For Quick Alerts
  ALLOW NOTIFICATIONS  
  For Daily Alerts

  ವಾರಿಸು vs ತುನಿವು: 5 ದಿನಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದದ್ದಾರು, ಹಿನ್ನಡೆ ಯಾರಿಗೆ?

  |

  ಬಿಡುಗಡೆಗೂ ಮುನ್ನ ಹೆಚ್ಚು ಥಿಯೇಟರ್‌ಗಳನ್ನು ಪಡೆದುಕೊಳ್ಳಲು ಜಿದ್ದಾಜಿದ್ದಿಗೆ ಬಿದ್ದಿದ್ದ ಸ್ಟಾರ್ ನಟರ ಚಿತ್ರಗಳ ನಡುವೆ ಇದೀಗ ಹೆಚ್ಚು ಕಲೆಕ್ಷನ್ ಮಾಡುವ ರೇಸ್ ಏರ್ಪಟ್ಟಿದೆ. ಹೌದು, ಈ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ವಾರ್ ದೊಡ್ಡ ಮಟ್ಟದಲ್ಲಿಯೇ ಇದೆ. ಅದರಲ್ಲಿಯೂ ತಮಿಳು ನಟ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ನಟನೆಯ ತುನಿವು ಚಿತ್ರಗಳ ನಡುವಿನ ಬಾಕ್ಸ ಆಫೀಸ್‌ ರೇಸ್ ಮತ್ತೊಂದು ಹಂತ ತಲುಪಿದೆ.

  ಕಾಲಿವುಡ್‌ನಲ್ಲಿ ಪರಸ್ಪರ ಅತಿಹೆಚ್ಚು ಫ್ಯಾನ್ ವಾರ್ ಮಾಡುವ ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಯಾವ ನಟನ ಚಿತ್ರ ಹೆಚ್ಚು ಗಳಿಸಿ ಸಂಕ್ರಾಂತಿ ವಿನ್ನರ್ ಎನಿಸಿಕೊಳ್ಳಲಿದೆ ಎಂಬ ಕುತೂಹಲ ಸಿನಿ ರಸಿಕರಲ್ಲಿ ಮೂಡಿದೆ. ಎರಡೂ ಚಿತ್ರಗಳೂ ಸಹ ಒಂದೇ ದಿನ ಬಿಡುಗಡೆಯಾದ ಕಾರಣ ದಿನದಿಂದ ದಿನಕ್ಕೆ ಯಾವ ಚಿತ್ರ ಕಲೆಕ್ಷನ್ ಮಾಡಿತು ಹಾಗೂ ಒಟ್ಟಾರೆ ಎಷ್ಟು ಗಳಿಸಿ ಯಾವ ಚಿತ್ರ ಮುನ್ನಡೆಯನ್ನು ಕಾಯ್ದುಕೊಂಡಿದೆ ಎಂಬ ಕುತೂಹಲ ಇಬ್ಬರ ಅಭಿಮಾನಿಗಳಲ್ಲಿ ಏರ್ಪಟ್ಟಿದೆ.

  ಇನ್ನು ಬಿಡುಗಡೆಯಾದ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ವಿಜಯ್ ನಟನೆಯ ವಾರಿಸು ಚಿತ್ರ ಹೆಚ್ಚು ಗಳಿಸಿದರೆ, ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಅಜಿತ್ ಕುಮಾರ್ ನಟನೆಯ ತುನಿವು ಹೆಚ್ಚು ಗಳಿಕೆ ಮಾಡಿತ್ತು. ಹೀಗೆ ಸಂಕ್ರಾಂತಿ ಹಬ್ಬದಂದು ಏಳನೇ ಬಾರಿಗೆ ಮುಖಾಮುಖಿಯಾಗಿರುವ ವಿಜಯ್ ಹಾಗೂ ಅಜಿತ್ ನಟನೆಯ ಚಿತ್ರಗಳು ಭಾನುವಾರಕ್ಕೆ ( ಜನವರಿ 15 ) ಐದು ದಿನಗಳನ್ನು ಪೂರೈಸಿದ್ದು, ಈ ಐದು ದಿನಗಳಲ್ಲಿ ಯಾವ ಚಿತ್ರ ಎಷ್ಟು ಗಳಿಸಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

  ಐದನೇ ದಿನವೂ ವಾರಿಸು ಮುನ್ನಡೆ

  ಐದನೇ ದಿನವೂ ವಾರಿಸು ಮುನ್ನಡೆ

  ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ತುನಿವು ವಿರುದ್ಧ ಮುನ್ನಡೆ ಸಾಧಿಸಿದ್ದ ವಾರಿಸು ಚಿತ್ರ ಐದನೇ ದಿನವೂ ಮುನ್ನಡೆ ಸಾಧಿಸಿದೆ. ವಾರಿಸು ಚಿತ್ರ ಐದನೇ ದಿನ ವಿಶ್ವದಾದ್ಯಂತ 25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಅತ್ತ ಅಜಿತ್ ನಟನೆಯ ತುನಿವು ಚಿತ್ರ ಐದನೇ ದಿನ ವಿಶ್ವದಾದ್ಯಂತ 22 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

  ಐದು ದಿನಗಳ ಒಟ್ಟಾರೆ ಕಲೆಕ್ಷನ್

  ಐದು ದಿನಗಳ ಒಟ್ಟಾರೆ ಕಲೆಕ್ಷನ್

  ಹೀಗೆ ಐದನೇ ದಿನ ಮುನ್ನಡೆ ಸಾಧಿಸಿರುವ ವಾರಿಸು ಚಿತ್ರ ಒಟ್ಟಾರೆ ಐದು ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿಯೂ ಮುನ್ನಡೆ ಸಾಧಿಸಿದೆ. ವಿಜಯ್ ನಟನೆಯ ವಾರಿಸು ಚಿತ್ರ ಐದು ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು 125 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದರೆ, ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ಮೊದಲ ಐದು ದಿನಗಳಲ್ಲಿ 97 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

  ವಾರಿಸು ಸಂಕ್ರಾಂತಿ ವಿನ್ನರ್!

  ವಾರಿಸು ಸಂಕ್ರಾಂತಿ ವಿನ್ನರ್!

  ಇನ್ನು ಮೊದಲ ದಿನ ವಾರಿಸು ಎದುರಿಗೆ ದೊಡ್ಡ ಮಟ್ಟದ ಪೈಪೋಟಿ ನೀಡಿದ್ದ ತುನಿವು ಚಿತ್ರ ನಂತರದ ದಿನಗಳ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ. ಸದ್ಯ ಐದು ದಿನಗಳ ಬಳಿಕ ವಾರಿಸು ಚಿತ್ರದ ಕಲೆಕ್ಷನ್‌ಗಿಂತ ತುನಿವು ಚಿತ್ರದ ಕಲೆಕ್ಷನ್ 25ಕ್ಕೂ ಹೆಚ್ಚು ಕೋಟಿ ರೂಪಾಯಿ ಕಡಿಮೆ ಇದೆ. ಈ ಮೂಲಕ ಈ ಬಾರಿಯ ಸಂಕ್ರಾಂತಿ ರೇಸ್‌ನಲ್ಲಿ ವಿಜಯ್ ಎದುರು ಅಜಿತ್ ಸೋಲು ಕಾಣಲಿದ್ದಾರೆ ಎಂದೇ ಹೇಳಬಹುದು.

  English summary
  Varisu vs Thunivu 5 days box office collection report: Varisu beats Thunivu with huge margin. Take a look
  Monday, January 16, 2023, 12:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X