Don't Miss!
- News
ಪರಿಚಯಸ್ಥನಿಂದಲೇ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ:ಆರೋಪಿ ಬಂಧನ
- Finance
Forbes Real-Time Billionaires 2023: ಭಾರತೀಯ ಶ್ರೀಮಂತರ ಪೈಕಿ ಮುಖೇಶ್ ಅಂಬಾನಿಗೆ ಅಗ್ರ ಸ್ಥಾನ!
- Technology
ಕೇಂದ್ರ ಬಜೆಟ್ 2023: ಪ್ಯಾನ್ ಕಾರ್ಡ್ ಬಳಕೆದಾರರೇ ಇಲ್ಲಿ ಗಮನಿಸಿ!
- Automobiles
ಸ್ಕ್ರಾಪ್ ಆಗಲಿವೆ 15 ವರ್ಷಕ್ಕಿಂತ ಹಳೆಯ 1.19 ಲಕ್ಷ ವಾಹನಗಳು... ಮಾಲೀಕರಿಗೆ ನೋಟಿಸ್
- Sports
Ind Vs Aus Test: ಬೆಂಗಳೂರಿಗೆ ಬಂದ ಕಾಂಗರೂ ಪಡೆ: ಫೆಬ್ರವರಿ 2ರಿಂದ ಆಲೂರಿನಲ್ಲಿ ಅಭ್ಯಾಸ
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
7 ದಿನದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳು; ಈ 6 ಚಿತ್ರಗಳನ್ನು ಹಿಂದಿಕ್ಕುವಲ್ಲಿ ಸೋತ 'ವಾರಿಸು'!
ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ತಮಿಳಿನ ವಾರಿಸು ಹಾಗೂ ತುನಿವು ಚಿತ್ರಗಳು ಏಳು ದಿನಗಳನ್ನು ಪೂರೈಸಿವೆ. ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ವಿಜಯ್ ಹಾಗೂ ಅಜಿತ್ ಕುಮಾರ್ ನಟನೆಯ ಚಿತ್ರಗಳು ಪರಸ್ಪರ ಮುಖಾಮುಖಿಯಾಗಿ ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಸಂಕ್ರಾಂತಿಗೆ ತೆರೆಗೆ ಬರಲು ಮುಂದಾದ ದಕ್ಷಿಣ ಭಾರತದ ಚಿತ್ರಗಳ ಪೈಕಿ ಎಲ್ಲಾ ಚಿತ್ರಗಳಿಗಿಂತ ಮೊದಲು ಚಿತ್ರಮಂದಿರಕ್ಕೆ ಅಂದರೆ ಜನವರಿ 11ಕ್ಕೆ ತೆರೆಕಂಡ ಈ ಚಿತ್ರಗಳು ಒಂದೇ ದಿನ ಬಿಡುಗಡೆಯಾದ್ದರಿಂದ ಪೈಪೋಟಿಯ ನಡುವೆಯೂ ಒಳ್ಳೆಯ ಕಲೆಕ್ಷನ್ ಮಾಡಿದವು.
ಇನ್ನು ಈ ಎರಡು ಚಿತ್ರಗಳ ಪೈಕಿ ವಿಜಯ್ ನಟನೆಯ ವಾರಿಸು ಚಿತ್ರ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದರೆ, ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ತಮಿಳು ನಾಡು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ವಾರಿಸುಗಿಂತ ಅಧಿಕ ಗಳಿಸಿ ಓಪನಿಂಗ್ ಪಡೆದುಕೊಂಡಿತ್ತು. ಈ ಮೂಲಕ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ವಾರಿಸು ಹೆಚ್ಚು ಗಳಿಸಿದರೆ, ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ತುನಿವು ಮುನ್ನಡೆ ಸಾಧಿಸಿತು.
ಆದರೆ ನಂತರದ ದಿನಗಳಲ್ಲಿ ವಾರಿಸು ಚಿತ್ರ ವಿಶ್ವ ಬಾಕ್ಸ್ ಆಫೀಸ್ ಹಾಗೂ ತಮಿಳು ನಾಡು ಬಾಕ್ಸ್ ಆಫೀಸ್ ಎರಡರಲ್ಲಿಯೂ ಹೆಚ್ಚು ಕಲೆಕ್ಷನ್ ಮಾಡಿ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರವನ್ನು ಹಿಂದಿಕ್ಕಿ ಈ ಬಾರಿಯ ಸಂಕ್ರಾಂತಿಯ ವಿನ್ನರ್ ಎನಿಸಿಕೊಂಡಿದೆ. ಇನ್ನು ವಾರಿಸು ಚಿತ್ರತಂಡ ಚಿತ್ರ ಮೊದಲ ಏಳು ದಿನಗಳಲ್ಲಿ 200 ಕೋಟಿ ಗಳಿಕೆ ಮಾಡಿತು ಎಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಘೋಷಿಸಿದೆ. ಇದೇ ವೇಳೆಗೆ ಚಿತ್ರ ತಮಿಳುನಾಡು ರಾಜ್ಯದಲ್ಲಿ ಮೊದಲ ಏಳು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಬಹಿರಂಗಪಡಿಸಿದ್ದು, ತುನಿವು ಚಿತ್ರದ ವರದಿಯನ್ನೂ ಸಹ ನೀಡಿದ್ದಾರೆ. ಹಾಗಿದ್ದರೆ ಈ ಎರಡೂ ಚಿತ್ರಗಳು ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಮೊದಲ ಏಳು ದಿನಗಳಲ್ಲಿ ಅತಿಹೆಚ್ಚು ಗಳಿಸಿದ ತಮಿಳು ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಏಳನೇ ಸ್ಥಾನ ಗಿಟ್ಟಿಸಿಕೊಂಡ ವಾರಿಸು, ತುನಿವುಗೆ ಒಂಬತ್ತನೇ ಸ್ಥಾನ
ಇನ್ನು ತಮಿಳುನಾಡಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ 95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಮೂಲಕ ವಾರಿಸು ಏಳನೇ ಸ್ಥಾನ ಪಡೆದುಕೊಂಡಿದ್ದರೆ, 87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ತುನಿವು ಚಿತ್ರ ಒಂಬತ್ತನೇ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಮೂಲಕ ವಾರಿಸು ಚಿತ್ರ ಮೊದಲ ಏಳು ದಿನಗಳ ಗಳಿಕೆಯಲ್ಲಿ ಆರು ಚಿತ್ರಗಳನ್ನು ಹಿಂದಿಕ್ಕುವಲ್ಲಿ ಸೋತಿದ್ದರೆ, ತುನಿವು ಚಿತ್ರ ವಾರಿಸು ಸೇರಿದಂತೆ ಎಂಟು ಚಿತ್ರಗಳನ್ನು ಹಿಂದಿಕ್ಕುವಲ್ಲಿ ಸೋತಿದೆ.

ತಮಿಳುನಾಡಿನಲ್ಲಿ ಮೊದಲ 7 ದಿನ ಹೆಚ್ಚು ಗಳಿಸಿದ ಚಿತ್ರಗಳು
ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಬಿಡುಗಡೆಗೊಳಿಸಿರುವ ತಮಿಳುನಾಡಿನಲ್ಲಿ ಮೊದಲ ಏಳು ದಿನಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಚಿತ್ರಗಳ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..
1. ಪೊನ್ನಿಯಿನ್ ಸೆಲ್ವನ್ - 125.4 ಕೋಟಿ ರೂಪಾಯಿಗಳು
2. ಸರ್ಕಾರ್ - 102 ಕೋಟಿ ರೂಪಾಯಿಗಳು
3. ಬಿಗಿಲ್ -101.1 ಕೋಟಿ ರೂಪಾಯಿಗಳು
4. ಬೀಸ್ಟ್ - 99.25 ಕೋಟಿ ರೂಪಾಯಿಗಳು
5. ವಿಕ್ರಮ್ - 98 ಕೋಟಿ ರೂಪಾಯಿಗಳು
6. ಮಾಸ್ಟರ್ - 96.2 ಕೋಟಿ ರೂಪಾಯಿಗಳು
7. ವಾರಿಸು - 95 ಕೋಟಿ ರೂಪಾಯಿಗಳು
8. ಮೆರ್ಸಲ್ - 89 ಕೋಟಿ ರೂಪಾಯಿಗಳು
9. ತುನಿವು - 87 ಕೋಟಿ ರೂಪಾಯಿಗಳು
10. ವಾಲಿಮೈ - 75.1 ಕೋಟಿ ರೂಪಾಯಿಗಳು

ಮೊದಲ ಏಳು ದಿನಗಳಲ್ಲಿ ಕರ್ನಾಟಕದ ಕಲೆಕ್ಷನ್
ವಿಜಯ್ ಹಾಗೂ ರಶ್ಮಿಕಾ ನಟನೆಯ ವಾರಿಸು ಚಿತ್ರ ಏಳು ದಿನಗಳಲ್ಲಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 11.85 ಕೋಟಿ ಗಳಿಕೆ ಮಾಡಿದೆ. ಅತ್ತ ಅಜಿತ್ ಕುಮಾರ್ ಹಾಗೂ ಮಂಜು ವಾರಿಯರ್ ನಟನೆಯ ತುನಿವು ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಏಳು ದಿನಗಳಲ್ಲಿ 10.82 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ರಾಜ್ಯ ಬಾಕ್ಸ್ ಆಫೀಸ್‌ನ ಮೊದಲ ಏಳು ದಿನಗಳ ಜಿದ್ದಾಜಿದ್ದಿಯಲ್ಲಿ ತುನಿವು ಚಿತ್ರವನ್ನು ವಿಜಯ್ ವಾರಿಸು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ.