For Quick Alerts
  ALLOW NOTIFICATIONS  
  For Daily Alerts

  'KGF - 2' ಎದುರು ಮುಗ್ಗರಿಸಿದ 'ಬೀಸ್ಟ್' ಮತ್ತೆ ಗೆದ್ದಿದ್ಹೇಗೆ? ದಳಪತಿ ವಿಜಯ್ ಮುಂದೆ ಮಂಕಾದ ಕಮಲ್ 'ವಿಕ್ರಂ'!

  |

  ಕಮಲ್ ಹಾಸನ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ 'ವಿಕ್ರಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ವಿಶ್ವದಾದ್ಯಂತ 426 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇನ್ನು ಇಳಯ ದಳಪತಿ ವಿಜಯ್ ನಟಿಸಿದ್ದ 'ಬೀಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೆ ಈಗ 'ವಿಕ್ರಂ' ಎದುರು 'ಬೀಸ್ಟ್' ಕೈ ಮೇಲಾಗಿದೆ.

  ಒಂದು ದಿನದ ಅಂತರದಲ್ಲಿ ಕನ್ನಡದ 'KGF - 2' ಹಾಗೂ ತಮಿಳಿನ 'ಬೀಸ್ಟ್' ಸಿನಿಮಾಗಳು ತೆರೆಗಪ್ಪಳಿಸಿತ್ತು. ಇಳಯ ದಳಪತಿ ವಿಜಯ್ ನಟಿಸಿದ್ದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಅಟ್ಟರ್‌ ಫ್ಲಾಪ್ ಲಿಸ್ಟ್ ಸೇರಿಕೊಂಡಿತ್ತು. ಆದರೆ ಯಶ್ ನಟನೆಯ 'KGF - 2' ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆದರೆ ಈಗ ಮತ್ತೆ 'ಬೀಸ್ಟ್' ಸಿನಿಮಾ ಸುದ್ದಿಯಲ್ಲಿದೆ. ಥಿಯೇಟರ್‌ನಲ್ಲಿ ಸದ್ದು ಮಾಡಿದ 'ವಿಕ್ರಂ' ಸಿನಿಮಾವನ್ನು ಹಿಂದಿಕ್ಕಿ ಎಲ್ಲರ ಹುಬ್ಬೇರಿಸಿದೆ.

  35 ವರ್ಷಗಳ ನಂತರ ಖ್ಯಾತ ನಿರ್ದೇಶಕನ ಜೊತೆ ಕೈ ಜೋಡಿಸಿದ ಕಮಲ್ ಹಾಸನ್: ಯಾವ ಸಿನಿಮಾ?35 ವರ್ಷಗಳ ನಂತರ ಖ್ಯಾತ ನಿರ್ದೇಶಕನ ಜೊತೆ ಕೈ ಜೋಡಿಸಿದ ಕಮಲ್ ಹಾಸನ್: ಯಾವ ಸಿನಿಮಾ?

  ದೀಪಾವಳಿ ಹಬ್ಬಕ್ಕೆ 'ಬೀಸ್ಟ್' ಹಾಗೂ 'ವಿಕ್ರಂ' ಸಿನಿಮಾಗಳು ಟಿವಿಯಲ್ಲಿ ಪ್ರೀಮಿಯರ್ ಆಗಿದ್ದವು. ಆದರ TRP ರೇಟಿಂಗ್ ಮಾಹಿತಿ ಲಭ್ಯವಾಗಿದ್ದು 'ಬೀಸ್ಟ್' ಸಿನಿಮಾ ಹೆಚ್ಚು ರೇಟಿಂಗ್ ಪಡೆದು ಸದ್ದು ಮಾಡಿದೆ. ಈ ಹಿಂದೆ ಹಲವು ಬಾರಿ ಟಿವಿಯಲ್ಲಿ ಬಂದಿದ್ದ 'ವಿಶ್ವಾಸಂ' ಹಾಗೂ 'ಅರುಣಾಚಲಂ' ಸಿನಿಮಾಗಳು ಕೂಡ 'ವಿಕ್ರಂ' ಚಿತ್ರಕ್ಕಿಂತ ಹೆಚ್ಚು ರೇಟಿಂಗ್ ಪಡೆದಿರುವುದು ಅಚ್ಚರಿ ಮೂಡಿಸಿದೆ.

  12.62 ರೇಟಿಂಗ್ ಪಡೆದ 'ಬೀಸ್ಟ್'

  12.62 ರೇಟಿಂಗ್ ಪಡೆದ 'ಬೀಸ್ಟ್'

  ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಬೀಸ್ಟ್' ಸಿನಿಮಾ ಏಪ್ರಿಲ್ 13ಕ್ಕೆ ತೆರೆಗೆ ಬಂದಿತ್ತು. ಇಳಯ ದಳಪತಿ ವಿಜಯ್ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದರು. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹೈಲೆಟ್ ಆಗಿತ್ತು. ಅದರಲ್ಲೂ 'ಅರಾಬಿಕ್ ಕುತ್ತು' ಸೂಪರ್ ಹಿಟ್ ಆಗಿತ್ತು. ಆದರೆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಮರುದಿನವೇ 'KGF - 2' ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. 'ಬೀಸ್ಟ್' ಆರ್ಭಟ ನಡೆಯಲೇ ಇಲ್ಲ. ಆದರೆ ಟಿವಿಯಲ್ಲಿ ಪ್ರಸಾರವಾದ ಚಿತ್ರಕ್ಕೆ 12.62 TRP ರೇಟಿಂಗ್ ಸಿಕ್ಕಿದೆ. 'ವಿಕ್ರಂ' ಚಿತ್ರಕ್ಕೆ ಕೇವಲ 4.42 ರೇಟಿಂಗ್ ಅಷ್ಟೇ ಸಿಕ್ಕಿದೆ.

  426 ಕೋಟಿ ದೋಚಿದ್ದ 'ವಿಕ್ರಂ'

  426 ಕೋಟಿ ದೋಚಿದ್ದ 'ವಿಕ್ರಂ'

  ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ವಿಕ್ರಂ' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ತಮಿಳುನಾಡು ಬಾಕ್ಸಾಫೀಸ್‌ನಲ್ಲಿ ಕೊಂಚ ಜೋರಾಗೇ ಸದ್ದು ಮಡಿ 426 ಕೋಟಿ ರೂ.ಗೂ ಹೆಚ್ಚು ಗಳಿಸಿತ್ತು. ಚಿತ್ರದಲ್ಲಿ ಕಮಲ್ ಹಾಸನ್‌ಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಸಾಥ್ ಕೊಟ್ಟಿದ್ದರು. ಬಾಕ್ಸಾಫೀಸ್‌ನಲ್ಲಿ ಅಷ್ಟೆಲ್ಲಾ ಸದ್ದು ಮಾಡಿದ ಚಿತ್ರ ಟಿವಿಯಲ್ಲಿ ವೀಕ್ಷಕರನ್ನು ಸೆಳೆಯದೇ ಇರುವುದು ಅಚ್ಚರಿ ಎನಿಸಿದೆ.

  ದೀಪಾವಳಿ ತಮಿಳು ಚಿತ್ರಗಳ TRP

  ದೀಪಾವಳಿ ತಮಿಳು ಚಿತ್ರಗಳ TRP

  ಟಿವಿಯಲ್ಲಿ ಯಾವ ಸಿನಿಮಾವನ್ನು ವೀಕ್ಷಕರು ಹೆಚ್ಚು ನೋಡಿದ್ದಾರೆ ಅನ್ನೋದು TRP ರೇಟಿಂಗ್‌ನಿಂದ ಗೊತ್ತಾಗುತ್ತದೆ. ಈ ಬಾರಿ ದೀಪಾವಳಿಗೆ ಟಿವಿಯಲ್ಲಿ ಪ್ರಸಾರವಾಗಿದ್ದ ಇನ್ನುಳಿದ ತಮಿಳು ಸಿನಿಮಾಗಳ ರೇಟಿಂಗ್ ನೋಡುವುದಾದರೆ ರಜನಿಕಾಂತ್ ನಟನೆಯ 'ಅರುಣಾಚಲಂ' ಚಿತ್ರಕ್ಕೆ 9.21 ರೇಟಿಂಗ್ ಸಿಕ್ಕಿದೆ. ಈ ಹಿಂದೆ ಸಾಕಷ್ಟು ಬಾರಿ ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಇನ್ನು 10ನೇ ಬಾರಿಗೆ ಪ್ರಸಾರವಾಗಿದ್ದ ಅಜಿತ್ ನಟನೆಯ 'ವಿಶ್ವಾಸಂ' ಚಿತ್ರಕ್ಕೆ 10.27 ರೇಟಿಂಗ್ ಸಿಕ್ಕಿರೋದು ವಿಶೇಷ.

  'ವಿಕ್ರಂ' ಶತದಿನೋತ್ಸವ ಸಂಭ್ರಮಾಚರಣೆ

  'ವಿಕ್ರಂ' ಶತದಿನೋತ್ಸವ ಸಂಭ್ರಮಾಚರಣೆ

  ಸೋತು ಸುಣ್ಣವಾಗಿದ್ದ ಕಮಲ್ ಹಾಸನ್‌ಗೆ 'ವಿಕ್ರಂ' ಸಕ್ಸಸ್ ಟಾನಿಕ್ ನೀಡಿರೋದು ಸುಳ್ಳಲ್ಲ. ಚಿತ್ರದ ನಿರ್ಮಾಣದಲ್ಲೂ ಕೈ ಜೋಡಿಸಿದ್ದ ಉಳಗ ನಾಯಗನ್ ತಮ್ಮ ಸಾಲವನ್ನು ತೀರಿಸಿದ್ದರು. ಇನ್ನು ಉಳಗನಾಯಗನ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ವಿಕ್ರಂ' ಚಿತ್ರದ ಶತದಿನೋತ್ಸವ ಸಂಭ್ರಮಾಚರಣೆ ಮಾಡಲಾಗಿದೆ. ಚೆನ್ನೈನ ಕಲೆವನೈರ್ ಸಭಾಂಗಣದಲ್ಲಿ ಚಿತ್ರರಂಗ ಹಾಗೂ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿದೆ.

  English summary
  Thalapathy Vijay Starrer Beast Beats Kamal hasaan's Vikram in TRP. Vikram movie registered a very low TRP rating of 4.42 on its first television premiere on Diwali which shocked everyone. Know More.
  Tuesday, November 8, 2022, 9:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X