭಗತ್ ಸಿಂಗ್ ಮಾಡಿದ ಹಾಗೆ" ಎಂದಿದ್ದಾರೆ.

  ಸರ್ಕಾರ ತಪ್ಪು ಮಾಡಿದಾಗ ವಿರೋಧಿಸಬೇಕು

  ಸರ್ಕಾರ ತಪ್ಪು ಮಾಡಿದಾಗ ವಿರೋಧಿಸಬೇಕು

  "ಸರ್ಕಾರ ತಪ್ಪು ಮಾಡಿದಾಗ ವಿರೋಧಿಸುವುದು ನೀವು ಒಂದು ಉತ್ತಮ ಉದಾಹರಣೆ ಆಗಿದ್ದೀರಿ. ಇದಕ್ಕೆ ಸೆಲೆಬ್ರಿಟಿ ಆಗರಬೇಕಾಗಿಲ್ಲ, ಸಮಾನ್ಯ ಜನರಿಗೂ ಇದು ಅನ್ವಯ ಆಗುತ್ತೆ. ವಾಕ್ ಸ್ವಾತಂತ್ರ್ಯ (ವಿಧಿ 19). ಎಂದು ಕಂಗನಾಗೆ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

  ಕಂಗನಾ ಜತೆ ಕೆಲಸ ಮಾಡಲು ಖ್ಯಾತ ಛಾಯಾಗ್ರಾಹಕ ಪಿ.ಸಿ ಶ್ರೀರಾಮ್ ಹಿಂದೇಟು

   ನಟ ವಿಶಾಲ್ ಗೆ ಅಭಿಮಾನಿಗಳ ಬೆಂಬಲ

  ನಟ ವಿಶಾಲ್ ಗೆ ಅಭಿಮಾನಿಗಳ ಬೆಂಬಲ

  ಏಕಾಂಗಿಯಾಗಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಕಂಗನಾಗೆ ಬೆಂಬಲ ನೀಡುತ್ತಿದ್ದಾರೆ. ಇನ್ನು ಕೆಲವರು ಕಂಗನಾ ನಡೆಯನ್ನು ಟೀಕಿಸುತ್ತಿದ್ದಾರೆ. ಆದರೆ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾರಂಗದ ನಟರೊಬ್ಬರು ಪ್ರತಿಕ್ರಿಯೆ ನೀಡಿ, ಕಂಗನಾ ಬೆಂಬಲಕ್ಕೆ ನಿಂತಿದ್ದಾರೆ. ವಿಶಾಲ್ ಮಾತಿಗೆ ಅನೇಕರು ಬೆಂಬಲಿಸಿ ಧನ್ಯವಾದ ಹೇಳುತ್ತಿದ್ದಾರೆ.

  Sanjjana ಗೊಳಾಟಕ್ಕೆ full stop | Filmibeat Kannada
  ಸಿಎಂಗೆ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡ ಕಂಗನಾ

  ಸಿಎಂಗೆ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡ ಕಂಗನಾ

  "ಉದ್ಧವ್ ಠಾಕ್ರೆ, ಏನು ಯೋಚಿಸುತ್ತಿದ್ದೀರಿ. ಫಿಲ್ಮ್ ಮಾಫಿಯಾ ಜೊತೆ ಸೇರಿ, ನನ್ನ ಮನೆ ಕೆಡವಿ, ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದೀನಿ ಅಂತ ಅನಿಸುತ್ತಿದೆಯಾ? ಇಂದು ನನ್ನ ಮನೆ ನೆಲಸಮಗೊಂಡಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ. ಕಾಲ ಚಕ್ರ ತಿರುಗುತ್ತಲೇ ಇರುತ್ತೆ ನೆನಪಿಟ್ಟುಕೋ, ಇದು ಎಂದಿಗೂ ಒಂದೇ ರೀತಿ ಇರುವುದಿಲ್ಲ. ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ ನಡೆದಿತ್ತು ಅಂತ ಕೇಳಿದ್ವಿ, ಆದರೆ ಇಂದು ನನಗೆ ಆ ಅನುಭವವಾಗಿದೆ. ನಾಳೆ ನಾನು ಅಯೋಧ್ಯೆ ಮೇಲೆ ಮಾತ್ರವಲ್ಲ ಕಾಶ್ಮೀರಿ ಪಂಡಿತರ ಬಗ್ಗೆಯೂ ಸಿನಿಮಾ ಮಾಡೇ ಮಾಡ್ತೀನಿ" ಎಂದು ಸವಾಲ್ ಹಾಕಿದ್ದಾರೆ.

  English summary
  South Actor Vishal supports to Kangana Ranaut and she compares Kangana Ranaut to Bhagat Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X