Don't Miss!
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- News
ಪಾಕಿಸ್ತಾನ: ಕರಾಚಿಯ ಮಸೀದಿಯ ಮೇಲೆ ಮತ್ತೊಂದು ದಾಳಿ- ವಿಡಿಯೋ
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Varisu Trailer : ಸೆನ್ಸಾರ್ ಮುಗಿಸಿದ 'ವಾರಿಸು' ಟ್ರೈಲರ್ ಬಿಡುಗಡೆ ದಿನಾಂಕ ಹಾಗೂ ಸಮಯ ಘೋಷಣೆ
ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆಲುಗು ಹಾಗೂ ತಮಿಳಿನಲ್ಲಿ ದೊಡ್ಡ ನಟರ ಚಿತ್ರಗಳು ಬಿಡುಗಡೆಯಾಗಿ ಪೈಪೋಟಿಗೆ ಬೀಳುವುದು ಕಾಮನ್. ಅದೇ ರೀತಿ ಈ ಸಂಕ್ರಾಂತಿಗೂ ಸಹ ತಮಿಳು ಹಾಗೂ ತೆಲುಗಿನಲ್ಲಿ ಸ್ಟಾರ್ ನಟರ ಚಿತ್ರಗಳು ಬೆಳ್ಳೆ ತೆರೆಗೆ ಅಪ್ಪಳಿಸುತ್ತಿವೆ. ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಬಿಡುಗಡೆಯಾಗಿ ಮುಖಾಮುಖಿಯಾಗಲಿವೆ. ಅತ್ತ ತೆಲುಗಿನಲ್ಲಿ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಹಾಗೂ ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಬಿಡುಗಡೆಯಾಗಲಿವೆ.
ಈ ನಾಲ್ಕೂ ಚಿತ್ರಗಳ ಪೈಕಿ ಯಾವ ಚಿತ್ರಗಳು ಗೆದ್ದು ಸಂಕ್ರಾಂತಿ ವಿನ್ನರ್ ಆಗಲಿವೆ ಎಂಬ ಲೆಕ್ಕಾಚಾರಗಳು ಆರಂಭವಾಗಿದ್ದು, ಸಾಧ್ಯವಾದಷ್ಡು ದೊಡ್ಡ ಮಟ್ಟದಲ್ಲಿ ಚಿತ್ರಗಳನ್ನು ಬಿಡುಗಡೆಗೊಳಿಸಿ ದೊಡ್ಡ ಮೊತ್ತ ದೋಚುವತ್ತ ನಿರ್ಮಾಪಕರು ಹಾಗೂ ವಿತರಕತು ಚಿತ್ತ ನೆಟ್ಟಿದ್ದಾರೆ. ಇನ್ನು ಚಿತ್ರಗಳ ಹೈಪ್ ಹೆಚ್ಚಿಸಲು ಚಿತ್ರತಂಡಗಳು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಅಜಿತ್ ನಟನೆಯ ತುನಿವು ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ.
ಇಲ್ಲಿಯವರೆಗೆ ಕೇವಲ ಹಾಡುಗಳನ್ನು ಬಿಡುಗಡೆ ಮಾಡಿ ಸದ್ದು ಮಾಡಿದ್ದ ವಾರಿಸು ಚಿತ್ರತಂಡ ಇದೀಗ ಟ್ರೈಲರ್ ಬಿಡುಗಡೆ ಮಾಡಲು ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಿದೆ. ನಾಳೆ ( ಜನವರಿ 4 ) ಸಂಜೆ ಐದು ಗಂಟೆಗೆ ಸನ್ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ವಾರಿಸು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಇನ್ನು ಚಿತ್ರಕ್ಕೆ ತೆಲುಗಿನ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳಿದ್ದು, ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ ಹಾಗೂ ಎಸ್ ಎಸ್ ಥಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ತೆಲುಗಿನ ನಿರ್ಮಾಪಕ ದಿಲ್ ರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರದ ತೆಲುಗು ಡಬ್ ವರ್ಷನ್ ವಾರಸುಡು ಚಿತ್ರವನ್ನೂ ಸಹ ದೊಡ್ಡ ಮಟ್ಟದಲ್ಲಿ ತಯಾರಿ ನಡೆಸಿರುವುದರಿಂದ ತೆಲುಗು ಟ್ರೈಲರ್ ಅನ್ನೂ ಸಹ ಇದೇ ಸಮಯಕ್ಕೆ ಬಿಡುಗಡೆ ಮಾಡಲಿದ್ದಾರೆ. ಚಿತ್ರ ಇಂದು ( ಜನವರಿ 3 ) ಸೆನ್ಸಾರ್ ಮುಗಿಸಿದ್ದು ಕ್ಲೀನ್ ಯು ಸರ್ಟಿಫಿಕೇಟ್ ಪಡೆದುಕೊಂಡಿದೆ.