Don't Miss!
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅದೃಷ್ಟದ ದಿನ
- News
ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್ಬಿಐ
- Sports
"ಇಂಥಾ ಆಟಗಾರರು, ಇಂಥಾ ಅಭಿಮಾನಿಗಳಿಂದಾಗಿ ಹೆಮ್ಮೆಯಾಗುತ್ತಿದೆ": ಸೋತ ಬಳಿಕ ಆರ್ಸಿಬಿ ನಾಯಕನ ಭಾವುಕ ಮಾತು!
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Automobiles
ಹೊಸ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ವಿಶೇಷತೆಗಳು
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Technology
ಸ್ಯಾಮ್ಸಂಗ್ನಿಂದ ಮತ್ತೆ ನೂತನ ಸ್ಮಾರ್ಟ್ಫೋನ್ ಅನಾವರಣ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಮಿಳು-ತೆಲುಗು ಚಿತ್ರರಂಗದ ಮಧ್ಯೆ ಕಿರಿಕ್: ಬೆಂಕಿ ಹಚ್ಚಿದ್ದು ನಟಿ ರೋಜಾ ಪತಿ
ದಕ್ಷಿಣ ಭಾರತ ಚಿತ್ರರಂಗ ಒಟ್ಟಿಗೆ ಬಾಲಿವುಡ್ ಮೇಲೆ ದಾಂಗುಡಿ ಇಡುತ್ತಿರುವ ಈ ಸಮಯದಲ್ಲಿಯೇ ತೆಲುಗು ಹಾಗೂ ತಮಿಳು ಚಿತ್ರರಂಗದ ಮಧ್ಯೆ ಸಣ್ಣ ಬಿರುಕೊಂದು ಮೂಡಲು ಆರಂಭವಾದಂತಿದೆ.
ಇದೀಗ ತೆಲುಗು ಹಾಗೂ ತಮಿಳು ಚಿತ್ರರಂಗದ ಮಧ್ಯೆ ಸಣ್ಣ ಬಿರುಕೊಂದು ಆರಂಭವಾಗುವ ಲಕ್ಷಣವೊಂದು ಕಾಣುತ್ತಿದೆ. ಸಹೋದರರಂತಿದ್ದ ಎರಡು ಚಿತ್ರರಂಗದ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ನಟಿ, ಹಾಲಿ ಸಚಿವೆ ರೋಜಾ ಪತಿ ಆರ್‌ಕೆ ಸೆಲ್ವಮಣಿ.
ಬಾಲಿವುಡ್ಡಿಗರು, ದಕ್ಷಿಣ ಭಾರತ ಚಿತ್ರರಂಗದ ಮೇಲೆ ಅಸಹನೆ ಹೊರಹಾಕುತ್ತಿರುವ ಮಾದರಿಯಲ್ಲಿಯೇ ನಿರ್ದೇಶಕ ಆರ್‌ಕೆ ಸೆಲ್ವಮಣಿ ಅಸಹನೆ ಹೊರಹಾಕಿದ್ದಾರೆ. ತಮಿಳು ಚಿತ್ರರಂಗದವರು ತೆಲುಗು ರಾಜ್ಯಗಳಿಗೆ ಬರಬಾರದು ಎಂದಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕೆ ಹೈದರಾಬಾದ್ ಪ್ರಶಸ್ತವಾದ ಸ್ಥಳ. ರಾಮೋಜಿ ಫಿಲಂ ಸಿಟಿ, ಅನ್ನಪೂರ್ಣ ಸ್ಟುಡಿಯೋ, ಅಲ್ಯುಮಿನಿಯಂ ಫ್ಯಾಕ್ಟರಿ ಹೀಗೆ ಸೇರಿದಂತೆ ಹಲವು ಪ್ರಶಸ್ತವಾದ ಜಾಗಗಳು ಅಲ್ಲಿವೆ, ಹಾಗಾಗಿ ದಕ್ಷಿಣ ಭಾರತದ ಬಹುತೇಕ ಚಿತ್ರರಂಗ ಹೈದರಾಬಾದ್‌ನಲ್ಲಿಯೇ ಚಿತ್ರೀಕರಣ ಮಾಡುವುದು ಹೆಚ್ಚು. ಕೆಲವು ಚಿತ್ರರಂಗದವರು ಹೊರಾಂಗಣ ಚಿತ್ರೀಕರಣಕ್ಕೂ ಆಂಧ್ರ-ತೆಲಂಗಾಣವನ್ನೇ ನೆಚ್ಚಿಕೊಳ್ಳುತ್ತಾರೆ. ಇದು ನಿರ್ದೇಶಕ ಆರ್‌ಕೆ ಸೆಲ್ವಮಣಿಗೆ ಸಹಿಸಲಾಗಿಲಿಲ್ಲ.
ತಮಿಳುನಾಡಿಗೆ ಹೋಲಿಸಿದರೆ ನಮ್ಮಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಪರವಾನಗಿ ಬೇಗ ದೊರಕುತ್ತದೆ. ನಮ್ಮಲ್ಲಿ ಕೆಲಸ ಮಾಡುವ ಮಂದಿ ಹೆಚ್ಚು ಜನ ಇದ್ದಾರೆ. ಕಡಿಮೆ ಮೊತ್ತಕ್ಕೆ ಇಲ್ಲಿ ಕಾರ್ಮಿಕರು ಸಿಗುತ್ತಾರೆ. ಒಳ್ಳೆಯ ಲೊಕೇಶನ್‌ಗಳು ಇಲ್ಲಿವೆ, ಚಿತ್ರೀಕರಣ ಮಾಡುವ ಖರ್ಚು ಇಲ್ಲಿ ಕಡಿಮೆ ಹಾಗಾಗಿ ತಮ್ಮ ಕತೆಗೆ ಸೂಕ್ತವಾಗಿ ಒದಗುವ ಜಾಗಗಳನ್ನು ಹುಡುಕಿಕೊಂಡು ಹೈದರಾಬಾದ್, ವೈಜಾಗ್ ಇನ್ನೂ ಅನೇಕ ಕಡೆಗಳಲ್ಲಿ ತಮಿಳು ಚಿತರರಂಗದವರು ಶೂಟಿಂಗ್ ಮಾಡುತ್ತಿದ್ದಾರೆ. ರಜನೀಕಾಂತ್, ವಿಜಯ್ ಸಿನಿಮಾಗಳ ಚಿತ್ರೀಕರಣಗಳು ಹೈದರಾಬಾದ್‌ನಲ್ಲಿ ನಡೆದಿವೆ'' ಎಂದಿದ್ದಾರೆ ಆರ್‌ಕೆ ಸೆಲ್ವಮಣಿ.

ತಮಿಳು ನಟರ ಚಿತ್ರೀಕರಣ ಹೈದರಾಬಾದ್‌ನಲ್ಲಿ!
ಧನುಶ್, ಶಿವಕಾರ್ತಿಕೇಯ, ಅಜಿತ್, ವಿಜಯ್ ಸಿನಿಮಾಗಳ ಚಿತ್ರೀಕರಣ ಇಲ್ಲಿಯೇ ನಡೆಯುತ್ತಿವೆ. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿರುವ ನಿರ್ದೇಶಕ, ದಕ್ಷಿಣ ಭಾರತ ಸಿನಿಮಾ ಫೆಡರೇಶನ್ ಅಧ್ಯಕ್ಷರೂ ಆಗಿರುವ ಆರ್‌ಕೆ ಸೆಲ್ವಮಣಿ, ತಮಿಳುನಾಡಿನವರು ಆಂಧ್ರ-ತೆಲಂಗಾಣಗಳಲ್ಲಿ ಏಕೆ ಚಿತ್ರೀಕರಣ ಮಾಡುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಚೆನ್ನೈನಲ್ಲಿ ಏಕೆ ಚಿತ್ರೀಕರಣ ಮಾಡುತ್ತಿಲ್ಲ: ಸೆಲ್ವಮಣಿ ಪ್ರಶ್ನೆ
ತಮಿಳು ಸಿನಿಮಾಗಳನ್ನು ಚೆನ್ನೈನಲ್ಲಿ ಏಕೆ ಚಿತ್ರೀಕರಣ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿರುವ ಅವರು, ತಮಿಳು ಸಿನಿಮಾಗಳನ್ನೇ ನಂಬಿಕೊಂಡು ಸಾವಿರಾರು ಸಿನಿಮಾ ಕಾರ್ಮಿಕರು ಬದುಕುತ್ತಿದ್ದಾರೆ. ಹೀಗಿದ್ದಾಗ ತಮಿಳು ಚಿತ್ರರಂಗದವರು ಚೆನ್ನೈ ಬಿಟ್ಟು ಆಂಧ್ರ-ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವುದೇಕೆ? ಇದರಿಂದ ಸಿನಿಮಾ ರಂಗವನ್ನೇ ನಂಬಿಕೊಂಡಿರುವ ಸಾವಿರಾರು ತಮಿಳು ಸಿನಿಮಾ ಕಾರ್ಮಿಕರ ಬದುಕು ರಸ್ತೆಗೆ ಬರುತ್ತದೆ ಎಂದಿದ್ದಾರೆ.

''ಸಣ್ಣ-ಪುಟ್ಟ ದೃಶ್ಯಗಳಿಗೂ ಹೈದಾರಾಬಾದ್‌ಗೆ ಹೋಗುವುದು ಸರಿಯಲ್ಲ''
ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣಕ್ಕೂ ಹೈದರಾಬಾದ್‌ಗೆ ಹೋಗುವುದು ಸರಿಯಲ್ಲ. ಇಲ್ಲಿ ನಿಮ್ಮನ್ನೇ ನಂಬಿಕೊಂಡ ಕುಟುಂಬಗಳು ಇವೆ. ಇನ್ನು ಮುಂದೆ ತಮಿಳಿನ ಸಿನಿಮಾಗಳ ಚಿತ್ರೀಕರಣ ತಮಿಳುನಾಡಿನಲ್ಲಿಯೇ ನಡೆಯಬೇಕು ಎಂದು ಒತ್ತಾಯಿಸಿರುವ ಸೆಲ್ವಮಣಿ, ಇದಕ್ಕಾಗಿ ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘಕ್ಕೆ ಆಗ್ರಹ ಪತ್ರ ಕಳಿಸುವುದಾಗಿ ಹೇಳಿದ್ದಾರೆ.

ಅಜಿತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸೆಲ್ವಮಣಿ
ಈ ಬಗ್ಗೆ ತಮಿಳಿನ ಹೀರೋಗಳ ಜೊತೆ ಮಾತುಕತೆ ನಡೆಸಿರುವುದಾಗಿ ಹೇಳಿರುವ ಸೆಲ್ವಮಣಿ, ವಿಜಯ್ ಬಗ್ಗೆ ಈ ಚರ್ಚಿಸಿದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ವಿಷಯವಾಗಿ ಅಜಿತ್ ಜೊತೆ ಮಾತನಾಡಲು ಯತ್ನಿಸುತ್ತಿದ್ದೇವೆ ಆದರೆ ಅವರ ಹೊಸ ಸಿನಿಮಾದ ಚಿತ್ರೀಕರಣ ಈಗಾಗಲೇ ಹೈದರಾಬಾದ್‌ನಲ್ಲಿ ಪ್ರಾರಂಭವಾಗಿದೆ ಹಾಗಾಗಿ ಅವರು ಮಾತಿಗೆ ಸಿಕ್ಕಿಲ್ಲ. ಅವರು ಈಗಲೇ ಚಿತ್ರೀಕರಣ ಬಂದ್ ಮಾಡಿ ಚೆನ್ನೈಗೆ ಬರಬೇಕು ಎಂದಿದ್ದಾರೆ ಸೆಲ್ವಮಣಿ.