twitter
    For Quick Alerts
    ALLOW NOTIFICATIONS  
    For Daily Alerts

    'ಐಎಂಡಿಬಿ'ಯಲ್ಲಿ ಅಗ್ರ ಸ್ಥಾನ ಪಡೆದ ಸೂರ್ಯ ನಟನೆಯ 'ಜೈ ಭೀಮ್'

    |

    ಒಟಿಟಿ ಫ್ಲಾಟ್‌ಫಾರಂಗಳಿಂದ ಥಿಯೇಟರ್‌ಗಳಿಗೆ ನಷ್ಟ ಉಂಟಾಗುತ್ತಿದೆ ಎಂಬ ವಾದ ಇದೆ. ಈ ಬಗ್ಗೆ ಈಗಲೂ ಚರ್ಚೆಗಳು, ಪರ ವಿರೋಧ ಮಾತುಗಳು ನಡೆಯುತ್ತಲೇ ಇವೆ. ಇದರ ಮಧ್ಯದಲ್ಲೇ ಸಾಕಷ್ಟು ಸಿನಿಮಾಗಳು ಒಟಿಟಿಯಲ್ಲಿ ತೆರೆಕಂಡು ದೊಡ್ಡ ಮಟ್ಟದಲ್ಲಿ ಯಶಸ್ಸು ತನ್ನದಾಗಿಸಿಕೊಳ್ಳುತ್ತಿವೆ. ಹಾಕಿದ ಬಂಡವಾಳಕಿಂತಲೂ ಅಧಿಕ ಸಂಪಾದನೆ ಮಾಡುತ್ತಿವೆ. ಕೊರೋನಾ ಹಾವಳಿಯಿಂದ ಕಂಗೆಟ್ಟಿದ್ದ ಹಾಗೂ ನಷ್ಟದಲ್ಲಿದ್ದ ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಿ ಲಾಭವನ್ನು ತಮ್ಮದಾಗಿಸಿಕೊಂಡು ಕೊಂಚ ಸುಧಾರಿಸಿಕೊಳ್ಳುತ್ತಿದ್ದಾರೆ. ಅಂತೆಯೇ ವಿರೋಧದ ನಡುವೆಯೂ ನವೆಂಬರ್ 2ಕ್ಕೆ ಸೂರ್ಯ ನಟನೆಯ ಜೈ ಭೀಮ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿರೋದು ಎಲ್ಲರಿಗೂ ಗೊತ್ತಿದೆ.

    ಒಟಿಟಿಯಲ್ಲಿ ರಿಲೀಸ್ ಆಗಿರುವ ಜೈ ಭೀಮ್ ನಿರೀಕ್ಷೆಗೂ ಮೀರಿ ಯಶಸ್ಸನ್ನು ಬಾಚಿಕೊಳ್ಳುತ್ತಿದೆ. ಜೈ ಭೀಮ್ ಸಿನಿಮಾವನ್ನು ಎಲ್ಲರೂ ನೋಡುತ್ತಿದ್ದಾರೆ. ಚಿತ್ರದಲ್ಲಿ ಕಟ್ಟಿಕೊಟ್ಟಿರುವ ನೈಜ ಕಥೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಇದರ ಬೆನ್ನಲ್ಲೆ ಜೈ ಭೀಮ್ ಚಿತ್ರ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಐಎಂಡಿಬಿಯಲ್ಲಿ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕೆ ಹಾಕಿ ಟಾಪ್‌ ಸ್ಥಾನವನ್ನು ಅಲಂಕರಿಸಿದೆ. ಈ ಮೂಲಕ ಸಿನಿ ಇಂಡಸ್ಟ್ರಿಯ ಗಮನ ಸೆಳೆದಿದೆ ಜೈ ಭೀಮ್ ಸಿನಿಮಾ.

    ಜೈ ಭೀಮ್ ಸಿನಿಮಾ ನೋಡಿದವರಿಗಷ್ಟೆ ಗೊತ್ತು ಸಿನಿಮಾದ ನೈಜತೆ ಒಬ್ಬ ವ್ಯಕ್ತಿಗೆ ಹೇಗೆ ನಾಟುತ್ತೆ ಎಂಬುದು. ಅಸಲಿಗೆ ಜೈ ಭೀಮ್ ಸಿನಿಮಾ 1993ರಲ್ಲಿ ನಡೆದ ನೈಜ ಕಥೆ ಆಧಾರಿತ ಸಿನಿಮಾ. ನ್ಯಾಯಮೂರ್ತಿ ಕೆ.ಚಂದ್ರು ಅವರು ಹೋರಾಡಿದ ಪ್ರಕರಣವನ್ನು ಈ ಸಿನಿಮಾ ಒಳಗೊಂಡಿದೆ. ತಮಿಳುನಾಡಿನ ಇರುಲರ್ ಬುಡಕಟ್ಟಿನ ಸೆಂಗೇಣಿ ಮತ್ತು ರಾಜಾಕಣ್ಣು ದಂಪತಿಗಳು ಇಲ್ಲಿ ಕಥಾ ಪಾತ್ರಧಾರಿಗಳು. ಇವರಿಬ್ಬರು ಇರುಲರ್ ಬುಡಕಟ್ಟು ದಂಪತಿಗಳು. ಇಲಿಗಳ ಹಾವಳಿಯನ್ನು ನಿಯಂತ್ರಿಸಲು ಮತ್ತು ವಿಷಕಾರಿ ಹಾವುಗಳನ್ನು ಹಿಡಿಯಲು ಮೇಲ್ಜಾತಿ ಪುರುಷರ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಸೆಂಗೇಣಿ ಪತಿ ರಾಜಾಕಣ್ಣುವನ್ನು ಒಂದು ಪ್ರಕರಣದಲ್ಲಿ ಪೋಲೀಸರು ಬಂಧಿಸುತ್ತಾರೆ. ನಂತರ ಆತ ಠಾಣೆಯಿಂದ ನಾಪತ್ತೆ ಆಗುತ್ತಾನೆ. ಈ ಸಂದರ್ಭದಲ್ಲಿ ತನ್ನ ಪತಿಗೆ ನ್ಯಾಯ ಕೇಳಿ ವಕೀಲ ಚಂದ್ರುವಿನ ಸಹಾಯ ಪಡೆಯುತ್ತಾಳೆ. ಹೀಗೆ ಸೆಂಗೇಣಿಗೆ ನ್ಯಾಯ ಸಿಗುತ್ತಾ? ಚಂದ್ರು ಹೇಗೆಲ್ಲ ಇಲ್ಲಿ ಹೋರಾಟ ಮಾಡುತ್ತಾರೆ? ಅಡೆತಡೆಗಳು ಬಂದರೂ ಅದನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನು ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ.

    Tamil film Jai Bhim is first position in imdb

    ಇಂತಹ ಒಂದು ಅದ್ಭುತ ಚಿತ್ರಕ್ಕೆ ಈಗ ಐಎಂಡಿಬಿಯಲ್ಲಿ ಅಗ್ರಸ್ಥಾನ ಸಿಕ್ಕಿರುವುದಕ್ಕೆ ಚಿತ್ರತಂಡ ಸೇರಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಐಎಂಡಿಬಿಯಲ್ಲಿ 9.6 ರೇಟಿಂಗ್‌ ಅನ್ನು ಜೈಭೀಮ್ ಪಡೆದುಕೊಂಡಿದ್ದು, ಮೊದಲ ಸ್ಥಾನದಲ್ಲಿದ್ದ ಸಿನಿಮಾಗಳನ್ನು ಹಿಂದಿಕ್ಕಿ ಮುನ್ನಡೆದಿದೆ. ಜೈ ಭೀಮ್ ಸಿನಿಮಾದ ನಂತರ ಎರಡನೇ ಸ್ಥಾನದಲ್ಲಿ 9.3 ರೇಟಿಂಗ್ ಪಡೆದ ಹಾಲಿವುಡ್‌ನ 'ಕಲ್ಟ್ ಕ್ಲಾಸಿಕ್ ದಿ ರಿಡೆಂಪ್ಶನ್' ಇದ್ದು, ಮೂರನೇ ಸ್ಥಾನದಲ್ಲಿ 9.2 ರೇಟಿಂಗ್ ಪಡೆದ 'ದಿ ಗಾಡ್ ಫಾದರ್' ನಾಲ್ಕನೇ ಸ್ಥಾನದಲ್ಲಿ ' ದಿ ಡಾರ್ಕ್ ನೈಟ್' ಸಿನಿಮಾ ಇದೆ. ಈ ಎಲ್ಲಾ ಸಿನಿಮಾಗಳನ್ನು ಮೀರಿ ಜೈ ಭೀಮ್ ಯಶಸ್ಸಿನ ದಾರಿಯಲ್ಲಿ ಮುನ್ನುಗುತ್ತಿದೆ.

    Tamil film Jai Bhim is first position in imdb

    ಈ ನೈಜ ಕಥೆ ಆಧಾರಿತ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಂದರೆ ಸೆಂಗೇಣಿ ಮತ್ತು ರಾಜಕಣ್ಣು ದಂಪತಿ ಪಾತ್ರವನ್ನು ಲಿಜೋ ಮೋಲ್ ಜೋಸ್ ಮತ್ತು ಮಣಿಕಂಟನ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ವಕೀಲ ಚಂದ್ರು ಪಾತ್ರದಲ್ಲಿ ನಟ ಸೂರ್ಯ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಪ್ರಕಾಶ್ ರಾಜ್, ರಜಿಶಾ ವಿಜಯನ್, ರಾವ್ ರಮೇಶ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸೇನ್ ರೋಲ್ಡನ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸೂರ್ಯ ಮತ್ತು ಜ್ಯೋತಿಕಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    English summary
    Jai Bhim film is first position in imdb's list of top films.
    Monday, November 15, 2021, 9:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X