For Quick Alerts
  ALLOW NOTIFICATIONS  
  For Daily Alerts

  ಮುರಳೀಧರನ್ ಬಯೋಪಿಕ್ ನಿಂದ ಹೊರಬಂದ ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ

  |

  ತಮಿಳು ನಟ ವಿಜಯ್ ಸೇತುಪತಿ, ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಿಂದ ಹೊರಬಂದ ಬೆನ್ನಲ್ಲೇ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ವಿಜಯ್ ಸೇತುಪತಿ 800 ಸಿನಿಮಾದಿಂದ ಹೊರಬರುವುದಾಗಿ ಮಾಡಿದ್ದ ಟ್ವೀಟ್ ಗೆ ಕಿರಾತಕನೊಬ್ಬ ಮಗಳ ಮೇಲೆ ಅತ್ಯಾಚಾರವೆಸಗುವುದಾಗಿ ಅಸಹ್ಯಕರ ಕಾಮೆಂಟ್ ಹಾಕಿದ್ದಾನೆ.

  ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ವಿಜಯ್ ಸೇತುಪತಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆತನ ಟ್ವಿಟ್ಟರ್ ಹ್ಯಾಂಡಲ್ ಗೆ ರಿಪೋರ್ಟ್ ಮಾಡಿ ತಕ್ಷಣ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ ಕಾಮುಕನನ್ನು ಬಂಧಸುವಂತೆ ಅಭಿಯಾನ ಮಾಡುತ್ತಿದ್ದಾರೆ. ಮುಂದೆ ಓದಿ...

  ಮುರಳೀಧರನ್ ಬಯೋಪಿಕ್‌ಗೆ ಗುಡ್ ಬೈ ಹೇಳಿದ ವಿಜಯ್ ಸೇತುಪತಿ

  ರಿತಿಕ್ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಿಂದ ಬೆದರಿಕೆ

  ರಿತಿಕ್ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಿಂದ ಬೆದರಿಕೆ

  ಅತ್ಯಾಚಾರ ಬೆದಕರಿಕೆ ಹಾಕಿದ ವ್ಯಕ್ತಿಯ ಟ್ವಿಟ್ಟರ್ ಖಾತೆ ರಿತಿಕ್ ಎನ್ನುವ ಹೆಸರಿನಲ್ಲಿದೆ. ಈ ಟ್ವಿಟ್ಟರ್ ಹ್ಯಾಂಡಲ್ ನಿಂದ ವಿಜಯ್ ಮತ್ತು ಪುಟ್ಟ ಮಗಳ ಫೋಟೋವನ್ನು ಶೇರ್ ಮಾಡಿ ಅತ್ಯಾಚಾರ ನಡೆಸಬೇಕು, ಅವಳ ತಂದೆಗೆ ತಮಿಳರು ಶ್ರೀಲಂಕಾದಲ್ಲಿ ನಡೆಸಿದ ಜೀವನ ಅರ್ಥವಾಗಬೇಕು' ಎಂದು ಟ್ವೀಟ್ ಮಾಡಿದ್ದಾನೆ.

  ಬಂಧನಕ್ಕೆ ಒತ್ತಾಯ

  ಬಂಧನಕ್ಕೆ ಒತ್ತಾಯ

  ಈ ಟ್ವಿಟ್ಟರ್ ಹ್ಯಾಂಡಲ್ ಹಿಂದೆ ಇರುವ ವ್ಯಕ್ತಿಯನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಒತ್ತಾಯ ಮಾಡುತ್ತಿದ್ದಾರೆ. ಡಿಎಂಕೆ ಸಂಸದ ಎಸ್ ಸೆಂಥಿಲ್ ಕುಮಾರ್ ಟ್ವೀಟ್ ಮಾಡಿ ಅವರು ಮನುಷ್ಯರೇ? ಎಂದು ಪ್ರಶ್ನೆ ಮಾಡಿದ್ದಾರೆ ಅಲ್ಲದೆ,' ದಯವಿಟ್ಟು ಆ ವ್ಯಕ್ತಿಯನ್ನು ಪತ್ತೆಹಚ್ಚಿ ಅವನನ್ನು ಬಂಧಿಸಬೇಕು' ಎಂದು ಟ್ವೀಟ್ ಮಾಡಿ, ತಮಿಳುನಾಡು ಮುಖ್ಯಮಂತ್ರಿ ಮತ್ತು ಚೆನ್ನೈ ಪೊಲೀಸರ ಪೊಲೀಸರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಗೆ ಟ್ಯಾಗ್ ಮಾಡಿದ್ದಾರೆ.

  ಧೋನಿ ಪುತ್ರಿಗೆ ಅತ್ಯಾಚಾರ ಬೆದರಿಕೆ: ಪ್ರತಿಕ್ರಿಯೆ ನೀಡಿದ ನಟ ಮಾಧವನ್

  ವಿರೋಧದ ಬಳಿಕ ಸಿನಿಮಾದಿಂದ ಹೊರಬಂದ ಸೇತುಪತಿ

  ವಿರೋಧದ ಬಳಿಕ ಸಿನಿಮಾದಿಂದ ಹೊರಬಂದ ಸೇತುಪತಿ

  ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಮೋಷನ್ ಪೋಸ್ಟರ್ ರಿಲೀಸ್ ಆದ ಬಳಿಕ ಚಿತ್ರಕ್ಕೆ ತಮಿಳರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಶ್ರೀಲಂಕಾದ ಕ್ರಿಕೆಟಿಗನ ಸಿನಿಮಾವನ್ನು ತಮಿಳಿನಲ್ಲಿ ನಿರ್ಮಾಣ ಮಾಡುತ್ತಿರುವುದು ಮತ್ತು ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದು ತಮಿಳರ ಕೆಂಗಣ್ಣಿಗೆ ಗುರಿಯಾಗಿದ್ದರು. ಭಾರಿ ವಿರೋಧದ ಬಳಿಕ ಸಿನಿಮಾದಿಂದ ಹೊರಬಂದಿರುವುದಾಗಿ ವಿಜಯ್ ಸೇತುಪತಿ ಅನೌನ್ಸ್ ಮಾಡಿದ್ದಾರೆ.

  ಎ.ಎಸ್ ಧೋನಿ ಪುತ್ರಿಗೂ ಬಂದಿತ್ತು ಬೆದರಿಕೆ

  ಎ.ಎಸ್ ಧೋನಿ ಪುತ್ರಿಗೂ ಬಂದಿತ್ತು ಬೆದರಿಕೆ

  ಇತ್ತೀಚಿಗೆ ಕ್ರಿಕೆಟಿಗ ಎಂ ಎಸ್ ಧೋನಿ ಅವರ 5 ವರ್ಷದ ಪುತ್ರಗೆ ಅತ್ಯಾಚಾರ ಬೆದರಿಕೆ ಹಾಕಿದ್ದ. 2020 ಐಪಿಎಲ್ ನಲ್ಲಿ ಕಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ ಸೋತ ಬಳಿಕ 16 ವರ್ಷದ ಬಾಲಕ ಧೋನಿ ಮಗಳಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ. ಈ ಸಂಬಂಧ ಧೋನಿ ಪತ್ನಿ ಸಾಕ್ಷಿ ರಾಂಚಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೆದರಿಕೆ ಹಾಕಿರುವ ಬಾಲಕ 12ನೇ ತರಗತಿ ಓದುತ್ತಿರುವ ಕಛ್ ಸಮೀಪದ ಮುಂದ್ರಾ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

  English summary
  Tamil Actor Vijay Sethupathi's Dauther gets Rapte Threats after walks out from Muttiah Muralitharan biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X