twitter
    For Quick Alerts
    ALLOW NOTIFICATIONS  
    For Daily Alerts

    'ಪೊನ್ನಿಯಿನ್ ಸೆಲ್ವನ್' ರಿಲೀಸ್‌ ಮಾಡದಂತೆ ಬೆದರಿಕೆ: ಚಿತ್ರತಂಡಕ್ಕೆ ಹೊಸ ಚಿಂತೆ

    |

    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ನಿರ್ದೇಶಕ ಮಣಿರತ್ನಂ ಬಹುನಿರೀಕ್ಷಿತ 'ಪೊನ್ನಿಯಿನ್ ಸೆಲ್ವನ್' 1 ಚಿತ್ರ ಇದೆ ಸಪ್ಟೆಂಬರ್ 30ರಂದು ಬಿಡುಗಡೆಗೆ ಸಜ್ಜಾಗಿದೆ. ವಿಶ್ವದಾದ್ಯಂತ ತೆರೆ ಕಾಣಲಿರುವ 'ಪೊನ್ನಿಯಿನ್ ಸೆಲ್ವನ್' ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

    'ಪೊನ್ನಿಯಿನ್ ಸೆಲ್ವನ್' ಚಿತ್ರದ ಟಿಕೆಟ್‌ ಬುಕ್ಕಿಂಗ್‌ ಈಗಾಗಲೇ ಆರಂಭವಾಗಿದ್ದು, ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಪ್ರೇಕ್ಷಕರು ಚಿತ್ರದ ಟಿಕೆಟ್‌ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಬೆಂಗಳೂರು, ಮೈಸೂರು ಭಾಗಗಳಲ್ಲೂ 'ಪೊನ್ನಿಯಿನ್ ಸೆಲ್ವನ್' ಟಿಕೆಟ್‌ಗೆ ಬೇಡಿಕೆ ಹೆಚ್ಚಿದ್ದು, ಸ್ಯಾಂಡಲ್‌ವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಟಿಕೆಟ್‌ಗಳು ಬುಕ್ಕಿಂಗ್‌ ಶರ ವೇಗದಲ್ಲಿ ಸಾಗುತ್ತಿದೆ.

    ಬೆಂಗಳೂರು ಪಿವಿಆರ್‌ನಲ್ಲಿ ಪೊನ್ನಿಯಿನ್ ಸೆಲ್ವನ್ ಟಿಕೆಟ್ ದರ ಅಬ್ಬಬ್ಬಾ! ಐದಾರು ಚಿತ್ರ ನೋಡಬಹುದಲ್ಲಾ ಎಂದ ಪ್ರೇಕ್ಷಕರುಬೆಂಗಳೂರು ಪಿವಿಆರ್‌ನಲ್ಲಿ ಪೊನ್ನಿಯಿನ್ ಸೆಲ್ವನ್ ಟಿಕೆಟ್ ದರ ಅಬ್ಬಬ್ಬಾ! ಐದಾರು ಚಿತ್ರ ನೋಡಬಹುದಲ್ಲಾ ಎಂದ ಪ್ರೇಕ್ಷಕರು

    ಈಗಾಗಲೇ ಟ್ರೈಲರ್‌ ಪೋಸ್ಟರ್‌ಗಳ ಮೂಲಕ ಚಿತ್ರ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದು, ಸಿನಿ ಪ್ರಿಯರು ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಆದರೆ ಚಿತ್ರ ಬಿಡುಗಡೆಗೆ ದಿನ ಸಮೀಪಿಸುತ್ತಿದ್ದಂತೆ. ಪೊನ್ನಿಯಿನ್ ಸೆಲ್ವನ್ ಚಿತ್ರ ಬಿಡುಗಡೆ ಮಾಡದಂತೆ ಚಿತ್ರಮಂದಿರದ ಮಾಲೀಕರಿಗೆ ಬೆದರಿಕೆ ಕರೆಗಳು ಬಂದಿದೆ ಎಂದು ವರದಿಯಾಗಿದೆ.

    Theatre Owners Receive Threats Ahead Of Ponniyin Selvan Release

    ಈ ಘಟನೆ ವಿದೇಶದಲ್ಲಿ ನಡೆದಿದೆ. ವಿಶ್ವದಾದ್ಯಂತ ತೆರೆಕಾಣುತ್ತಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಲೀಸ್ ಮಾಡಿದರೆ ನಾವು ದಾಳಿ ಮಾಡುತ್ತೇವೆ ಎನ್ನುವ ಎಚ್ಚರಿಕೆ ಸಂದೇಶ ಹ್ಯಾಮಿಲ್ಟನ್, ಲಂಡನ್ ಹರಿದಾಡುತ್ತಿದ್ದು, ಚಿತ್ರ ವಿತರಕರು ಆತಂಕದಲ್ಲಿದ್ದಾರೆ. ಪೊನ್ನಿಯಿನ್ ಸೆಲ್ವನ್ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಕೆಡಬ್ಲ್ಯೂ ಟಾಕೀಸ್ ವಹಿಸಿಕೊಂಡಿದ್ದು, ಬೆದರಿಕೆ ಸಂದೇಶದ ವಿಚಾರವನ್ನು ಕೆಡಬ್ಲ್ಯೂ ಟಾಕೀಸ್ ಬಹಿರಂಗಪಡಿಸಿದೆ.

    ಈ ಬಗ್ಗೆ ಟ್ವೀಟ್‌ ಮಾಡಿರುವ ಕೆಡಬ್ಲ್ಯೂ ಟಾಕೀಸ್ ಹ್ಯಾಮಿಲ್ಟನ್, ಲಂಡನ್ ಸೇರಿದಂತೆ ಮೊದಲಾದ ಭಾಗಗಳ ಚಿತ್ರಮಂದಿರದ ಮಾಲೀಕರಿಂದ ನಮಗೆ ವಿಚಾರವೊಂದು ತಿಳಿದುಬಂದಿದೆ. ಚಿತ್ರಮಂದಿರದ ಮಾಲೀಕರಿಗೆ ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು, ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಮಾಡಿದರೆ ದಾಳಿ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಚಿತ್ರತಂಡ ಗಮನ ಹರಿಸಿದ್ದು, ಮುಂದಿನ ಕ್ರಮಕ್ಕೆ ಮುಂದಾಗಿದೆ. ದಕ್ಷಿಣ ಭಾರತದ ಸಿನಿಮಾಗಳಿಗೆ ವಿದೇಶದಲ್ಲಿ ಈ ಬೆದರಿಕೆ ಹೊಸತಲ್ಲ. ಆದರೂ ಎಚ್ಚರ ವಹಿಸುವಂತೆ ಪೊನ್ನಿಯಿನ್ ಸೆಲ್ವನ್ ಚಿತ್ರತಂಡ ತಿಳಿಸಿದೆ.

    ಪರಭಾಷೆ ಸಿನಿಮಾಗಳಿಂದ ಮತ್ತೊಮ್ಮೆ ಕನ್ನಡ ಭಾಷೆಯ ನಿರ್ಲಕ್ಷ್ಯಪರಭಾಷೆ ಸಿನಿಮಾಗಳಿಂದ ಮತ್ತೊಮ್ಮೆ ಕನ್ನಡ ಭಾಷೆಯ ನಿರ್ಲಕ್ಷ್ಯ

    ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಸುಮಾರು 500 ಕೋಟಿ ರೂ ಬಜೆಟ್‌ನಲ್ಲಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರ ಸಿದ್ಧವಾಗಿದ್ದು, ಬಹಳ ಅದ್ಧೂರಿಯಾಗಿ ಮೂಡಿಬಂದಿದೆ. ಬಾಲಿವುಡ್‌ ನಟಿ ಐಶ್ವರ್ಯಾ ರೈ, ಟಾಲಿವುಡ್‌ ನಟ ಚಿಯಾನ್‌ ವಿಕ್ರಮ್‌, ಕಾರ್ತಿ, ಜಯಂ ರವಿ, ತ್ರಿಶಾ, ಶೋಭಿತಾ ಧುಲಿಪಾಲ ಸೇರಿದಂತೆ ದೊಡ್ಡ ತಾರಾ ಬಳಗವೆ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿದೆ. ವಿಶಾಲವಾದ ಸೆಟ್‌ನಲ್ಲಿ ಚಿತ್ರೀಕರಿಸಿದ ಪೊನ್ನಿಯಿನ್ ಸೆಲ್ವನ್ ರವಿವರ್ಮನ್ ಅವರ ಛಾಯಾಗ್ರಹಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಇನ್ನು ಎ.ಆರ್‌ ರೆಹಮಾನ್‌ ಅವರ ಸಂಗೀತ ಚಿತ್ರವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ.

    ಪೊನ್ನಿಯಿನ್ ಸೆಲ್ವನ್ ಚಿತ್ರ ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿ ಆಧರಿತ ಐತಿಹಾಸಿಕ ಕಥೆಯಾಗಿದೆ. 1955ರಲ್ಲಿ ಇದ್ದ ಚೋಳರ ಆಡಳ್ವಿಕೆ ಮತ್ತು ಅವರ ಪರಂಪರೆಯನ್ನು ಚಿತ್ರ ಪ್ರತಿನಿಧಿಸುತ್ತಿದೆ. ಚೋಳರ ಅದ್ಧೂರಿತನ ಜೊತೆಗೆ ತಮಿಳು ನಾಡಿನ ಹಳೆಯ ಪರಂಪರೆಯ ಸುತ್ತ ಚಿತ್ರದ ಕಥೆ ಸುತ್ತಲಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ತೆರೆ ಮೇಲೆ ಕಾಣಲು ಸಿನಿಮಾ ಪ್ರಿಯರು ಕಾತುರರಾಗಿದ್ದಾರೆ.

    English summary
    Mani Ratnam's Ponniyin Selvan 1 has faced a new problem in Hamilton, Kitchener and London after theater owners received online threat against the film.
    Wednesday, September 28, 2022, 21:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X