Don't Miss!
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- News
ಬೆಂಗಳೂರು ಏರ್ಪೋರ್ಟ್ ಭದ್ರತೆಗೆ 1,700 ಹೆಚ್ಚುವರಿ ಸಿಬ್ಬಂದಿ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೈಎಸ್.ಜಗನ್ ಮಾದರಿ ಅನುಸರಿಸಿ: ತಮಿಳುನಾಡು ಸಿಎಂಗೆ ವಿಶಾಲ್ ಮನವಿ
ಆಂಧ್ರ ಪ್ರದೇಶದಲ್ಲಿ ಚಿತ್ರಮಂದಿರಗಳ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಚರ್ಚೆಗಳಾಗುತ್ತಿದ್ದು, ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರು, ನಟರು ಆಂಧ್ರ ಹಾಗೂ ತೆಲಂಗಾಣ ಸಿಎಂ ಅವರುಗಳನ್ನು ಭೇಟಿ ಮಾಡಿ, ಚಿತ್ರಮಂದಿರ ಟಿಕೆಟ್ ದರ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ಚಿತ್ರಮಂದಿರಗಳ ಟಿಕೆಟ್ ದರ ಏರಿಸುವ ಬಗ್ಗೆ ಆಂಧ್ರ ಸಿಎಂ ಜಗನ್ ಏಕಾ-ಏಕಿ ನಿರ್ಣಯ ತೆಗೆದುಕೊಂಡಿಲ್ಲ ಬದಲಿಗೆ, ಒಂದೊಳ್ಳೆ ಆಲೋಚನೆಯನ್ನು ಮಾಡಿದ್ದು, ನಿರ್ಮಾಪಕರಿಗೆ, ಚಿತ್ರಮಂದಿರ ಮಾಲೀಕರಿಗೆ ನಷ್ಟವಾಗುತ್ತಿದೆ ಇಲ್ಲವೆ ಪರೀಕ್ಷಿಸಿ ಆ ನಂತರ ನಿರ್ಣಯ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ತೆಲುಗು
ಸಿನಿಮಾರಂಗಕ್ಕೆ
ಶಾಕ್
ಕೊಟ್ಟ
ಸಿಎಂ
ಜಗನ್
ಮೋಹನ್
ರೆಡ್ಡಿ
ಹೊಸ ಆನ್‌ಲೈನ್ ಪೋರ್ಟಲ್ ಒಂದನ್ನು ಸರ್ಕಾರದ ವತಿಯಿಂದಲೇ ಬಿಡುಗಡೆ ಮಾಡಲಾಗುತ್ತಿದ್ದು, ಇಡೀ ರಾಜ್ಯದಲ್ಲಿರುವ ಎಲ್ಲ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಆ ಪೋರ್ಟಲ್ ಮೂಲಕವೇ ಸಿನಿಮಾ ಟಿಕೆಟ್ ವಿತರಿಸಬೇಕಾಗುತ್ತದೆ. ಒಟ್ಟು ಎಷ್ಟು ಟಿಕೆಟ್ ಮಾರಾಟವಾಗಿದೆ ಎಂಬ ಅಂಕಿ-ಅಂಶ ಸರ್ಕಾರಕ್ಕೆ ಸುಲಭವಾಗಿ ಸಿಗುತ್ತದೆ. ಇದರಿಂದ ನಿರ್ಮಾಫಕರಿಗೆ ಲಾಭವೆಷ್ಟಾಗುತ್ತಿದೆ, ಚಿತ್ರಮಂದಿರದವರಿಗೆ ಎಷ್ಟು ಲಾಭ ಗೊತ್ತಾಗುತ್ತದೆ. ಆಗ ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಿಸಬೇಕೊ ಇಳಿಸಬೇಕೊ ನಿರ್ಧಾರ ಮಾಡಲಾಗುತ್ತಿದೆ.
ವೈ.ಎಸ್.ಜಗನ್‌ರ ಈ ಐಡಿಯಾವನ್ನು ತಮಿಳಿನ ಖ್ಯಾತ ನಟ, ನಿರ್ಮಾಪಕ ವಿಶಾಲ್ ಬಹುವಾಗಿ ಮೆಚ್ಚಿಕೊಂಡಿದ್ದು, ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಸಹ ಜಗನ್ ಮಾದರಿಯಲ್ಲಿಯೇ ಹೊಸ ಪೋರ್ಟಲ್ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ವಿಶಾಲ್, ''ಆನ್‌ಲೈನ್ ಟಿಕೆಟ್ ಬುಕಿಂಗ್ ಪೋರ್ಟಲ್ ಹೊರತಂದಿದ್ದಕ್ಕೆ ಧನ್ಯವಾದ ಜಗನ್. ತಮಿಳುನಾಡಿನಲ್ಲಿಯೂ ಇಂಥಹಾ ವ್ಯವಸ್ಥೆ ಬರಲಿ ಎಂದು ಬಹಳ ದಿನಗಳಿಂದ ನಾವು ಬಯಸಿದ್ದೆವು. ಇದೇ ಮಾದರಿಯನ್ನು ತಮಿಳುನಾಡಿನಲ್ಲಿಯೂ ತನ್ನಿ ಎಂದು ನಾನು ಸಿಎಂ ಎಂಕೆ ಸ್ಟಾಲಿನ್ ಬಳಿ ಮನವಿ ಮಾಡುತ್ತೇನೆ'' ಎಂದಿದ್ದಾರೆ ವಿಶಾಲ್.
ಜಗನ್ ತಂದಿರುವ ಈ ಮಾದರಿಯ ಪಾರದರ್ಶಕವಾಗಿದ್ದು ಸರ್ಕಾರದ ಹಾಗೂ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿದೆ. ಈ ವ್ಯವಸ್ಥೆಯನ್ನು ತಮಿಳುನಾಡಿನ ಸಿನಿಮಾ ಪ್ರೇಮಿಗಳು ಮತ್ತು ಸಿನಿಮಾ ಕರ್ಮಿಗಳು ಬೆಂಬಲಿಸಲಿದ್ದಾರೆ ಎಂದಿದ್ದಾರೆ ವಿಶಾಲ್.