Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫಸ್ಟ್ ಡೇ ಕರ್ನಾಟಕದಲ್ಲಿ 5 ಕೋಟಿ ಗಳಿಸಿದ್ದ ವಾರಿಸು 2ನೇ, 3ನೇ ದಿನ ಕೋಟಿನೂ ದಾಟಲಿಲ್ಲ! ತುನಿವು ಕಥೆ ಏನು?
ಸಂಕ್ರಾಂತಿ ಹಬ್ಬದ ಪ್ರಯುಕ್ತ ರೇಸ್‌ಗೆ ಇಳಿದ ತೆಲುಗು ಹಾಗೂ ತಮಿಳು ಚಿತ್ರಗಳ ಪೈಕಿ ಮೊದಲಿಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟದ್ದು ತಮಿಳಿನ ಸ್ಟಾರ್ ನಟರಾದ ವಿಜಯ್ ಹಾಗೂ ಅಜಿತ್ ಕುಮಾರ್ ಸಿನಿಮಾಗಳು. ಬುಧವಾರವೇ ( ಜನವರಿ 11 ) ಬಿಡುಗಡೆಗೊಂಡ ಈ ಎರಡು ಚಿತ್ರಗಳೂ ಸಹ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡವು. ವಾರಿಸು ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾವಾದರೆ, ಅಜಿತ್ ನಟನೆಯ ತುನಿವು ಬ್ಯಾಂಕ್ ಹೈಸ್ಟ್ ಚಿತ್ರವಾಗಿದೆ.
ಇನ್ನು ಒಂಬತ್ತು ವರ್ಷಗಳ ಬಳಿಕ ವಿಜಯ್ ಹಾಗೂ ಅಜಿತ್ ಕುಮಾರ್ ನಟನೆಯ ಚಿತ್ರಗಳು ಸಂಕ್ರಾಂತಿ ಪ್ರಯುಕ್ತ ಮುಖಾಮುಖಿಗೊಂಡಿದ್ದರಿಂದ ಎರಡೂ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಪೈಪೋಟಿ ಜೋರಾಗಿತ್ತು. ಮಧ್ಯರಾತ್ರಿಯಿಂದಲೇ ಹಲವೆಡೆ ಪ್ರದರ್ಶನಗಳು ಆರಂಭಗೊಂಡವು. ಸದ್ಯ ಚಿತ್ರಗಳು ಮೂರು ದಿನಗಳ ಪ್ರದರ್ಶನವನ್ನು ಪೂರೈಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಎರಡು ಹಾಗೂ ಮೂರನೇ ದಿನಗಳಲ್ಲಿ ಹೇಳಿಕೊಳ್ಳುವಂತ ದೊಡ್ಡ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿವೆ.
ವಾರಿಸು ಚಿತ್ರ ವಿಶ್ವದಾದ್ಯಂತ ಹೆಚ್ಚು ಕಲೆಕ್ಷನ್ ಮಾಡಿದರೆ, ತುನಿವು ಚಿತ್ರ ತಮಿಳುನಾಡಿನಲ್ಲಿ ವಾರಿಸುಗಿಂತ ಹೆಚ್ಚು ಗಳಿಕೆ ಕಂಡಿದೆ. ಇನ್ನು ಈ ಇಬ್ಬರೂ ನಟರಿಗೂ ಕನ್ನಡದಲ್ಲಿಯೂ ಅಭಿಮಾನಿ ಬಳಗ ಇರುವುದರಿಂದ ಚಿತ್ರಗಳು ದೊಡ್ಡ ಮಟ್ಟದಲ್ಲಿಯೇ ಕರ್ನಾಟಕದಲ್ಲಿ ಬಿಡುಗಡೆಗೊಂಡಿದ್ದವು. ಹೆಚ್ಚೆಚ್ಚು ಶೋಗಳನ್ನು ಪಡೆದುಕೊಂಡಿದ್ದ ಎರಡೂ ಚಿತ್ರಗಳು ಮೊದಲ ದಿನ ಕೋಟಿ ಕೋಟಿ ಬಾಚಿದ್ದವು.

ಎರಡು, ಮೂರನೇ ದಿನ ಕುಸಿದ ಕಲೆಕ್ಷನ್!
ಇನ್ನು ಕರ್ನಾಟಕದಲ್ಲಿ ಬಿಡುಗಡೆಯ ದಿನದಂದು ವಿಜಯ್ ನಟನೆಯ ವಾರಿಸು ಚಿತ್ರ 5.65 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಅತ್ತ ಅಜಿತ್ ನಟನೆಯ ತುನಿವು ಚಿತ್ರ ಮೊದಲ ದಿನ 4.77 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಈ ಮೂಲಕ ಮೊದಲ ದಿನ ಕರ್ನಾಟಕದಲ್ಲಿ ತುನಿವು ಚಿತ್ರಕ್ಕಿಂತ ವಾರಿಸು ಚಿತ್ರ ಹೆಚ್ಚು ಕಲೆಕ್ಷನ್ ಮಾಡಿ ಅಬ್ಬರಿಸಿತ್ತು. ಹೀಗೆ ಮೊದಲ ದಿನದಲ್ಲಿ ಕೋಟಿ ಕೋಟಿ ಬಾಚಿದ್ದ ಎರಡೂ ಚಿತ್ರಗಳೂ ಮೂರು ಹಾಗೂ ನಾಲ್ಕನೇ ದಿನ ಕೋಟಿಯನ್ನೂ ದಾಟಲಾಗದೇ ಪರದಾಡಿವೆ.

ಎರಡು ಹಾಗೂ ಮೂರನೇ ದಿನದ ಕಲೆಕ್ಷನ್ ಎಷ್ಟು?
ಇನ್ನು ವಿಜಯ್ ನಟನೆಯ ವಾರಿಸು ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ದಿನ 91 ಲಕ್ಷ ರೂಪಾಯಿ ಗ್ರಾಸ್ ಗಳಿಸಿದೆ ಹಾಗೂ ಮೂರನೇ ದಿನ 88 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಅತ್ತ ಅಜಿತ್ ನಟನೆಯ ತುನಿವು ಚಿತ್ರ ಎರಡನೇ ದಿನ 1.19 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಹಾಗೂ ಮೂರನೇ ದಿನ 81 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹೀಗೆ ಮೊದಲ ದಿನ ದೊಡ್ಡ ಕಲೆಕ್ಷನ್ ಮಾಡಿದ್ದ ಚಿತ್ರಗಳು ಎರಡು ಹಾಗೂ ಮೂರನೇ ದಿನ ಮಂಕಾಗಿವೆ.

ಮೂರು ದಿನಗಳ ಒಟ್ಟಾರೆ ಕಲೆಕ್ಷನ್‌ನಲ್ಲಿ ಹೆಚ್ಚು ಗಳಿಸಿದ ಚಿತ್ರ ಯಾವುದು?
ಮೂರು ದಿನಗಳ ಪ್ರದರ್ಶನದ ಬಳಿಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ವಿಜಯ್ ನಟನೆಯ ವಾರಿಸು ಚಿತ್ರ ಒಟ್ಟು 7.4 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದರೆ, ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ 6.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಮೂರು ದಿನಗಳ ಪ್ರದರ್ಶನದ ಬಳಿಕ ಕರ್ನಾಟಕ ಬಾಕ್ಸ್ ಆಫೀಸ್ ಕದನದಲ್ಲಿ ತುನಿವು ಎದುರು ವಾರಿಸು ಮುನ್ನಡೆ ಕಾಯ್ದುಕೊಂಡಿದೆ.

ತೆಲುಗು ಚಿತ್ರಗಳ ಹೊಡೆತ
ಇನ್ನು ವಾರಿಸು ಹಾಗೂ ತುನಿವು ಚಿತ್ರಗಳ ಎರಡನೇ ದಿನದ ಕಲೆಕ್ಷನ್ ಕರ್ನಾಟಕದಲ್ಲಿ ತಗ್ಗಲು ಕಾರಣ ಅದೇ ದಿನ ತೆಲುಗಿನ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರ ಬಿಡುಗಡೆಯಾಗಿದ್ದು ಹಾಗೂ ಮೂರನೇ ದಿನ ಕಲೆಕ್ಷನ್ ತಗ್ಗಲು ಕಾರಣ ಮೆಗಾಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರ ಬಿಡುಗಡೆಯಾದದ್ದು ಎನ್ನಬಹುದು. ಏಕೆಂದರೆ ಹೊಸದಾಗಿ ಬಿಡುಗಡೆಯಾದ ಈ ಚಿತ್ರಗಳಿಗೆ ಹೆಚ್ಚು ಪ್ರದರ್ಶನಗಳು ಆಯೊಜನೆಯಾಗಿದ್ದವು ಹಾಗೂ ಸಿನಿ ರಸಿಕರೂ ಸಹ ಈ ಚಿತ್ರಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತರಾಗಿದ್ದರು. ಆದರೆ ಇಂದು ( ಜನವರಿ 14 ) ಹಾಗೂ ನಾಳೆ ವಾರಾಂತ್ಯದ ರಜೆಗಳು ಇರುವ ಕಾರಣ ಕುಸಿದಿದ್ದ ಕಲೆಕ್ಷನ್‌ನಲ್ಲಿ ತುಸು ಏಳಿಗೆ ಕಾಣುವ ಸಾಧ್ಯತೆಗಳಿವೆ.