For Quick Alerts
  ALLOW NOTIFICATIONS  
  For Daily Alerts

  ನಿಯಮ ಉಲ್ಲಂಘಿಸಿ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ವಿರುದ್ಧ ಪ್ರಕರಣ

  |

  ನಟ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಇಂದು (ಜನವರಿ 13) ಬಿಡುಗಡೆ ಆಗಿದ್ದು, ಕೋವಿಡ್ ನಡುವೆಯೂ ಉತ್ಸಾಹದಿಂದ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ಮೇಲೆ ಪ್ರಕರಣವೊಂದು ದಾಖಲಾಗಿದೆ.

  ಚಿತ್ರಮಂದಿರಗಳಲ್ಲಿ ಶೇ 50% ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆದರೆ ಚೆನ್ನೈನ ಜಫರ್‌ಖಾನ್‌ಪೇಟ್‌ ನಲ್ಲಿನ ಕಾಸಿ ಚಿತ್ರಮಂದಿರದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ ಸೀಟುಗಳ ನಡುವೆ ಅಂತರವಿಲ್ಲದೆ ಪ್ರೇಕ್ಷಕರನ್ನು ಕೂರಲು ಅನುವು ಮಾಡಿ ಸಿನಿಮಾ ಪ್ರದರ್ಶಿಸಲಾಗಿದೆ.

  ಪೂರ್ಣ ಚಿತ್ರಮಂದಿರವನ್ನು ತುಂಬಿದ್ದಲ್ಲದೆ ಚಿತ್ರಮಂದಿರದ ಸ್ಕ್ರೀನ್‌ನ ಮುಂಭಾಗ ಅಭಿಮಾನಿಗಳು ಗುಂಪು ಸೇರಿ ನರ್ತಿಸಿದ್ದಾರೆ ಇದನ್ನು ಚಿತ್ರಮಂದಿರದ ಸಿಬ್ಬಂದಿ ತಡೆದಿಲ್ಲ. ಚಿತ್ರಮಂದಿರದಲ್ಲಿ ಕೊರೊನಾ ನಿಯಮ ಉಲ್ಲಂಘನೆ ಆಗಿರುವ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಚಿತ್ರಮಂದಿರದ ಮೇಲೆ ಐಪಿಸಿ 188 ಮತ್ತು 269 ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಜುಲ್ಮಾನೆ ಸಹ ವಿಧಿಸಲಾಗಿದೆ.

  ಮಾಸ್ಟರ್ ಸಿನಿಮಾ ಹಲವು ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆ ಆಗಿದ್ದು, ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಕೊರೊನಾ ಲಾಕ್‌ಡೌನ್ ಬಳಿಕ ಬಿಡುಗಡೆ ಆಗುತ್ತಿರುವ ಭಾರತದ ದೊಡ್ಡ ಸ್ಟಾರ್ ಸಿನಿಮಾ 'ಮಾಸ್ಟರ್' ಇದೇ ಕಾರಣಕ್ಕೆ ಹಲವು ರಾಜ್ಯಗಳ ಸಿನಿಮಾ ಉದ್ಯಮವನ್ನು ಸೆಳೆದಿದೆ.

  ತನ್ನವರನ್ನು ಕಿಚ್ಚ ಸುದೀಪ್ ನೋಡಿಕೊಳ್ಳೊ ರೀತಿ ಇದು | Filmibeat Kannada

  ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಜೊತೆಗೆ ವಿಜಯ್ ಸೇತುಪತಿಯೂ ನಟಿಸಿದ್ದು, ಈ ಇಬ್ಬರ ನಟನೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಲೋಕೇಶ್ ಕನಕರಾಜನ್ ನಿರ್ದೇಶಿಸಿದ್ದು, ನಾಯಕಿಯಾಗಿ ಮಾಳವಿಕಾ ಮೋಹನನ್ ಇದ್ದಾರೆ.

  English summary
  Kasi Theater in Chennai booked for violating COVID rules. Theaters allows 100% accupency in the movie hall.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X