twitter
    For Quick Alerts
    ALLOW NOTIFICATIONS  
    For Daily Alerts

    ಸವಾಲು ಹಾಕಿ ವಿದೇಶಿ ಕಾರು ಕೊಂಡು ವಿದೇಶಿ ಡ್ರೈವರ್ ನೇಮಿಸಿಕೊಂಡಿದ್ದ ರಜನೀಕಾಂತ್

    |

    ರಜನೀಕಾಂತ್ ಕೇವಲ ನಟರು ಮಾತ್ರವಲ್ಲ ಅನುಭವಗಳ ಮೂಟೆ ಅವರು. ಬಿಎಂಟಿಸಿ ಕಂಡಕ್ಟರ್ ಆಗಿದ್ದರಿಂದ ಹಿಡಿದು ಇಂದು ಭಾರತದ ಸೂಪರ್ ಸ್ಟಾರ್ ಆಗುವಲ್ಲಿಗೆ ಅವರು ಸವೆಸಿದ ಹಾದಿ, ಪಡೆದ ಅನುಭವ ದೊಡ್ಡದು.

    Recommended Video

    Dhruva Sarja admitted to Hospital?ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ? | Filmibeat Kannada

    ಸೂಪರ್ ಸ್ಟಾರ್ ಆಗುವ ಹಾದಿಯಲ್ಲಿ ಹಲವಾರು ಭಾರಿ ಅವಮಾನಗಳನ್ನು, ಮೂದಲಿಕೆಗಳನ್ನು ಕಂಡಿರುವ ರಜನೀಕಾಂತ್, ಅವುಗಳನ್ನೆಲ್ಲಾ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮೇಲೇರಿ ಬಂದಿದ್ದಾರೆ.

    ರಜನೀಕಾಂತ್ ಆರಂಭದ ದಿನಗಳಲ್ಲಿ ತಮಗಾದ ಅವಮಾನದ ಸಂದರ್ಭ ಹಾಗೂ ಅದನ್ನು ಸವಾಲಾಗಿ ಸ್ವೀಕರಿಸಿದ ಸಂದರ್ಭದ ಬಗ್ಗೆ ರಜನೀಕಾಂತ್ ಮಾತನಾಡಿದ್ದಾರೆ.

    ತೂತುಕುಡಿ ಘಟನೆ: ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಿದ ರಜನಿಕಾಂತ್ತೂತುಕುಡಿ ಘಟನೆ: ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಿದ ರಜನಿಕಾಂತ್

    ಈ ಘಟನೆಯನ್ನು ನನ್ನ ಗೆಳೆಯರ ಬಳಿಯೂ ಹೇಳಿಕೊಂಡಿಲ್ಲವೆಂದು ಹೇಳಿ ತಮ್ಮದೇ ಇತ್ತೀಚಿನ ಸಿನಿಮಾ ದರ್ಬಾರ್‌ನ ಆಡಿಯೋ ಲಾಂಚ್‌ನಲ್ಲಿ ರಜನೀಕಾಂತ್ ಸನ್ನಿವೇಶವನ್ನನು ವಿವರಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ನಿರ್ಮಾಪಕರೊಬ್ಬರು ಮಾಡಿದ ಅವಮಾನವನ್ನು ಸವಾಲಾಗಿ ಸ್ವೀಕರಿಸಿ ವಿದೇಶಿ ಕಾರು ಕೊಂಡು ಅದಕ್ಕೆ ವಿದೇಶಿಗನೊಬ್ಬನನ್ನು ಡ್ರೈವರ್‌ ಆಗಿ ನೇಮಿಸಿಕೊಂಡ ಘಟನೆಯನ್ನು ರಸವತ್ತಾಗಿ ವರ್ಣಿಸಿದ್ದಾರೆ ರಜನೀಕಾಂತ್.

    ಸಿನಿಮಾದಲ್ಲಿ ನಟಿಸಲು 1000 ರುಪಾಯಿ

    ಸಿನಿಮಾದಲ್ಲಿ ನಟಿಸಲು 1000 ರುಪಾಯಿ

    1977 ರ ಸಂದರ್ಭ 16 ವಯತಿನಿಲೆ ಸಿನಿಮಾದಲ್ಲಿ ರಜನೀಕಾಂತ್ ಅಭಿನಯಿಸಿದ್ದರು, ಸಿನಿಮಾ ಚೆನ್ನಾಗಿ ಓಡುತ್ತಿತ್ತು. ಆಗ ನಿರ್ಮಾಪಕರೊಬ್ಬರು ರಜನೀಕಾಂತ್ ಮನೆಗೆ ಭೇಟಿ ನೀಡಿ ತಾವು ನಮ್ಮ ಸಿನಿಮಾದಲ್ಲಿ ಪೋಷಕಪಾತ್ರ ಮಾಡಬೇಕು, ನಿಮಗೆ ಸಾವಿರ ರೂಪಾಯಿ ಕೊಡುತ್ತೇನೆ, ನಾಳೆ ನಮ್ಮ ಮ್ಯಾನೇಜರ್ ಮತ್ತು ಟೈಲರ್ ಬರುತ್ತಾರೆ ಅವರ ಬಳಿ ಹಣ ಕೊಡುತ್ತೇನೆ ಎಂದಿದ್ದರಂತೆ.

    ಹಣ ಮಾತ್ರ ಕೊಡಲಿಲ್ಲ

    ಹಣ ಮಾತ್ರ ಕೊಡಲಿಲ್ಲ

    ಅಂತೆಯೇ ಬೆಳಿಗ್ಗೆ ಪ್ರೊಡಕ್ಷನ್ ಮ್ಯಾನೇಜರ್ ಮತ್ತು ಟೈಲರ್ ಬಂದರು ಆದರೆ ಹಣ ಸಾವಿರ ರೂಪಾಯಿ ಹಣ ಕೊಡಲಿಲ್ಲ. ಪ್ರೊಡ್ಯೂಸರ್‌ ಗೆ ಫೋನ್ ಮಾಡಿದರೆ, ನಾಳೆ ಶೂಟಿಂಗ್‌ ಗೆ ಬಾ, ಮೇಕಪ್ ಹಾಕುವ ಮುನ್ನಾ ನಿನಗೆ ಹಣ ಕೊಡುತ್ತೇನೆ ಎಂದರಂತೆ. ಹಾಗಾಗಿ ರಜನೀಕಾಂತ್ ಟೈಲರ್‌ಗೆ ಅಳತೆ ನೀಡಿದರಂತೆ.

    ರಜನಿಕಾಂತ್ ಮನೆಗೆ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರುರಜನಿಕಾಂತ್ ಮನೆಗೆ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರು

    ಸೆಟ್‌ನಿಂದ ಹೊರಗೆ ಹಾಕಿದ ನಿರ್ಮಾಪಕ

    ಸೆಟ್‌ನಿಂದ ಹೊರಗೆ ಹಾಕಿದ ನಿರ್ಮಾಪಕ

    ಬೆಳಿಗ್ಗೆ ರಜನೀಕಾಂತ್‌ಗೆ ಕಾರೊಂದು ಕಳಿಸಿದರಂತೆ, ಅಲ್ಲಿ ಹೋಗಿ ನೋಡಿದರೆ ನಿರ್ಮಾಪಕರೇ ಇಲ್ಲ. ನನಗೆ ಹಣ ಕೊಟ್ಟಿಲ್ಲ ನಾನು ಮೇಕಪ್‌ ಹಾಕುವುದಿಲ್ಲ ಎಂದರಂತೆ ರಜನೀಕಾಂತ್. ಯಾರೋ ಈ ವಿಷಯ ನಿರ್ಮಾಪಕರಿಗೆ ತಿಳಿಸಿದ್ದಾರೆ. ಕೂಡಲೇ ಬಂದ ನಿರ್ಮಾಪಕ, ಇಷ್ಟೋಂದು ಕೊಬ್ಬಾ ನಿನಗೆ, ನೀನೇನು ದೊಡ್ಡ ನಟ ಎಂದುಕೊಂಡಿದ್ದೀಯಾ? ನೀನು ನನ್ನ ಸಿನಿಮಾದಲ್ಲಿ ನಟಿಸಬೇಡ, ನಿಮ್ಮಂಥಹವರು ರಸ್ತೆಗೆ ಬೀಳುತ್ತಾರೆ ಸೆಟ್‌ ಬಿಟ್ಟು ಹೊರಗೆ ನಡಿ ಎಂದರಂತೆ. ಮರಳಿ ಹೋಗಲು ಕಾರು ಸಹ ಕೊಡಲಿಲ್ಲವಂತೆ.

    ಎವಿಎಂ ಸ್ಟುಡಿಯೋದಿಂದ ನಡೆದುಕೊಂಡು ಬಂದರಂತೆ

    ಎವಿಎಂ ಸ್ಟುಡಿಯೋದಿಂದ ನಡೆದುಕೊಂಡು ಬಂದರಂತೆ

    ರಜನೀಕಾಂತ್ ಎವಿಎಂ ಸ್ಟುಡೀಯೋದಿಂದ ನಡೆದುಕೊಂಡು ವಾಪಸ್ ಬಂದರಂತೆ. ವಾಪಸ್ ಬರುವಾಗ ಸುತ್ತಾ-ಮುತ್ತಾ ಬರೀಯ ಸಿನಿಮಾ ಪೋಸ್ಟರ್‌ಗಳು, ಅವರನ್ನು ಅಣಕಿಸಿದಂತೆ ಕಾಣುತ್ತಿದ್ದವಂತೆ. ಅಂದೇ ನಿರ್ಧರಿಸಿಬಿಟ್ಟರಂತೆ, ನಾನು ವಿದೇಶಿ ಕಾರು ಕೊಂಡು ಇದೇ ಕೋಡಂಬಾಕು ರಸ್ತೆಯಲ್ಲಿಯೇ ಕಾರಿನಲ್ಲಿ ಕಾಲಿನ ಕಾಲು ಹಾಕಿಕೊಂಡು ಕೂತುಕೊಂಡು ಓಡಾಡುತ್ತೇನೆಂದು.

    ವಿದೇಶಿ ಕಾರು ಖರೀದಿಸಿದ ರಜನೀಕಾಂತ್

    ವಿದೇಶಿ ಕಾರು ಖರೀದಿಸಿದ ರಜನೀಕಾಂತ್

    ಅಂತೆಯೇ ಘಟನೆ ನಡೆದ ಎರಡೇ ವರ್ಷದಲ್ಲಿ ಇಟಾಲಿಯನ್ ಫಿಯೇಟ್ ವಿದೇಶಿ ಕಾರನ್ನು ಆ ಕಾಲದಲ್ಲೇ 4.50 ಲಕ್ಷ ಕೊಟ್ಟು ಖರೀದಿಸಿರು ರಜನೀಕಾಂತ್. ಈ ಫಾರಿನ್ ಕಾರಿಗೆ ಫಾರಿನ್ ಡ್ರೈವರ್ರೇ ಬೇಕು ಎಂದು ಹಠ ಮಾಡಿ ಫಾರಿನ್ ಡ್ರೈವರ್ ರಾಬಿನ್‌ಸನ್ ಎಂಬಾತನೊಬ್ಬನನ್ನು ಕರೆದುಕೊಂಡು ಬಂದರಂತೆ. ಸಾತನಿಗೆ ಸನ್‌ಗ್ಲಾಸ್, ಯೂನಿಫಾರ್ಮ್, ಶೂ, ಬೆಲ್ಟ್, ಟೋಪಿ ಎಲ್ಲಾ ಕೊಡಿಸಿದರಂತೆ ರಜನೀಕಾಂತ್.

    'ರಜನಿಕಾಂತ್ ಗೆ ಕೊರೊನಾ ಪಾಸಿಟಿವ್' ಎಂದ ಈ ನಟನ ವಿರುದ್ಧ ಮುಗಿಬಿದ್ದ ಅಭಿಮಾನಿಗಳು'ರಜನಿಕಾಂತ್ ಗೆ ಕೊರೊನಾ ಪಾಸಿಟಿವ್' ಎಂದ ಈ ನಟನ ವಿರುದ್ಧ ಮುಗಿಬಿದ್ದ ಅಭಿಮಾನಿಗಳು

    ಕಾರಿನಲ್ಲಿ ಎವಿಎಂ ಸ್ಟುಡಿಯೋಕ್ಕೆ ಹೋದ ರಜನೀಕಾಂತ್

    ಕಾರಿನಲ್ಲಿ ಎವಿಎಂ ಸ್ಟುಡಿಯೋಕ್ಕೆ ಹೋದ ರಜನೀಕಾಂತ್

    ಮಾರನೇ ದಿನ ಬೆಳಿಗ್ಗೆ ರಾಬಿನ್‌ಸನ್ ಅನ್ನು ಕರೆದುಕೊಂಡು ವಿದೇಶಿ ಕಾರಿನಲ್ಲಿ ಎವಿಎಂ ಸ್ಟುಡಿಯೋಕ್ಕೆ ಹೋದರಂತೆ ರಜನೀಕಾಂತ್. ತಮಗೆ ಅವಮಾನ ಮಾಡಿದ ನಿರ್ಮಾಪಕ ಕಾರು ನಿಲ್ಲಿಸಿದ್ದ ಜಾಗದಲ್ಲಿಯೇ ಕಾರು ನಿಲ್ಲಿಸಿ, 555 ಸಿಗರೇಟು ಹೊತ್ತಿಸಿಕೊಂಡು ಕಾರು ಪಕ್ಕ ನಿಂತರಂತೆ ರಜನೀಕಾಂತ್. ಸತತ ಎರಡು ಸಿಗರೇಟು ಹೊತ್ತಿಸಿದ ರಜನೀಕಾಂತ್‌ ತೃಪ್ತಿಯಾಗುವವರೆಗೂ ಎವಿಎಂ ಅಲ್ಲಿಯೇ ಇದ್ದರಂತೆ.

    ಎಲ್ಲರೂ ರಾಬಿನ್‌ಸನ್ ಅನ್ನೇ ನೋಡುತ್ತಿದ್ದರಂತೆ

    ಎಲ್ಲರೂ ರಾಬಿನ್‌ಸನ್ ಅನ್ನೇ ನೋಡುತ್ತಿದ್ದರಂತೆ

    ನಂತರ ಅವರ ವಿದೇಶಿ ಕಾರಿಗಿಂತ ಹೆಚ್ಚು ಅವರ ವಿದೇಶಿ ಡ್ರೈವರ್ ರಾಬಿನ್‌ಸನ್ ಫೇಮಸ್ ಆಗಿದ್ದರಂತೆ. ಮೊದಲ ಕೆಲವು ದಿನ ಎಲ್ಲರೂ ರಾಬಿನ್‌ಸನ್ ಅನ್ನೇ ಹೆಚ್ಚಾಗಿ ನೋಡುತ್ತಿದ್ದರಂತೆ. ಕೊನೆಗೆ ರಜನೀಕಾಂತ್, ರಾಬಿನ್‌ಸನ್‌ ಗೆ ಯೂನಿಫಾರಂ, ಟೋಪಿ, ಮಿಲಿಟರಿ ಸ್ಟೈಲ್ ಎಲ್ಲಾ ಬೇಡವೆಂದು ಹೇಳಿದರಂತೆ. ಈ ವಿಷಯವನ್ನು ರಜನೀಕಾಂತ್ ದರ್ಬಾರ್ ಸಿನಿಮಾ ಆಡಿಯೋ ಲಾಂಚ್ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

    English summary
    Rajinikant shared a incident of his life. He bought a foreign car and hired a foreign driver.
    Saturday, July 4, 2020, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X