For Quick Alerts
  ALLOW NOTIFICATIONS  
  For Daily Alerts

  ಮುತ್ತಯ್ಯ ಮುರಳೀಧರನ್ ಬಯೋಪಿಕ್: '800' ಮೋಷನ್ ಪೋಸ್ಟರ್ ಗೆ ಅಭಿಮಾನಿಗಳು ಫಿದಾ

  |

  ಶ್ರೀಲಂಕಾದ ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಬಯೋಪಿಕ್ ಸಿದ್ಧವಾಗುತ್ತಿರುವ ವಿಚಾರ ಕೇಳಿದ್ದೀರಿ. ಕಳೆದೊಂದು ವರ್ಷದಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಶ್ರೀಲಂಕಾದ ಖ್ಯಾತ ಆಟಗಾರನ ಜೀವನಚರಿತ್ರೆ ಭಾರತದಲ್ಲಿ ಸಿದ್ಧವಾಗುತ್ತಿರುವುದು ವಿಶೇಷ. ಇದೀಗ ಬಹುನಿರೀಕ್ಷೆಯ ಬಯೋಪಿಕ್ ನ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

  1 ನಿಮಿಷದ 16 ಸೆಕೆಂಡ್ ನ ಈ ಮೋಷನ್ ಪೋಸ್ಟರ್ ಚಿತ್ರಪ್ರಿಯರ ನಿದ್ದೆಗೆಡಿಸಿದೆ. ಮುತ್ತಯ್ಯ ಮುರಳೀಧರನ್ ಕ್ರಿಕೆಟ್ ಬದುಕಿನ ಜೊತೆಗೆ ಶ್ರೀಲಂಕಾದ ಕೆಲವು ವಿದ್ಯಮಾನಗಳ ಬಗ್ಗೆಯೂ ಈ ಬಯೋಪಿಕ್ ನಲ್ಲಿ ಅನಾವರಣ ಮಾಡಲಾಗಿದೆ. ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿರುವ ಪುಟ್ಟ ಬಾಲಕ ಗಲ್ಲಿ ಕ್ರಿಕೆಟ್ ನಲ್ಲಿ ಮಿಂಚುತ್ತಾ ಸಂಘರ್ಷಗಳ ನಡುವೆಯೂ ಎಲ್ಲವನ್ನು ಮೀರಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಪಟುವಾಗಿ ಹೊರಹೊಮ್ಮಿರುವ ಸಾಹಸದ ಕಥೆಯನ್ನು ಈ ಮೋಷನ್ ಪೋಸ್ಟರ್ ನಲ್ಲಿ ತೋರಿಸಲಾಗಿದೆ.

  ವಿಜಯ್ ಸೇತುಪತಿ ಕೈಗೆ ಮತ್ತೊಂದು ಹಿಂದಿ ಸಿನಿಮಾ: ತಮಿಳಿನದ್ದೇ ರೀಮೇಕ್!

  ವಿಶೇಷ ಅಂದರೆ ಮುತ್ತಯ್ಯ ಮುರಳೀಧನ್ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಬಣ್ಣಹಚ್ಚಿದ್ದಾರೆ. ಥೇಟ್ ಮುತ್ತಯ್ಯ ಮುರಳೀಧರನ್ ಹಾಗೆ ಕಾಣುವ ವಿಜಯ್ ಸೇತುಪತಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಮೊದಲು ವಿಜಯ್ ಸೇತುಪತಿ ನಟನೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆದರೀಗ ಮೋಷನ್ ಪೋಸ್ಟರ್ ನೋಡಿ ವಾವ್ ಎನ್ನುತ್ತಿದ್ದಾರೆ.

  ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಮುತ್ತಯ್ಯ ಅವರಿಗಿದೆ. ಹಾಗಾಗಿ ಚಿತ್ರಕ್ಕೆ 800 ಎಂದು ಟೈಟಲ್ ಇಡಲಾಗಿದೆ. ಸಿನಿಮಾದಲ್ಲಿ ಮುತ್ತಯ್ಯ ಜೀವನದ ಜೊತೆಗೆ ಸಿವಿಲ್ ವಾರ್ ಬಗ್ಗೆಯೂ ತೋರಿಸಲಾಗಿದೆ. 2009ರಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ಕ್ರಿಕೆಟ್ ಟೀಂ ಮೇಲೆ ನಡೆದ ಉಗ್ರರ ದಾಳಿಯ ಬಗ್ಗೆಯೂ ಬಯೋಪಿಕ್ ನಲ್ಲಿ ನಿರೀಕ್ಷಿಸಬಹುದು.

  ಈ ಮೊದಲು ಬಯೋಪಿಕ್ ಬಗ್ಗೆ ಮುತ್ತಯ್ಯ ಮುರಳೀಧರನ್ ಮಾತನಾಡಿ 'ವಿಜಯ್ ಸೇತುಪತಿಯಂತ ಒಬ್ಬ ಅದ್ಭುತ ನಟ ನನ್ನ ಜೀವನಚರಿತ್ರೆಯಲ್ಲಿ ನಟಿಸುತ್ತಿರುವುದು ನನಗೆ ಗೌರವಾಗಿದೆ. ನಾನು ಕಳೆದ ಕೆಲವು ತಿಂಗಳಿಂದ ಸಿನಿಮಾತಂಡದ ಜೊತೆ ಸಕ್ರಿಯವಾಗಿ ಸಹಕರಿಸುತ್ತಿದ್ದೇನೆ. ತಂಡಕ್ಕೆ ನನ್ನ ಬೆಂಬಲವನ್ನು ಮುಂದುವರೆಸುತ್ತೇನೆ' ಎಂದು ಹೇಳಿದ್ದರು.

  ಸದ್ಯ ತಮಿಳನಲ್ಲಿ ಸಿದ್ಧವಾಗುತ್ತಿರುವ ಈ ಬಯೋಪಿಕ್ ಅನ್ನು ವಿಶ್ವದ ಅನೇಕ ಭಾಷೆಯಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಸಿನಿಮಾತಂಡ ಹೊಂದಿದೆ. ಬಹುನಿರೀಕ್ಷೆಯ ಬಯೋಪಿಕ್ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Vijay Sethupathi starrer the legendary sri Lanka spinner Muttiah Muralitharan's biopic motion poser release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X