For Quick Alerts
  ALLOW NOTIFICATIONS  
  For Daily Alerts

  ಹಾಸ್ಯ ನಟ ವಿವೇಕ್ ನಿಧನಕ್ಕೆ ಸಂತಾಪ ಸೂಚಿಸಿದ ಕಲಾಬಂಧುಗಳು

  |

  ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶುಕ್ರವಾರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಹಿನ್ನೆಲೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

  ಕೊರೊನಾ ಲಸಿಕೆ ವಿವೇಕ್ ಹೃದಯಾಘಾತಕ್ಕೆ ಕಾರಣವಾಯ್ತಾ? | Filmibeat Kannada

  59 ವರ್ಷದ ವಿವೇಕ್ ಸುಮಾರು ಮೂರುವರೆ ದಶಕಗಳ ಕಾಲ ತಮ್ಮ ವಿಶಿಷ್ಟ, ವಿಭಿನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ತಮಿಳಿನ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಯೂ ತೆರೆಹಂಚಿಕೊಂಡಿದ್ದರು.

  ವಿವೇಕ್ ಅವರ ಅನಿರೀಕ್ಷಿತ ನಿಧನಕ್ಕೆ ಚಿತ್ರರಂಗ ಮರುಗಿದೆ. ಸಹ ಕಲಾವಿದನ ಸಾವು ಅತೀವ ನೋವು ಉಂಟು ಮಾಡಿದ್ದು, ಹಲವು ಕಲಾವಿದರು ವಿವೇಕ್ ಅವರ ಜೊತೆಗಿನ ನೆನಪು ಮೆಲುಕು ಹಾಕಿದ್ದಾರೆ.

  ''ಇಷ್ಟು ಬೇಗ ಹೋದ ಗೆಳೆಯ...ನಿನ್ನ ಆಲೋಚನೆಗಳನ್ನು ಮರಗಳಾಗಿ ನೆಟ್ಟಿದ್ದಕ್ಕೆ ಹಾಗು ನಿಮ್ಮ ಬುದ್ದಿ ಮತ್ತು ಹಾಸ್ಯದಿಂದ ನಮ್ಮನ್ನು ರಂಜಿಸಿದ್ದಕ್ಕೆ ಧನ್ಯವಾದಗಳು. ನಿನ್ನ ಆತ್ಮಕ್ಕೆ ಶಾಂತಿ ದೊರೆಯಲಿ'' ಎಂದು ಬಹುಭಾಷೆ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

  ''ಜೀವನದುದ್ದಕ್ಕು ನಮ್ಮನ್ನು ನಗಿಸಿದ್ದೀರಿ. ಈಗ ನೀವು ಮತ್ತು ಕಣ್ಣೀರು ಕೊಟ್ಟು ಹೋಗಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸಂತಾಪದ ಮಾತುಗಳನ್ನಾಡಿ ನಟಿ ಖುಷ್ಬೂ ತಮ್ಮ ಟ್ವಿಟ್ಟರ್ ಫ್ರೊಫೈಲ್ ಫೋಟೋ ಬದಲಾಯಿಸಿದ್ದಾರೆ.

  ವಿಡಿಯೋ ಮೂಲಕ ಹಿರಿಯ ನಟ ಸತ್ಯರಾಜ್ ''ನನ್ನ ಪ್ರೀತಿಯ ಸಹೋದರ ವಿವೇಕ್ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಸ್ವೀಕರಿಸುವುದು ಬಹಳ ಕಷ್ಟವಾಗಿದೆ. ಅವರ ಕುಟುಂಬ, ಅಭಿಮಾನಿಗಳು, ಸ್ನೇಹಿತರನ್ನು ಬಿಟ್ಟು ಹೋದರು. ಏನು ಮಾತಾನಾಡುವುದು ನನಗೆ ತಿಳಿದಿಲ್ಲ'' ಎಂದು ಭಾವುಕರಾದರು.

  ತಮಿಳು ನಟ ಸೂರ್ಯ, ಕಾರ್ತಿ ಹಾಗೂ ಜ್ಯೋತಿಕಾ ಅವರು ವಿವೇಕ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

  ಮಲಯಾಳಂ ನಟ ನಿವಿನ್ ಪೌಲಿ, ನಿರ್ದೇಶಕ ಮೋಹನ್ ರಾಜ, ಸಂಗೀತ ನಿರ್ದೇಶಕ ಎಸ್ ತಮನ್, ನಟ ವಿಕ್ರಮ್ ಪ್ರಭು, ಗೌತಮ್ ಕಾರ್ತಿಕ್, ನಟಿ ಆತ್ಮಿಕಾ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

  English summary
  Tamil Comedy Actor Vivek Dies at 59: Celebrities mourn the demise of comedy actor Vivek.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X