'ಕೆಜಿಎಫ್' ನಾಯಕಿ ಶ್ರೀನಿಧಿ ಶೆಟ್ಟಿಯ ನಿಶ್ಚಿತಾರ್ಥ ಆಮಂತ್ರಣ ಪತ್ರಿಕೆ ವೈರಲ್
ಕೆಜಿಎಫ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಸದ್ಯ ಕೆಜಿಎಫ್-2ನಲ್ಲಿ ಶ್ರೀನಿಧಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ಬಿಟ್ಟರೆ ಶ್ರೀನಿಧಿ ಬೇರೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ.
Recommended Video
ಆದರೀಗ ಶ್ರೀನಿಧಿ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಅಂದರೆ ಶ್ರೀನಿಧಿ ಶೆಟ್ಟಿ ಮದುವೆನಾ ಅಂತ ಅಚ್ಚರಿ ಅನಿಸಿದರು ನಿಜ. ಆದರೆ ಅವರು ಮದುವೆ ಆಗುತ್ತಿರುವುದು ರಿಯಲ್ ಆಗಿ ಅಲ್ಲ ರೀಲ್ ನಲ್ಲಿ. ಹೌದು, ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾವಲ್ಲದೆ ತಮಿಳು ಚಿತ್ರರಂಗಲ್ಲಿಯೂ ಬ್ಯುಸಿಯಾಗಿದ್ದಾರೆ.
ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅಭಿನಯದ ಕೋಬ್ರಾ ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕೋಬ್ರಾ ಸಿನಿಮಾದ ಹಾಡೊಂದು ರಿಲೀಸ್ ಗೆ ಸಿದ್ಧವಾಗಿದೆ. ಈ ಹಾಡು ನಾಯಕ ಮತ್ತು ನಾಯಕಿಯ ನಿಶ್ಚಿತಾರ್ಥಕ್ಕೆ ಸಂಬಂಧಿದ್ದಾಗಿರುವುದರಿಂದ ಹಾಡಿನ ಬಿಡುಗಡೆಗೆ ವಿಶೇಷ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದೆ ಸಿನಿಮಾತಂಡ.

ತುಂಬಿ ತುಳ್ಳಾಲ್ ಸಾಹಿತ್ಯ ವಿರುವ ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಂದ್ಹಾಗೆ ಈ ಹಾಡು ಇದೆ ತಿಂಗಳು ಜೂನ್ 29ಕ್ಕೆ ರಿಲೀಸ್ ಆಗುತ್ತಿದೆ. ಸಾಕಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಲಾಕ್ ಡೌನ್ ಕಾರಣ ಚಿತ್ರೀಕರಣ ಸ್ಥಗಿತಗೊಳಿಸಿದೆ. ಮತ್ತೆ ಸದ್ಯದಲ್ಲೆ ಚಿತ್ರೀಕರಣ ಪ್ರಾರಂಭಿಸಲು ಸಿದ್ಧವಾಗಿದೆ ಸಿನಿಮಾತಂಡ.


Click it and Unblock the Notifications











