For Quick Alerts
  ALLOW NOTIFICATIONS  
  For Daily Alerts

  ನಟಿ ನಯನತಾರಾ ಸಹಾಯಕರಿಗೆ 1 ದಿನದ ವೇತನ ಇಷ್ಟೊಂದಾ?

  |

  ಸೌತ್ ಇಂಡಸ್ಟ್ರಿಯ ಬಹುಬೇಡಿಕೆಯ ನಟಿ ನಯನತಾರ. ಸದ್ಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಆಗಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ನೆಚ್ಚಿನ ನಾಯಕಿ.

  ನಯನತಾರ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಸಹಜ. ಆದರೆ, ನಯನತಾರ ಸಹಾಯಕರಿಗೆ ಸಿಗುವ ಸಂಬಳ ಎಷ್ಟು ಎಂಬುದು ಈಗ ಟಾಕ್ ಆಫ್ ದಿ ಟೌನ್ ಆಗಿದೆ.

  'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?

  ನಯನತಾರಗೆ ಎಷ್ಟು ಜನ ಸಹಾಯಕರಿದ್ದಾರೆ? ಒಬ್ಬರಿಗೆ ಒಂದು ದಿನಕ್ಕೆ ಸಿಗುವ ಸಂಭಾವನೆ ಎಷ್ಟು? ಒಬ್ಬ ನಿರ್ಮಾಪಕ ನಯನತಾರ ನಿರ್ಮಾಪಕರಿಗೆ ಖರ್ಚು ಮಾಡುತ್ತಿರುವ ಹಣ ಎಷ್ಟು? ಮುಂದೆ ಓದಿ....

  6 ರಿಂದ 7 ಜನ ಸಹಾಯಕರು

  6 ರಿಂದ 7 ಜನ ಸಹಾಯಕರು

  ನಯನತಾರ ದೊಡ್ಡ ನಟಿ. ಹೊಸಬರ ಸಿನಿಮಾದಲ್ಲಿ ನಯನತಾರ ನಟಿಸಿದ್ರೆ, ಹೀರೋಗಳಿಗಿಂತ ಹೆಚ್ಚಿನ ಸುರಕ್ಷತೆ, ಭದ್ರತೆ, ಸಂಭಾವನೆ ಕೊಡಲಾಗುತ್ತಿದೆ. ಈ ಕುರಿತು ನಿರ್ಮಾಪಕ ಕೆ ರಾಜನ್ ಆಸಕ್ತಿಕರ ಮಾಹಿತಿ ಹೊರಹಾಕಿದ್ದಾರೆ. ನಯನತಾರ ಅವರಿಗೆ ಸುಮಾರು 6 ರಿಂದ 7 ಜನ ಸಹಾಯಕರು ಸೆಟ್ ನಲ್ಲಿ ಇರುತ್ತಾರಂತೆ.

  ದಿನಕ್ಕೆ ಸಹಾಯಕರಿಗೆ ಸಿಗುವ ಸಂಬಳ ಎಷ್ಟು?

  ದಿನಕ್ಕೆ ಸಹಾಯಕರಿಗೆ ಸಿಗುವ ಸಂಬಳ ಎಷ್ಟು?

  ನಯನತಾರ ನಟಿಸುವ ಸಿನಿಮಾ ಸೆಟ್ ನಲ್ಲಿ ಆರು ಅಥವಾ ಏಳು ಜನ ಸಹಾಯಕರು ಇರ್ತಾರೆ. ಒಬ್ಬರಿಗೆ ದಿನವೊಂದಕ್ಕೆ 7 ಸಾವಿರದಿಂದ 12 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತಿದೆಯಂತೆ. ವೇತನ ಸೇರಿ ಒಂದು ದಿನಕ್ಕೆ ಸಹಾಯಕರಿಗೆ ಒಟ್ಟು 75 ರಿಂದ 80 ಸಾವಿರ ರೂಪಾಯಿ ಖರ್ಚಾಗುತ್ತಂತೆ.

  ಗಜಿನಿ ಚಿತ್ರದ ಬಗ್ಗೆ ನಯನತಾರ ಬೇಸರ: ಕೊನೆಗೂ ಸ್ಪಷ್ಟನೆ ನೀಡಿದ ಮುರುಗದಾಸ್ಗಜಿನಿ ಚಿತ್ರದ ಬಗ್ಗೆ ನಯನತಾರ ಬೇಸರ: ಕೊನೆಗೂ ಸ್ಪಷ್ಟನೆ ನೀಡಿದ ಮುರುಗದಾಸ್

  ನಯನತಾರಾ ಎಷ್ಟು ದಿನ ಶೂಟಿಂಗ್ ಮಾಡ್ತಾರೆ

  ನಯನತಾರಾ ಎಷ್ಟು ದಿನ ಶೂಟಿಂಗ್ ಮಾಡ್ತಾರೆ

  ಒಂದು ವೇಳೆ ನಯನತಾರಾ ಪೂರ್ಣ ಪ್ರಮಾಣದ ನಾಯಕಿಯಾಗಿದ್ದರೆ, 30 ರಿಂದ 50 ದಿನಗಳ ವರೆಗೂ ಶೂಟಿಂಗ್ ಮಾಡ್ತಾರಂತೆ. 50 ದಿನ ಚಿತ್ರೀಕರಣ ಅಂದ್ರೆ ಅಷ್ಟು ದಿನವೂ ಅವರ ಸಹಾಯಕರಿಗೆ ಸಂಬಳ ನೀಡಬೇಕು. ಒಂದು ದಿನಕ್ಕೆ 70-80 ಸಾವಿರ ಅಂದ್ರೆ 50 ದಿನಕ್ಕೆ ಎಷ್ಟಾಗಬಹುದು ಎಂದು ಊಹಿಸಿ.

  ನಯನತಾರಾ-ವಿಘ್ನೇಶ್ ಶಿವನ್ ಬ್ರೇಕಪ್ ಸುದ್ದಿ ಶುದ್ಧ ಸುಳ್ಳು ಕಣ್ರೀ.!ನಯನತಾರಾ-ವಿಘ್ನೇಶ್ ಶಿವನ್ ಬ್ರೇಕಪ್ ಸುದ್ದಿ ಶುದ್ಧ ಸುಳ್ಳು ಕಣ್ರೀ.!

  ಕ್ಯಾರವ್ಯಾನ್ ಗೆ ಎಷ್ಟು ವೆಚ್ಚ

  ಕ್ಯಾರವ್ಯಾನ್ ಗೆ ಎಷ್ಟು ವೆಚ್ಚ

  ಕೆ ರಾಜನ್ ಅವರು ಹೇಳಿರುವ ಪ್ರಕಾರ ಕೇವಲ ಕ್ಯಾರಾವನ್ ಗಾಗಿ ಒಂದು ಚಿತ್ರಕ್ಕೆ ಒಂದು ಕೋಟಿ ಹಣ ಬೇಕಂತೆ. ಒಂದು ಸಿನಿಮಾಗೆ ಏಂಟು ಅಥವಾ ಒಂಭತ್ತು ಕ್ಯಾರಾವ್ಯಾನ್ ಬೇಕು. ಅಲ್ಲಿಗೆ ಒಂದು ದಿನಕ್ಕೆ 9 ಕ್ಯಾರಾನ್ಯಾನ್ ಗೆ ಒಂದು ಲಕ್ಷ ಹಣ. ಸಿನಿಮಾ ಮುಗಿಯುಷ್ಟರಲ್ಲಿ ಒಂದು ಕೋಟಿ ಆಗಿರುತ್ತೆ ಎಂದು ನಿರ್ಮಾಪಕರ ಅಳಲು ತೋಡಿಕೊಂಡಿದ್ದಾರೆ.

  ನಯನತಾರಾ ಸಂಭಾವನೆ ಎಷ್ಟು?

  ನಯನತಾರಾ ಸಂಭಾವನೆ ಎಷ್ಟು?

  ನಯನತಾರಾ ಅವರ ಸಹಾಯಕರಿಗೆ ಮಾತ್ರವೇ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿಯಲ್ಲಿ ನಿರ್ಮಾಪಕರಿದ್ದಾರೆ. ಇದನ್ನು ನಯನತಾರಾಗೆ ಪ್ರತ್ಯೇಕ ಸಂಭಾವನೆ ಇರುತ್ತೆ. ಹೆಚ್ಚು ಕಡಿಮೆ ಅಂದ್ರೆ ಸಿನಿಮಾವೊಂದಕ್ಕೆ ನಯನತಾರಾ 2-4 ಕೋಟಿ ಚಾರ್ಜ್ ಮಾಡ್ತಾರೆ ಎನ್ನಲಾಗಿದೆ.

  English summary
  What is the salaries of nayantara assistants per day. she have more than 7 assistants in shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X