24 ಗಂಟೆಯ ಬಳಿಕ ಇನ್ಸ್ಟಾಗ್ರಾಂ ವಾಪಸ್ ಪಡೆದ ನಟಿ ವರಲಕ್ಷ್ಮಿ ಶರತ್‌ಕುಮಾರ್

ಬಹುಭಾಷಾ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಖಾತೆ ಹ್ಯಾಕ್‌ಗೆ ಒಳಗಾಗಿತ್ತು. 24 ಗಂಟೆಯ ಬಳಿಕ ತಮ್ಮ ಇನ್ಸ್ಟಾ ಖಾತೆಯನ್ನು ವಾಪಸ್ ಪಡೆಯುವಲ್ಲಿ ನಟಿ ಯಶಸ್ವಿಯಾಗಿದ್ದಾರೆ.

ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆದ ಕೂಡಲೇ ನಟಿ ಸೈಬರ್ ಪೊಲೀಸರಿಗೆ ವಿಷಯ ತಿಳಿಸಿದ್ದು, ವೃತ್ತಿ ಪರರ ಸಹಾಯದಿಂದ ಖಾತೆ ಹಿಂತಿರುಗಿಸಿಕೊಂಡಿದ್ದಾರೆ.

ಇನ್ಸ್ಟಾಗ್ರಾಂ ಖಾತೆ ವಶಕ್ಕೆ ಪಡೆದುಕೊಂಡ ಬಳಿಕ ''ದಯವಿಟ್ಟು ನಕಲಿ ಲಿಂಕ್‌ಗಳನ್ನು ಯಾರೂ ಕ್ಲಿಕ್ ಮಾಡಬೇಡಿ, ಹ್ಯಾಕ್ ಆಗುವ ಸಾಧ್ಯತೆ ಇದೆ'' ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Varalaxmi Sarathkumars Instagram accounts recovers

ಡಿಸೆಂಬರ್ 2 ರಂದು ವರಲಕ್ಷ್ಮಿ ಶರತ್ ಕುಮಾರ್ ಖಾತೆ ಹ್ಯಾಕ್ ಆಗಿತ್ತು. 24 ಗಂಟೆಗಳ ಬಳಿಕ ಖಾತೆ ವಾಪಸ್ ಪಡೆದುಕೊಂಡಿದ್ದು, 'ನಿರೀಕ್ಷೆ ಮತ್ತು ನೈಜತೆ' ಎಂಬಂತೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಖಾತೆ ಹ್ಯಾಕ್ ಆದ್ಮೇಲೆ "ನನ್ನ ಇನ್ಸ್ಟಾಗ್ರಾಂ ಅಥವಾ ಟ್ವಿಟ್ಟರ್‌ ಖಾತೆಯಿಂದ ಯಾವುದೇ ಸಂದೇಶಗ ಬಂದರೂ ಅದರ ಬಗ್ಗೆ ಎಚ್ಚರವಹಿಸಿ. ನನ್ನ ಖಾತೆ ನನಗೆ ಸಿಕ್ಕ ನಂತರ ನಾನು ನಿಮ್ಮನ್ನು ಸಂಪರ್ಕಿಸುತ್ತೇನೆ. ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು, ಶೀಘ್ರದಲ್ಲೇ ನಿಮ್ಮನ್ನು ಆನ್‌ಲೈನ್‌ನಲ್ಲಿ ಮತ್ತೆ ನೋಡುತ್ತೇನೆ'' ಎಂದು ಪ್ರಕಟಣೆ ಬಿಡುಗಡೆ ಮಾಡಿದ್ದರು.

ವರಲಕ್ಷ್ಮಿ ಕೊನೆಯದಾಗಿ 'ಡ್ಯಾನಿ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 'ಜೀ-5' ಆನ್‌ಲೈನ್ ಚಾನಲ್‌ನಲ್ಲಿ ತೆರೆಕಂಡಿತ್ತು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರವಿತೇಜ ಮತ್ತು ಶ್ರುತಿ ಹಾಸನ್ ನಟನೆಯ 'ಕ್ರ್ಯಾಕ್' ಸಿನಿಮಾದಲ್ಲಿ ವರಲಕ್ಷ್ಮಿ ನಟಿಸಿದ್ದು, ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

Recommended Video

ಮಂಡ್ಯದಲ್ಲೂ ನಡೆದೇ ಹೋಯ್ತು ಅಮಾನವೀಯ ಘಟನೆ | Filmibeat Kannada

More from Filmibeat

English summary
Tamil actress Varalaxmi Sarathkumar's Twitter and Instagram accounts recovers after 24 hours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X