For Quick Alerts
  ALLOW NOTIFICATIONS  
  For Daily Alerts

  ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ವಿಜಯ್‌, ಬಾಲಿವುಡ್ ಯುವನಟನ ಅಭಿಮಾನಿ

  |

  ಭಾರತೀಯ ಸಿನಿಮಾರಂಗದ ಈಗಿನ ಅತಿ ದೊಡ್ಡ ಸ್ಟಾರ್ ದಳಪತಿ ವಿಜಯ್. ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಿಗಿಂತಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ, ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತೆ ವಿಜಯ್ ಸಿನಿಮಾಗಳು ಬಾಕ್ಸ್ಆಫೀಸ್ ದೋಚುತ್ತವೆ.

  ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಜಯ್‌, ಬಾಲಿವುಡ್‌ನ ಯುವನಟರೊಬ್ಬರ ಅಭಿಮಾನಿ. ಈ ವಿಷಯವನ್ನು ವಿಜಯ್‌ ಜೊತೆಗೆ ನಟಿಸಿದ್ದ ಮಾಳವಿಕ ಮೋಹನನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  'ಮಾಸ್ಟರ್' ಸಿನಿಮಾದಲ್ಲಿ ವಿಜಯ್‌ ಎದುರು ನಾಯಕಿಯಾಗಿ ನಟಿಸಿರುವ ಮಾಳವಿಕ ಮೋಹನನ್ ಇತ್ತೀಚೆಗೆ 'ಪಿಂಕ್‌ವಿಲಾ' ಜೊತೆಗೆ ಮಾತನಾಡುತ್ತಾ ವಿಜಯ್‌ ಅವರೊಟ್ಟಿಗಿನ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

  ಈ ಸಮಯ ಮಾತನಾಡಿರುವ ಅವರು, ''ಮಾಸ್ಟರ್' ಚಿತ್ರೀಕರಣದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಬಾಲಿವುಡ್ ನಟ ಟೈಗರ್ ಶ್ರಾಫ್‌ರ ಹೊಸ ಸಿನಿಮಾ ನೋಡಲೆಂದು ಚಿತ್ರಮಂದಿರಕ್ಕೆ ಹೋಗಿದ್ದೆವು. ಆಗ ಟೈಗರ್ ಶ್ರಾಫ್ ಎಂಟ್ರಿ ಸೀನ್ ನೋಡಿ ವಿಜಯ್ ಬಹಳ ಖುಷಿಯಿಂದ ಚಪ್ಪಾಳೆ ತಟ್ಟಿದರು. ಅಷ್ಟೇ ಅಲ್ಲ 'ತಲೈವಾ' ಎಂದು ಕೂಗು ಹಾಕಿದರು'' ಎಂದಿದ್ದಾರೆ.

  ಅಷ್ಟೇ ಅಲ್ಲ, ಸಿನಿಮಾ ನೋಡಿದ ಬಳಿಕ ಸಿನಿಮಾದ ಬಗ್ಗೆ ಚರ್ಚೆ ಮಾಡುವಾಗ ''ಟೈಗರ್ ಶ್ರಾಫ್ ನನಗೆ ಇಷ್ಟ'' ಎಂದು ಮಾಳವಿಕ ಮೋಹನನ್ ಬಳಿ ಹೇಳಿದರಂತೆ ವಿಜಯ್.

  ಟೈಗರ್ ಶ್ರಾಫ್ ತಮ್ಮ ಅತ್ಯುತ್ತಮ ಡಾನ್ಸ್ ಹಾಗೂ ಸ್ಟಂಟ್‌ಗಳಿಂದಾಗಿ ಹಲವು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಾಲಿವುಡ್‌ನ ಭರವಸೆಯ ಯುವನಟ ಎಂಬ ಖ್ಯಾತಿಯನ್ನು ಟೈಗರ್ ಗಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ನಟ ಅಲ್ಲು ಅರ್ಜುನ್ ಸಹ ತಮ್ಮ ಮಕ್ಕಳಿಗೆ ಟೈಗರ್ ಶ್ರಾಫ್ ಎಂದರೆ ಇಷ್ಟವೆಂದು ಹೇಳಿದ್ದರು.

  ವಿಶ್ವ ಯೋಗ ದಿನದಂದು Pooja Hegde ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.. | Filmibeat Kannada

  ಟೈಗರ್ ಶ್ರಾಫ್ ತಂದೆ ಜಾಕಿ ಶ್ರಾಫ್ ವಿಜಯ್‌ ಜೊತೆ 2019 ರ ಸೂಪರ್ ಹಿಟ್ ಸಿನಿಮಾ 'ಬಿಗಿಲ್'ನಲ್ಲಿ ನಟಿಸಿದ್ದಾರೆ. ಆ ಸಮಯದಲ್ಲಿ ವಿಜಯ್ ವ್ಯಕ್ತಿತ್ವವನ್ನು ಜಾಕಿ ಶ್ರಾಫ್ ಬಹುವಾಗಿ ಹೊಗಳಿದ್ದರು.

  English summary
  Tamil actor Vijay likes Bollywood young actor Tiger Shroff. Vijay's co-actor Malavika Mohanan said this in a interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X